Breaking News

ಅಡುಗೆಯಲ್ಲಿ ಹೆಚ್ಚು ಉಪ್ಪು ಬಳಸುವುದರಿಂದ ಆಗುವ ಪರಿಣಾಮಗಳೇನು

Share News

ನಮ್ಮ ದೇಹವು ಎರಡು ಪ್ರಮುಖ ಅಂಶಗಳನ್ನು ಅವಲಂಬಿಸಿ ಕಾರ್ಯನಿರ್ವಹಿಸುತ್ತದೆ, ಅದು ಒದಗಿಸುವ ಆಹಾರ (ಇಂಧನವಾಗಿ ಕಾರ್ಯನಿರ್ವಹಿಸುತ್ತದೆ), ಮತ್ತು ಅದು ಒಡ್ಡಿಕೊಳ್ಳುವ ಪರಿಸರ (ಅದು ಉಸಿರಾಡುವ ಗಾಳಿ). ಇವೆರಡರ ಹೊರತಾಗಿ ಹಲವು ಅಂಶಗಳಿದ್ದರೂ ಮೇಲೆ ಹೇಳಿದ ಇಬ್ಬರ ಪಾತ್ರ ಬಹಳ ಮಹತ್ವದ್ದು. ದೇಹಕ್ಕೆ ಒದಗಿಸುವ ಆಹಾರವು ಸರಿಯಾಗಿ ಕಾರ್ಯನಿರ್ವಹಿಸಲು ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳಿಂದ ತುಂಬಿರಬೇಕು. ಇಂದು ನಾವು ಬಹುತೇಕ ಎಲ್ಲಾ ಆಹಾರಗಳಲ್ಲಿ ಒಳಗೊಂಡಿರುವ ಮುಖ್ಯ ಪದಾರ್ಥಗಳ ಬಗ್ಗೆ ಮಾತನಾಡುತ್ತೇವೆ. ಯಾವುದೇ ಊಹೆಗಳು? ಹೌದು, ನಾವು ಉಪ್ಪಿನ ಬಗ್ಗೆ ಮಾತನಾಡುತ್ತಿದ್ದೇವೆ. ಉಪ್ಪು ರುಚಿಯನ್ನು ಸೇರಿಸುತ್ತದೆ. ಮತ್ತು, ಹೌದು, ಇದು ಬಹುತೇಕ ಎಲ್ಲೆಡೆ ತೋರುತ್ತದೆ. ಆದರೆ ಉಪ್ಪಿನ ಅತಿಯಾದ ಸೇವನೆಯು ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಹೆಚ್ಚು ಉಪ್ಪನ್ನು ಸೇವಿಸುವುದರಿಂದ ಅಲ್ಪಾವಧಿಯಲ್ಲಿ ಮತ್ತು ದೀರ್ಘಾವಧಿಯಲ್ಲಿ ಅಹಿತಕರ ಪರಿಣಾಮಗಳನ್ನು ಉಂಟುಮಾಡಬಹುದು.

ಉಪ್ಪಿಗಿಂತ  ರುಚಿ ಬೇರೆ ಇಲ್ಲ ಎಂಬ ನಾಣ್ನುಡಿ ಎಲ್ಲರಿಗೂ ಗೊತ್ತೇ ಇದೆ, ಕಾರಣ ಉಪ್ಪಿಲ್ಲದೇ ಊಟ ರುಚಿಸುವುದೇ ಇಲ್ಲ. ಆದರೆ ಹಲವು ಬಾರಿ ಅವಶ್ಯಕತೆಗಿಂತ ಹೆಚ್ಚು ಉಪ್ಪು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ. ಇದರಿಂದ ನಿಮಗೆ ಅಧಿಕ ರಕ್ತದೊತ್ತಡ ಸೇರಿದಂತೆ  ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು  ಎದುರಾಗುವ ಸಾಧ್ಯತೆ ಇದೆ. ಹಲವು ಬಾರಿ ನಮಗೆ ನಾವು ಅಗತ್ಯಕ್ಕಿಂತ ಹೆಚ್ಚು ಉಪ್ಪನ್ನು ಸೇವಿಸುತ್ತಿದ್ದೇವೆ ಎಂಬುದು ತಿಳಿದಿರುವುದಿಲ್ಲ ಮತ್ತು ಅದರ ಸೇವನೆಯ ಬಗ್ಗೆ ನಾವು ಗಮನ ಹರಿಸುವುದಿಲ್ಲ. ನೀವು ಹೆಚ್ಚು ಉಪ್ಪು ತಿನ್ನುತ್ತಿದ್ದೀರೋ ಇಲ್ಲವೋ ಎಂಬುದನ್ನು ಅರ್ಥಮಾಡಿಕೊಳ್ಳಲು, ನಿಮ್ಮ ದೇಹದೊಳಗಿನ ಕೆಲವು ಲಕ್ಷಣಗಳನ್ನು ನೀವು ಗಮನಿಸಬೇಕು.

ಮನೆಯಲ್ಲಿ ಯಾವುದೇ ಬಗೆಯ ಅಡುಗೆ ಮಾಡಿದರೂ, ಉಪ್ಪಿಲ್ಲದೆ ಅದು ಪೂರ್ತಿಯಾಗದು. ಸಿಹಿ ಪದಾರ್ಥಗಳನ್ನು ಹೊರತು ಪಡಿಸಿ ಉಳಿದ, ಇತರ ಬಹುತೇಕ ಎಲ್ಲಾ ಆಹಾರ ಪದಾರ್ಥಗಳಿಗೂ ಕೂಡ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸುತ್ತೇವೆ. ಇದು ಅಡುಗೆಯ ರುಚಿ ಹೆಚ್ಚಿಸುವುದರ ಜೊತೆಗೆ, ನಮ್ಮ ಆರೋಗ್ಯಕ್ಕೆ ಬೇಕಾಗುವ ಅಯೋಡಿನ್ ಎನ್ನುವ ಖನಿಜಾಂಶವನ್ನು ಕೂಡ ಒದಗಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಉಪ್ಪಿಲ್ಲದ ಅಡುಗೆಯನ್ನು ಊಹಿಸಲೂ ಸಾಧ್ಯವಿಲ್ಲ

ಆಹಾರಕ್ಕೆ ರುಚಿ ನೀಡುವುದರ ಜೊತೆಗೆ, ಉಪ್ಪನ್ನು ಆಹಾರ ಸಂಸ್ಕರಣೆಗಾಗಿ ಕೂಡ ಬಳಸಲಾಗುತ್ತದೆ. ಇದು ಶೇ. 60 ರಷ್ಟು ಕ್ಲೋರೈಡ್ ಮತ್ತು ಶೇ.40 ರಷ್ಟು ಸೋಡಿಯಂ ಅನ್ನು ಹೊಂದಿರುತ್ತದೆ. ತರಕಾರಿಗಳು, ಹಣ್ಣುಗಳು, ಮಾಂಸಗಳು, ಧಾನ್ಯಗಳು ಮತ್ತು ಡೈರಿ ಉತ್ಪನ್ನಗಳಂತಹ ಬಹುತೇಕ ಎಲ್ಲಾ ಸಂಸ್ಕರಿಸದ ವಸ್ತುಗಳು ಸಣ್ಣ ಪ್ರಮಾಣದ ಸೋಡಿಯಂ ಅನ್ನು ಹೊಂದಿರುತ್ತವೆ. ಉಪ್ಪನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ, ಆದರೆ ಅದನ್ನು ಅತಿಯಾಗಿ ತಿನ್ನುವುದು ಹಾನಿಕಾರಕವಾಗಿದೆ.

ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ(PHFI) ನಡೆಸಿದ ಅಧ್ಯಯನವು, ವಯಸ್ಕ ಭಾರತೀಯರಿಗೆ ಹೆಚ್ಚು ಉಪ್ಪು ತಿನ್ನುವ ಅಭ್ಯಾಸವಿದೆ ಎಂದು ಕಂಡುಹಿಡಿದಿದೆ. ಇದು WHO ಸೆಟ್ ಮಾಡಿದ ಪ್ರಮಾಣಕ್ಕಿಂತ ಹೆಚ್ಚು. ದೆಹಲಿ ಮತ್ತು ಹರಿಯಾಣದಲ್ಲಿ ಉಪ್ಪಿನ ಸೇವನೆಯು ದಿನಕ್ಕೆ 9.5 ಗ್ರಾಂ ಮತ್ತು ಆಂಧ್ರಪ್ರದೇಶದಲ್ಲಿ ದಿನಕ್ಕೆ 10.4 ಗ್ರಾಂಗಳಷ್ಟಿತ್ತು ಎಂದು ಅಧ್ಯಯನ ತಿಳಿಸಿದೆ.

ಆಹಾರದಲ್ಲಿ ಹೆಚ್ಚು ಉಪ್ಪು ತೆಗೆದುಕೊಳ್ಳುವುದರಿಂದ ರಕ್ತದೊತ್ತಡದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಮತ್ತು ಕಾಲಾನಂತರದಲ್ಲಿ ಇದು ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಆಹಾರದಲ್ಲಿ ಉಪ್ಪನ್ನು ನಿರ್ಬಂಧಿಸುವುದು ಹೃದಯರಕ್ತನಾಳ ಸಂಬಂಧಿತ ರೋಗವನ್ನು 25 ಪ್ರತಿಶತದಷ್ಟು ಕಡಿಮೆಗೊಳಿಸುತ್ತದೆ ಮತ್ತು ಹೃದಯಾಘಾತದಿಂದ ಸಾಯುವಿಕೆಯ ಅಪಾಯವನ್ನು 20 ಪ್ರತಿಶತದಷ್ಟು ಕಡಿಮೆ ಮಾಡಬಹುದು ಎನ್ನಲಾಗಿದೆ.

ಹಸಿ ಆಲೂಗಡ್ಡೆ

ಈ ಆಲೂಗೆಡ್ಡೆಯಿಂದ ನೀವು ಆಹಾರದಲ್ಲಿ ಹೆಚ್ಚಾದ ಉಪ್ಪನ್ನ ಸರಿ ಮಾಡಬಹುದು ಎಂದು ಹಲವರು ಹೇಳಿರುವುದನ್ನ ಕೇಳಿರಬಹುದು. ಹೌದು, ಇದು ನಿಜಕ್ಕೂ ನಿಮಗೆ ಸಹಾಯ ಮಾಡುತ್ತದೆ. ಆಲೂಗೆಡ್ಡೆಯನ್ನು ನೀವು ಬೇಯಿಸುವ ಅಗತ್ಯವಿಲ್ಲ. ಈ ಆಲೂಗೆಡ್ಡೆಯನ್ನು 2 ರಿಂದ 3 ಹೋಳುಗಳಾಗಿ ಕತ್ತರಿಸಿ. ಇದನ್ನು ಯಾವ ಆಹಾರದಲ್ಲಿ ಉಪ್ಪು ಹೆಚ್ಚಿದೆಯೋ, ಆ  ಆಹಾರಕ್ಕೆ ಅದನ್ನು ಹಾಕಿ. ಆದರೆ ಆಲೂಗೆಡ್ಡೆ ಹಾಕುವಾಗ ಚೆನ್ನಾಗಿ ತೊಳೆದು ಸಿಪ್ಪೆ ಸುಲಿದು ಹಾಕಿ.  ಇದು ನಿಮ್ಮ ಆಹಾರದಲ್ಲಿರುವ ಹೆಚ್ಚುವರಿ ಉಪ್ಪನ್ನು ಹೀರಿಕೊಳ್ಳುತ್ತದೆ. ಹಾಗೆಯೇ, ಈ ಆಲೂಗೆಡ್ಡೆಯನ್ನು ಕೇವಲ  20 ನಿಮಿಷಗಳ ಕಾಲ ಆಹಾರದ ಮೇಲೆ ಬಿಡಿ, ನಂತರ ತೆಗೆಯಿರಿ.

ತಾಜಾ ಕೆನೆ

ಉಪ್ಪು ಸ್ವಲ್ಪ ಹೆಚ್ಚಾದರೂ ಸಹ ಅದನ್ನು ತಿನ್ನುವುದು ಅಸಾಧ್ಯ. ಹನಿಮ್ಮ ಆಹಾರದಲ್ಲಿ  ಹೆಚ್ಚಿರುವ ಉಪ್ಪನ್ನ ಕಡಿಮೆ ಮಾಡಲು, ಹಾಲಿನ ಕೆನೆ ಅಥವಾ ಮೊಸರಿನ ಕೆನೆಯನ್ನು ಸೇರಿಸಬಹುದು. ನಿಮ್ಮ ಆಹಾರಕ್ಕೆ ಯಾವುದು ಸೂಕ್ತ ಎಂಬುದನ್ನ ನೋಡಿಕೊಳ್ಳಿ. ಕೆಲ ಆಹಾರಗಳಿಗೆ ಹಾಲು ಅಥವಾ ಮೊಸರು ಹಾಕಿದರೆ ರುಚಿ ಹಾಳಾಗುತ್ತದೆ. ಹಾಗಾಗಿ ಸರಿಯಾಗಿ ನೋಡಿಕೊಂಡು ಹಾಕಿದರೆ, ನಿಮ್ಮ ಆಹಾರದ ರುಚಿ ಸರಿಯಾಗುತ್ತದೆ.

ಉಪ್ಪಿನಲ್ಲಿ ಕಂಡುಬರುವ ಸೋಡಿಯಂ ಮತ್ತು ಕ್ಲೋರೈಡ್ ಅಂಶ

 • ನಮ್ಮ ಆರೋಗ್ಯಕ್ಕೆ ನಿಯಮಿತ ಪ್ರಮಾಣದಲ್ಲಿ ಮಾತ್ರ ಇದರಲ್ಲಿರುವ ಸೋಡಿಯಂ ಮತ್ತು ಕ್ಲೋರೈಡ್ ಅಂಶದ ಪ್ರಮಾಣ ಬೇಕಾಗುತ್ತದೆ. ಒಂದು ವೇಳೆ ಉಪ್ಪಿನಾಂಶ ಹೆಚ್ಚಿರುವ ಆಹಾರಗಳನ್ನು ಅತಿಯಾಗಿ ಸೇವಿಸುತ್ತಾ ಹೋದರೆ, ಇಲ್ಲಾಂದರೆ ದೈನಂದಿನ ಅಡುಗೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ಬಳಸುವುದರಿಂದ, ದೇಹದಲ್ಲಿ ಸೋಡಿಯಂ ಅಂಶ, ಹೆಚ್ಚಾಗುತ್ತಾ ಹೋಗುತ್ತದೆ.
 • ಯಾವಾಗ ದೇಹದಲ್ಲಿ ಸೋಡಿಯಂ, ಹೆಚ್ಚಾಗುತ್ತಾ ಹೋಗುತ್ತದೆಯೋ, ಆಗಲೇ ಸಮಸ್ಯೆಗಳು ಶುರುವಾಗುತ್ತದೆ. ಇವು ನಿಮ್ಮ ರಕ್ತನಾಳಗಳನ್ನು ಮಾತ್ರ ಹಾಳು ಮಾಡುವುದಲ್ಲದೆ, ದೇಹದ ಪ್ರಮುಖ ಅಂಗಾಂಗಗಳಾದ ಹೃದಯ, ಕಿಡ್ನಿ ಹಾಗೂ ರಕ್ತದೊತ್ತಡದಂತಹ ಸಮಸ್ಯೆಯನ್ನು ತಂದೊ ಡ್ಡುತ್ತದೆ. ಈ ಬಗ್ಗೆ ತಜ್ಞರು ಸಾಕಷ್ಟು ಬಾರಿ ಅಧ್ಯಾಯನವನ್ನು ನಡೆಸಿ, ಇಂತಹ ತೀರ್ಮಾನಕ್ಕೆ ಬಂದಿದ್ದಾರೆ.

ನಿಮಗೆ ಮೊದಲೇ ಹೇಳಿದಂತೆ ಹಾಲಿನ ಕೆನೆ ಹಾಗೂ ಮೊಸರು ಹೇಗೆ ಹೆಚ್ಚಾದ ಉಪ್ಪಿನ ರುಚಿ ಸರಿದೂಗಿಸಲು ಸಹಾಯ ಮಾಡುತ್ತದೆ. ಹಾಗೆಯೇ, ಕೇವಲ ಮೊಸರು ಸಹ ಉಪ್ಪಿನ ರುಚಿ ಸರಿ ಮಾಡಲು ಸಹಕಾರಿ ಎಂದು ಸಾಬೀತಾಗಿದೆ. ಉಪ್ಪು ಹೆಚ್ಚಾದ ನಿಮ್ಮ ಆಹಾರಕ್ಕೆ ಮೊಸರು ಸೇರಿಸಿದರೆ ರುಚಿ ಹಾಳಾಗುವುದಿಲ್ಲ ಎಂದರೆ, ಅದಕ್ಕೆ 1 ಚಮಚ ಮೊಸರು ಸೇರಿಸಿ ಮತ್ತು 5 ನಿಮಿಷ ಬೇಯಿಸಿ. ಅದನ್ನು ಬೇಯಿಸಲು ಸಾಧ್ಯವಿಲ್ಲ ಎಂದರೆ, ಚೆನ್ನಾಗಿ ಮಿಕ್ಸ್ ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಉಪ್ಪು ತಿಂದರೆ ಮಧುಮೇಹ ಹೇಗೆ ಬರುತ್ತೆ?

ಮಧುಮೇಹವು ಸಿಹಿತಿಂಡಿಗಳು, ಸಕ್ಕರೆ ಹಾಗೂ ಹಣ್ಣಿನ ರಸಗಳ ಸೇವನೆಯಿಂದ ಬರುತ್ತದೆ ಎಂದು ಭಾವಿಸಲಾಗಿದೆ. ಸ್ಟಾಕ್‌ಹೋಮ್‌ನಲ್ಲಿರುವ ಕ್ಯಾರೊಲಿನಾಸ್ಕಾ ಇನ್‌ಸ್ಟಿಟ್ಯೂಟ್ ನಡೆಸಿದ ಅಧ್ಯಯನವು ಹೆಚ್ಚಿನ ಉಪ್ಪು ಸೇವನೆಯು ಮಧುಮೇಹಕ್ಕೆ ಕಾರಣವಾಗುತ್ತದೆ ಎಂದು ಕಂಡು ಹಿಡಿದಿದೆ. ದಿನಕ್ಕೆ ಎರಡು ಸ್ಪೂನ್‌ ಉಪ್ಪು ತೆಗೆದುಕೊಳ್ಳುವವರಲ್ಲಿ ಶೇ.72ರಷ್ಟು ಅಧಿಕ ಮಧುಮೇಹ ಇರುತ್ತದೆ ಎಂಬುದು ಬಹಿರಂಗವಾಗಿದೆ.

ಇನ್ಸುಲಿನ್‌ಗೆ ಅಡ್ಡಿ

ಹೆಚ್ಚಿನ ಉಪ್ಪು ಸೇವನೆ ಮಾಡಿರುವ ಪರಿಣಾಮ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಸಾಲ್ಟ್‌ ಇನ್ಸುಲಿನ್ ಅನ್ನು ತಡೆಯುವುದರೊಂದಿಗೆ ಮಧುಮೇಹಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ. ಹೆಚ್ಚಿನ ಉಪ್ಪು ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಕಾರಣವಾಗಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಅವಳಿ ಶತ್ರುಗಳಾಗಿದ್ದು, ಇದು ಹೃದ್ರೋಗಕ್ಕೆ ಕಾರಣವಾಗಬಹುದು.ನಾವು ತಿನ್ನುವ ಆಹಾರದಲ್ಲಿ ದಿನಕ್ಕೆ 1500 ಮಿಗ್ರಾಂ ಸೋಡಿಯಂ ಮೀರದಂತೆ ನೋಡಿಕೊಳ್ಳಬೇಕು. ತರಕಾರಿ, ಉಪ್ಪಿನಕಾಯಿ, ತಿಂಡಿ, ಮೊಸರಿನಲ್ಲಿ ಅಗತ್ಯ ಪ್ರಮಾಣದಲ್ಲಿ ಇದ್ದರೆ ಸೇಫ್ ಎನ್ನುತ್ತಾರೆ ತಜ್ಞರು.

ಕಾಳುಮೆಣಸಿನ ಪುಡಿ ಬಳಕೆಗೆ ಪ್ರಯತ್ನಿಸಿ

ತರಕಾರಿ, ಸೊಪ್ಪುಗಳಂತಹ ಆಹಾರದಲ್ಲಿ ಕಡಿಮೆ ಉಪ್ಪನ್ನು ಹಾಕುವ ಅಭ್ಯಾಸ ಮಾಡಿಕೊಳ್ಳಿ. ಹೊರಗಡೆ ತಯಾರಿಸಿದ ಪದಾರ್ಥಗಳನ್ನು ಆದಷ್ಟು ದೂರವಿಡಬೇಕು. ಉಪ್ಪಿನ ಬದಲು ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಉದುರಿಸಿ. ಇದನ್ನು ಹಂತ ಹಂತವಾಗಿ ಮಾಡುವುದರಿಂದ ನಾಲಿಗೆಯ ರುಚಿ ಇದಕ್ಕೆ ಒಗ್ಗಿಕೊಳ್ಳಬಹುದು. ಹೀಗೆ ಮಾಡುವುದರಿಂದ ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು.

ಹೃದಯದ ಸಮಸ್ಯೆ

 • ಈ ವಿಷ್ಯ ನಿಮಗೆ ಗೊತ್ತಿರಲಿ, ಹೃದಯದ ತಜ್ಞರು ಕೂಡ ಇದನ್ನೇ ಹೇಳುತ್ತಾರೆ, ಒಂದು ವೇಳೆ ದೇಹ ದಲ್ಲಿ ಸೋಡಿಯಂ ಅಂಶ ಹೆಚ್ಚಾಗಿಬಿಟ್ಟರೆ, ಹೃದಯ ತನ್ನ ಪಂಪ್ ಮಾಡುವ ಸಾಮರ್ಥ್ಯವನ್ನು ಕ್ರಮೇಣವಾಗಿ ಕಳೆದುಕೊಳ್ಳುತ್ತಾ ಹೋಗುತ್ತದೆ.
 • ಇದರಿಂದ ರಕ್ತದ ಒತ್ತಡದಲ್ಲಿ ಏರು ಪೇರು ಉಂಟಾಗುತ್ತದೆ. ಇದು ನಿರಂತರವಾಗಿ ಹೀಗೆ ಮುಂದುವರೆ ದರೆ, ಹೃದಯ ತನ್ನ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಾಧ್ಯವಾಗದೆ, ಮುಂದಿ ದಿನ ಗಳಲ್ಲಿ ಪ್ರಾಣಕ್ಕೆ ಅಪಾಯವಾಗುವ ಸಂಭವ ಹೆಚ್ಚಿರುತ್ತದೆ.

ಕಿಡ್ನಿಗಳ ಸಮಸ್ಯೆ ಬರಬಹುದು

 • ಇನ್ನು ಕಿಡ್ನಿಗಳು ಕೂಡ, ದೇಹದ ಪ್ರಮುಖವಾದ ಅಂಗ, ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ದೇಹ ದೊಳಗಿನ ಕಲ್ಮಶಗಳನ್ನು ಮೂತ್ರ ವಿಸರ್ಜನೆಯ ಮೂಲಕ ಹೊರಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
 • ಆದರೆ ಸಮಸ್ಯೆ ಕಂಡು ಬರುವುದು ಇಲ್ಲೇ, ಯಾವಾಗ ದೇಹದಲ್ಲಿ ಅತಿಯಾದ ಸೋಡಿಯಂ ಅಂಶ ಹೆಚ್ಚಾಗುತ್ತಾ ಹೋಗುತ್ತದೆಯೋ, ಈ ಸಮಯದಲ್ಲಿ ರಕ್ತದ ಒತ್ತಡದಲ್ಲಿ ಕೂಡ ಏರುಪೇರು ಉಂಟಾಗಿ ಬಿಡುತ್ತದೆ. ಇಂತಹ ಸಮಯದಲ್ಲಿ ಮೂತ್ರದ ಸಂಸ್ಕರಣೆ ಮತ್ತು ವಿಸರ್ಜನೆ ಪ್ರಕ್ರಿಯೆಯಲ್ಲಿ ಏರು ಪೇರಾಗುತ್ತದೆ. ಯಾವಾಗ ಇವೆಲ್ಲಾ ಸಮಸ್ಯೆಗಳು ಒಟ್ಟಾಗಿ ಬಿಡುತ್ತವೆಯೋ, ಆಗ ಕಿಡ್ನಿಗಳು ಕೂಡ, ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸಿಬಿಡುತ್ತದೆ.

ದೇಹದಲ್ಲಿ ಉರಿಯೂತದ ಸಮಸ್ಯೆಗೆ ಕಾರಣವಾಗಬಹುದು

 • ಯಾವಾಗ ದೇಹದಲ್ಲಿ ಉರಿಯೂತದ ಸಮಸ್ಯೆ ಕಂಡು ಬರುತ್ತದೆಯೋ, ಆಗ ಮೂಳೆಗಳ ಸಮಸ್ಯೆ ಮತ್ತು ಮಾಂಸಖಂಡಗಳಲ್ಲಿ ಸೆಳೆತ ಕೂಡ ಕಂಡು ಬರುತ್ತದೆ. ಅಷ್ಟೇ ಅಲ್ಲದೆ, ಮೆದುಳಿನ ಕಾರ್ಯ ಚಟುವಟಿಕೆ ಗಳಲ್ಲಿ ಕೂಡ ಏರುಪೇರಾಗುವ ಸಾಧ್ಯತೆ ಇರುತ್ತದೆ, ಇದರಿಂದ ಮಾನಸಿಕ ಸಮಸ್ಯೆ ಕಂಡುಬರುವ ಅಪಾಯ ಕೂಡ ಹೆಚ್ಚಿರುತ್ತದೆ.
 • ಒಟ್ಟಿನಲ್ಲಿ ಹೇಳುವುದಾದರೆ, ಈ ಮೇಲೆ ವಿವರಿಸಲಾಗಿರುವ ಎಲ್ಲಾ ಸಮಸ್ಯೆಗಳು, ನೀವು ಆಹಾರದಲ್ಲಿ ಸೇವನೆ ಮಾಡುವ ಹೆಚ್ಚಾದ ಉಪ್ಪಿನ ಅಂಶದಿಂದ ಕಂಡುಬರುತ್ತದೆ. ಹೀಗಾಗಿ ಆಹಾರ ಪದಾರ್ಥ ಗಳ ಲ್ಲಿ ಉಪ್ಪಿನ ಅಂಶವನ್ನು ಕಡಿಮೆ ಬಳಕೆ ಮಾಡಿ ಹಾಗೂ ಉಪ್ಪಿನಾಂಶ ಹೆಚ್ಚಿರುವ ಸ್ನ್ಯಾಕ್ಸ್, ಕುರು ಕುಲು ತಿಂಡಿಗಳು, ಸಂಸ್ಕರಿಸಿದ

ಉಪ್ಪಿಲ್ಲದೆ ನಿಮ್ಮ ಆಹಾರ ಸೇವಿಸಲು ಸಾಧ್ಯವಿಲ್ಲದ ವಿಷಯ. ಆದರೆ ನಿತ್ಯ ನೀವು ಎಷ್ಟು ಉಪ್ಪನ್ನು ಸೇವಿಸುತ್ತೀರಿ ಎಂಬುದನ್ನು ಪರಿಶೀಲಿಸುವುದು ಅವಶ್ಯಕ. ಹೆಚ್ಚು ಉಪ್ಪನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಗಂಭೀರ ಋಣಾತ್ಮಕ ಪರಿಣಾಮಗಳಾಗಬಹುದು. ಇದು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ನೆನಪಿನ ಕೊರತೆಯೂ ಆಗಬಹುದು. ನಮ್ಮ ದೈನಂದಿನ ಉಪ್ಪು ಸೇವನೆ ಸರಾಸರಿ 6 ಗ್ರಾಂ ಮೀರಬಾರದು. ಆದರೆ ಹೆಚ್ಚಿನ ಜನ ಪ್ರತಿದಿನ ಕನಿಷ್ಠ 7.2 ಗ್ರಾಂ ಉಪ್ಪನ್ನು ಸೇವಿಸುತ್ತಾರೆ. ಹಾಗಿದ್ದರೆ ಉಪ್ಪು ನಿಮಗೆ ಜಾಸ್ತಿಯಾಗಿದೆ ಎಂಬುದರ ಲಕ್ಷಣಗಳೇನು? ಇಲ್ಲಿ ನೋಡೋಣ.

 1. ಪದೇ ಪದೆ ಮೂತ್ರ ವಿಸರ್ಜನೆ: ಆಗಾಗ್ಗೆ ಮೂತ್ರ ವಿಸರ್ಜನೆಯು ನೀವು ಹೆಚ್ಚು ಉಪ್ಪನ್ನು ಸೇವಿಸುತ್ತಿರುವಿರಿ ಎಂಬುದರ ಒಂದು ಸೂಚನೆ.ಮೂತ್ರ ವಿಸರ್ಜನೆಗಾಗಿ ಮಧ್ಯರಾತ್ರಿಯಲ್ಲಿ ಎಚ್ಚರಗೊಳ್ಳಬೇಕಾದೀತು. ಆದರೂ ಇದು ಟೈಪ್ 2 ಮಧುಮೇಹ ಮತ್ತು ಮೂತ್ರಕೋಶ ಸಮಸ್ಯೆಯ ಲಕ್ಷಣವೂ ಹೌದು. ಹೀಗಾಗಿ ಪರೀಕ್ಷೆ ಮಾಡಿಸಿಕೊಳ್ಳಿ. ಮೂಲ ಕಾರಣ ಏನು ಎಂದು ಖಚಿತಪಡಿಸಿಕೊಳ್ಳಿ.
 2. ನಿರಂತರ ಬಾಯಾರಿಕೆ: ಹೆಚ್ಚು ಉಪ್ಪನ್ನು ಸೇವಿಸುವುದರಿಂದ ಆಗಾಗ ಬಾಯಾರಿಕೆಯಾಗಬಹುದು. ಏಕೆಂದರೆ ಹೆಚ್ಚಿನ ಸೋಡಿಯಂ ಅಂಶವಿರುವ ಆಹಾರಗಳು ನಿಮ್ಮ ದೇಹದ ದ್ರವ ಸಮತೋಲನ ಏರುಪೇರು ಮಾಡುತ್ತವೆ. ಇದನ್ನು ಸರಿದೂಗಿಸಲು ಉತ್ತಮ ಮಾರ್ಗವೆಂದರೆ ಸಾಕಷ್ಟು ನೀರು ಕುಡಿಯುವುದು. ನಿಮ್ಮ ದೇಹವು ನಿಮ್ಮ ದೇಹದಲ್ಲಿ ಉಪ್ಪು ಸಮತೋಲನವನ್ನು ಪುನಃಸ್ಥಾಪಿಸಲು ಹೆಚ್ಚು ನೀರಿನ ಅಗತ್ಯವಿದೆ ಎಂಬ ಸಂಕೇತ ನೀಡುತ್ತದೆ.
 3. ದೇಹದಲ್ಲಿ ಊತ: ಹೆಚ್ಚು ಉಪ್ಪನ್ನು ಸೇವಿಸುವುದರಿಂದ ದೇಹದ ವಿವಿಧ ಭಾಗಗಳಲ್ಲಿ ಊತ ಉಂಟಾಗುತ್ತದೆ. ಬೆಳಿಗ್ಗೆ ಈ ಊತ ಕಂಡುಬರಬಹುದು. ಬೆರಳುಗಳ ಮೇಲೆ ಮತ್ತು ಕಣಕಾಲುಗಳ ಸುತ್ತಲೂ ಕಂಡುಬರಬಹುದು. ಈ ಊತವು ದೇಹದ ಅಂಗಾಂಶಗಳಲ್ಲಿ ಅತಿಯಾದ ದ್ರವದಿಂದ ಉಂಟಾಗುತ್ತದೆ. ಇದನ್ನು ಎಡಿಮಾ ಎಂದು ಕರೆಯಲಾಗುತ್ತದೆ. ಎಡಿಮಾ ಇದ್ದರೆ ಬೇರೆ ಆರೋಗ್ಯ ಸಮಸ್ಯೆಯೂ ಇರಬಹುದು. ಅಥವಾ ನೀವು ಹೆಚ್ಚು ಉಪ್ಪನ್ನು ಸೇವಿಸುವುದರಿಂದಲೂ ಇರಬಹುದು.
 4. ಆಹಾರ ಸಪ್ಪೆ ಎನಿಸುತ್ತದೆ: ನಿಮ್ಮ ಆಹಾರಕ್ಕೆ ಆಗಾಗ ಹೆಚ್ಚು ಉಪ್ಪನ್ನು ಸೇರಿಸಬೇಕು ಅನಿಸುತ್ತದೆಯಾ? ನಿಮ್ಮ ಆಹಾರ ಪದೇ ಪದೆ ಸಪ್ಪೆ ಮತ್ತು ನೀರಸ ಅನಿಸುತ್ತದೆಯಾ? ಬಹುಶಃ ನೀವು ಹೆಚ್ಚು ಉಪ್ಪು ತಿನ್ನುವ ಅಭ್ಯಾಸವನ್ನು ಹೊಂದಿರಬಹುದು. ಕಾಲಾನಂತರದಲ್ಲಿ, ನಿಮ್ಮ ರುಚಿ ಮೊಗ್ಗುಗಳು ಆ ಉಪ್ಪಿನ ಪ್ರಮಾಣಕ್ಕೆ ಹೊಂದಿಕೊಳ್ಳುತ್ತವೆ ಮತ್ತು ಹೆಚ್ಚು ಉಪ್ಪನ್ನು ಸೇರಿಸುವ ಅವಶ್ಯಕತೆ ಬೀಳುತ್ತದೆ.
 5. ಆಗಾಗ್ಗೆ ಸೌಮ್ಯವಾದ ತಲೆನೋವು: ನೀವು ಆಗೊಮ್ಮೆ ಈಗೊಮ್ಮೆ ಸೌಮ್ಯವಾದ ತಲೆನೋವು ಅನುಭವಿಸುತ್ತಿದ್ದೀರಾ? ಈ ತಲೆನೋವು ನಿರ್ಜಲೀಕರಣದಿಂದ ಉಂಟಾಗುವ ಸಾಧ್ಯತೆಗಳಿವೆ. ಹೆಚ್ಚು ಉಪ್ಪನ್ನು ಸೇವಿಸುವುದರಿಂದ ನಿರ್ಜಲೀಕರಣ ಉಂಟಾಗಿ, ಆ ಕಾರಣದಿಂದಾಗಿ ಅಲ್ಪಾವಧಿಯಲ್ಲಿ ತಲೆನೋವು ಬರುವ ಸಾಧ್ಯತೆಯಿದೆ. ಈ ತಲೆನೋವನ್ನು ಹೋಗಲಾಡಿಸಲು ಸಾಕಷ್ಟು ನೀರು ಕುಡಿಯಿರಿ.
 6. ಉಪ್ಪಿನ ಆಹಾರಕ್ಕಾಗಿ ಹಂಬಲಿಕೆ: ನಿಮ್ಮ ರುಚಿ ಮೊಗ್ಗುಗಳು ಉಪ್ಪಿನ ರುಚಿ ಮತ್ತು ಪರಿಮಳಕ್ಕೆ ಹೊಂದಿಕೊಂಡಾಗ, ಅದು ಮತ್ತೆ ಮತ್ತೆ ಅದನ್ನೇ ಹಂಬಲಿಸುತ್ತದೆ. ಉಪ್ಪುಸಹಿತ ಕಡಲೆಕಾಯಿ, ಚಿಪ್ಸ್ ಮತ್ತು ಇತರ ಉಪ್ಪಿನ ಐಟಂಗಳನ್ನು ತಿನ್ನುವ ಅಗತ್ಯವನ್ನು ನೀವು ಇದ್ದಕ್ಕಿದ್ದಂತೆ ಅನುಭವಿಸುತ್ತೀರಿ.

Share News

Leave a Reply

Your email address will not be published. Required fields are marked *