Breaking News

Udupi : ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವಾಗಲೇ ಕುಸಿದು ಬಿದ್ದು ವೈದ್ಯೆ ಸಾವು

Share News

ಉಡುಪಿ, ಡಿ 08: ರೋಗಿಗಳಿಗೆ ಸೇವೆ ನೀಡುತ್ತಿರುವಾಗಲೇ ವೈದ್ಯೆ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಡಿ.8ರ ಗುರುವಾರ ನಡೆದಿದೆ.

ಇದನ್ನೂ ಓದಿ: “ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಹೊಸ ಹೆಲ್ತ್ ಕಾರ್ಡ್ ಗೆ ಸಿಎಂ ಸಿದ್ದರಾಮಯ್ಯ ಚಾಲನೆ!

ಮೃತ ವೈದ್ಯರನ್ನು ಡಾ. ಶಶಿಕಲಾ ಎಂದು ಗುರುತಿಸಲಾಗಿದೆ.ಹೊರರೋಗಿಗಳ ವಿಭಾಗದಲ್ಲಿ ರೋಗಿಗೆ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲೇ ಕುಸಿದು ಬಿದ್ದ ಡಾ. ಶಶಿಕಲಾ ಅವರನ್ನುಜಿಲ್ಲಾಸ್ಪತ್ರೆ ಸಿಬ್ಬಂದಿಗಳು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿದರು. ಆದರೆ, ಅಷ್ಟರಲ್ಲಿ ಶಶಿಕಲಾ ಅವರು ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮೂಲ್ಕಿ : ಭೀಕರ ಅಪಘಾತ ; ಸರ್ವೀಸ್ ರಸ್ತೆಗೆ ನುಗ್ಗಿದ ಲಾರಿ ;ಹಲವರಿಗೆ ಗಂಭೀರ ಗಾಯ!

2022ರ ಫೆಬ್ರವರಿಯಲ್ಲಿ ವಯೋ ನಿವೃತ್ತಿ ಹೊಂದಿದ್ದ ಡಾ. ಶಶಿಕಲಾ ಅವರನ್ನು ವೈದ್ಯರ ಕೊರತೆಯ ಹಿನ್ನಲೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಮುಂದುವರಿಸಲಾಗಿತ್ತು.

WATCH VIDEO ON YOUTUBE: ನಾಗನ ಆರಾಧನೆಯೊಂದಿಗೆ ಪ್ರಕೃತಿಯನ್ನು ಸಂರಕ್ಷಿಸುವ ಮುಖ್ಯ ಉದ್ದೇಶ ನಾಗಬನಗಳದ್ದು: ತಮ್ಮಣ್ಣ ಶೆಟ್ಟಿ


Share News

Leave a Reply

Your email address will not be published. Required fields are marked *