Breaking News

ಹಲವಾರು ವರ್ಷಗಳ ನಂತರ ಸದನದಲ್ಲಿ ಮತ್ತೆ ಮಾರ್ದನಿಸಿದ ಕೊಡಗಿನ ದ್ವನಿ. ಕೊಡಗಿನ ಸಮಸ್ಯೆಗಳನ್ನು ಸಮರ್ಥವಾಗಿ ಪ್ರತಿನಿಧಿಸಿದ ಡಾ. ಮಂತರ್ ಗೌಡ, ಪೊನ್ನಣ್ಣ!

Share News

ಬೆಳಗಾವಿ: ಹಲವಾರು ವರ್ಷಗಳ ನಂತರ ಕೊಡಗಿನ ಸಮಸ್ಯೆಗಳ ಬಗ್ಗೆ ಈಗ ವಿಧಾನಸೌಧದಲ್ಲಿ ಧ್ವನಿ ಕೇಳಿ ಬರುತ್ತಿದೆ. ಈ ಮೊದಲು ಅಷ್ಟಾಗಿ ಕೇಳಿ ಬರದಿದ್ದ ಧ್ವನಿ ಇತ್ತೀಚಿನ ಎರಡು ಕಲಾಪದಲ್ಲಿ ಕೇಳಿಬಂದಿದೆ. ಈ ಬಾರಿ ಅಂತೂ ಕೊಡಗಿನ ಹಲವಾರು ಸಮಸ್ಯೆಗಳ ಕುರಿತು ಶಾಸಕರಾದ ಡಾ. ಮಂತರ್ ಗೌಡ ಹಾಗೂ ಪೊನ್ನಣ್ಣ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: ಪುತ್ತೂರು: ನೇಣು ಬಿಗಿದು ಯುವ ವಿಜ್ಞಾನಿ ಭರತ್‌ ಕಲ್ಲರ್ಪೆ ಆತ್ಮಹತ್ಯೆ!

ಗುಡ್ಡಗಾಡು ಪ್ರದೇಶವನ್ನು ಹೊಂದಿರುವ ಕೊಡಗು ಹಲವಾರು ಸಮಸ್ಯೆಗಳನ್ನು ಹೊಂದಿಕೊಂಡಿದೆ. ಈ ಮನೆಯಲ್ಲಿ ಕೊಡಗಿನ ಸಮಸ್ಯೆಗಳ ಬಗ್ಗೆ ಗಟ್ಟಿ ದ್ವನಿಯಲ್ಲಿ ಶಾಸಕರುಗಳಾದ ಡಾ. ಮಂತರ್ ಗೌಡ ಹಾಗೂ ಪೊನ್ನನ್ನ ಸಮಸ್ಯೆಯನ್ನು ಸರಕಾರದ ಮುಂದೆ ಇಟ್ಟಿದ್ದಾರೆ. ಕೊಡಗಿನ ಕಾಫಿ ಬೆಳಗಾರರ ಸಮಸ್ಯೆ, ಆರೋಗ್ಯ ಕ್ಷೇತ್ರದ ಸಮಸ್ಯೆ ಬಗ್ಗೆ ಮಂಥರ್ ಗೌಡ ಬಹಳಷ್ಟು ವಿಸ್ತಾರವಾಗಿ ಮಾತನಾಡಿದ್ದಾರೆ. ಇನ್ನೊಂದು ಕಡೆಯಲ್ಲಿ ಪೊಣ್ಣನ್ನ ರೆವಿನ್ಯೂ ವಿಷಯಗಳಿಗೆ ಸಂಬಂಧಪಟ್ಟಂತೆ ಕೊಡಗಿನ ಹಲವಾರು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದ್ದಾರೆ.

ಇದನ್ನೂ ಓದಿ: ಉಳ್ಳಾಲ : ಶಾಲೆ ಸಮೀಪ ಮದ್ದು ಮಧ್ಯ ಸೇವನೆ ಪ್ರಶ್ನಿಸಿದಕ್ಕೆ ಚೂರಿಯಿಂದ ಇರಿದು ಯುವಕನ ಹತ್ಯೆ.!

ಅಲ್ಲದೆ ಎರಡು ಶಾಸಕರುಗಳು ಮಲೆನಾಡು ಶಾಸಕರ ನಿಯೋಗದೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಹಲವಾರು ಸಮಸ್ಯೆಯನ್ನು ವಿವರಿಸಿದ್ದಾರೆ. ಈ ಮೂಲಕ ಹಲವಾರು ವರ್ಷಗಳ ನಂತರ ಕೊಡಗಿನ ಜನಪರ ದ್ವನಿ ವಿಧಾನಸೌಧದಲ್ಲಿ ಮೊಳಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಿದ್ದಾರೆ.

WATCH VIDEO ON YOUTUBE: ಸಿದ್ದಕಟ್ಟೆಯ ಪುಚ್ಛಮಗುರೂರಿನಲ್ಲಿ ಸೆರೆಯಾಗಿದೆ ಚಿರತೆ!


Share News

Leave a Reply

Your email address will not be published. Required fields are marked *