Breaking News

ಬೈಕಿಗೆ 210 ರೂಪಾಯಿ ಪೆಟ್ರೋಲ್ ಹಾಕಲು ಹೇಳಿ ಬರೇ 10 ರೂ. ಗೂಗಲ್ ಪೇ ಮಾಡಿ ಸವಾರ ಪರಾರಿ

Share News

ಸುಳ್ಯ : ತನ್ನ ಬೈಕಿಗೆ ಪೆಟ್ರೋಲ್ ಹಾಕಲು ಬಂದ ಸವಾರನೊಬ್ಬ 210 ರೂಪಾಯಿ ಪೆಟ್ರೋಲ್ ಹಾಕಲು ಹೇಳಿ ಬರೇ 10 ರೂ. ಗೂಗಲ್ ಪೇ ಮಾಡಿ ಸವಾರ ಪರಾರಿಯಾದ ಘಟನೆ ದಕ್ಷಿಣ ಕನ್ನಡದ ಸುಳ್ಯದಲ್ಲಿ ನಡೆದಿದೆ.

ಇದನ್ನೂ ಓದಿ: ಮಂಗಳೂರು: ಖ್ಯಾತ ಸಾಹಿತಿ ಜಾನಪದ ತಜ್ಞ ಅಮೃತ ಸೋಮೇಶ್ವರ ಇನ್ನಿಲ್ಲ.!

ಜಾಲ್ಸೂರಿನ ಪೆಟ್ರೋಲ್ ಬಂಕ್ ನಲ್ಲಿ ಜನವರಿ 5 ರಂದು ರಾತ್ರಿ ಈ ಘಟನೆ ಸಂಭವಿಸಿದೆ. ಬೈಕಿಗೆ ಪೆಟ್ರೋಲ್ ಹಾಕಲು ಬಂದ ವ್ಯಕ್ತಿ ಪಂಪ್ ಸಿಬ್ಬಂದಿಯಲ್ಲಿ 210 ರೂ. ಪೆಟ್ರೋಲ್ ಹಾಕಲು ಹೇಳಿದ್ದಾನೆ. ಪಂಪ್ ಸಿಬ್ಬಂದಿ 210 ರೂಪಾಯಿಯ ಪೆಟ್ರೋಲ್ ಹಾಕಿದಾಗ ಆ ವ್ಯಕ್ತಿ ತಾನು ಹಣವನ್ನು ಸ್ಕ್ಯಾನ್ ಮಾಡಿ ಗೂಗಲ್ ಪೇ ಮಾಡುವುದಾಗಿ ತಿಳಿಸಿದ ಮೇರೆಗೆ ಪಂಪ್ ಸಿಬ್ಬಂದಿ ಸ್ಕ್ಯಾನರ್ ತೋರಿಸಿದ್ದಾರೆ. ಆ ವ್ಯಕ್ತಿ ಬರೇ 10 ರೂ. ಪೇ.ಮಾಡಿದ್ದು, ಆ ವ್ಯಕ್ತಿ ಹಣ ವರ್ಗಾವಣೆ ಮಾಡಿದ್ದು ಸಕ್ಸಸ್ ಎಂದು ಬಂದದ್ದನ್ನು ತನ್ನ ಮೊಬೈಲ್ ನಲ್ಲಿ ಪಂಪ್ ಸಿಬ್ಬಂದಿಗೆ ತೋರಿಸಿದ್ದು ಹಣ ಬಂದಿರಬಹುದೆಂದು ಪಂಪ್ ಸಿಬ್ಬಂದಿ ಭಾವಿಸಿದ್ದಾರೆ. ಆದ್ರೆ ಪರಿಶೀಲಿಸಿದಾಗ ಕೇವಲ 10 ರೂ. ಮಾತ್ರ ಬಂದಿದ್ದು 200 ರೂಪಾಯಿ ಪಂಗನಾಮದೊಂದಿಗೆ ಸವಾರ ಕಾಲಿತ್ತಿದ್ದಾನೆ.

ಇದನ್ನೂ ಓದಿ: ಟಿ20 ವಿಶ್ವಕಪ್​ ಸಂಪೂರ್ಣ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಮಾಹಿತಿ


Share News

Leave a Reply

Your email address will not be published. Required fields are marked *