Breaking News

ಅಮೆರಿಕದಲ್ಲಿ ಭಾರತೀಯ ಕುಟುಂಬದ ನಾಲ್ವರ ಶವ ಪತ್ತೆ: ಸಾವಿನ ಸುತ್ತ ಹಲವು ಶಂಕೆ!

Share News

ವಾಷಿಂಗ್ಟನ್‌ (ಅಕ್ಟೋಬರ್ 6, 2023): ಅಮೆರಿಕದ ನ್ಯೂಜೆರ್ಸಿಯಲ್ಲಿ ಭಾರತೀಯ ಮೂಲದ ನಾಲ್ವರ ಕುಟುಂಬ ಶವವಾಗಿ ಪತ್ತೆಯಾಗಿದ್ದು, ಈ ಸಾವಿನ ಪ್ರಕರಣಗಳು ನಿಗೂಢವಾಗಿದೆ. ಇನ್ನು, ಈ ಪ್ರಕರಣಗಳು ಕೊಲೆ – ಆತ್ಮಹತ್ಯೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರ ಕುಟುಂಬದ ಯೋಗಕ್ಷೇಮದ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ಅವರ ಮನೆಗೆ ಹೋಗಿ ನೋಡಿದ ಬಳಿಕ ಭಾರತೀಯ ಮೂಲದ ಕುಟುಂಬ ಶವವಾಗಿ ಪತ್ತೆಯಾಗಿರುವುದು ತಿಳಿದುಬಂದಿದೆ. ಪ್ಲೇನ್ಸ್‌ಬೊರೊದ ಪೊಲೀಸರು ಅಕ್ಟೋಬರ್ 4 ರಂದು ಸಂಜೆ ಅವರ ಮನೆಗೆ ಹೋದಾಗ ಅವರು ಸತ್ತಿರುವುದು ಕಂಡುಬಂದಿದೆ ಎಂದು ಕೌಂಟಿ ಪ್ರಾಸಿಕ್ಯೂಟರ್ ಯೊಲಾಂಡಾ ಸಿಕ್ಕೋನ್ ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ನವಯುಗದ ರಾವಣ ಎಂದ ಬಿಜೆಪಿ; ಕಾಂಗ್ರೆಸ್ ಆಕ್ರೋಶ!

ಮೃತರನ್ನು 43 ವರ್ಷದ ತೇಜ್‌ ಪ್ರತಾಪ್‌ ಸಿಂಗ್, 42 ವರ್ಷದ ಸೋನಾಲ್ ಪರಿಹಾರ್ ಹಾಗೂ ದಂಪತಿಯ 10 ವರ್ಷದ ಮಗ ಮತ್ತು ಆರು ವರ್ಷದ ಮಗಳು ಸೇರಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಗುರುತಿಸಿದ್ದಾರೆ. ಕುಟುಂಬವು ಹೇಗೆ ಮೃತಪಟ್ಟಿದೆ ಎಂದು ಸಿಕ್ಕೋನ್‌ ಹೇಳದಿದ್ದರೂ, ಶೂಟಿಂಗ್ ನಡೆದಿರೋದನ್ನು ಕೌಂಟಿ ಪ್ರಾಸಿಕ್ಯೂಟರ್ ಕಚೇರಿಯ ವಕ್ತಾರರು ತಳ್ಳಿಹಾಕಿದ್ದಾರೆ.

“ಈ ದುರಂತವು ತನಿಖೆಯ ಹಂತದಲ್ಲಿದೆ ಮತ್ತು ಶವಪರೀಕ್ಷೆಗಳನ್ನು ನಡೆಸಲಾಗುತ್ತಿದೆ” ಎಂದು ಅವರು ಅಕ್ಟೋಬರ್ 5 ರಂದು ಹೇಳಿದ್ದಾರೆ. ಇನ್ನು, ಭಾರತೀಯ ಮೂಲದ ಕುಟುಂಬದ ನಿಗೂಢ ಸಾವಿನ ಬಗ್ಗೆ ಮಾತನಾಡಿದ ಪ್ಲೇನ್ಸ್‌ಬೊರೊ ಮೇಯರ್ ಪೀಟರ್ ಕ್ಯಾಂಟು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಈ ಸಂಬಂಧ ಪೋಸ್ಟ್‌ ಮಾಡಿದ್ದಾರೆ.  “ನಮ್ಮ ಸಮುದಾಯದಲ್ಲಿ ಏನಾಯಿತು ಎಂಬುದು ಗ್ರಹಿಕೆಗೆ ಮೀರಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. “ಈ ದುರಂತ ಘಟನೆಯಿಂದ ನಾವು ದುಃಖಿತರಾಗಿದ್ದೇವೆ” ಎಂದೂ ಅವರು ಹೇಳಿದರು.

ಇದನ್ನೂ ಓದಿ: ಆನ್ಲೈನ್ ಬೆಟ್ಟಿಂಗ್ ಕೇಸ್: ಕಪಿಲ್ ಶರ್ಮಾ, ಶ್ರದ್ಧಾ ಕಪೂರ್ ಸೇರಿದಂತೆ ಹಲವರಿಗೆ ಇಡಿ ನೋಟಿಸ್ ಜಾರಿ!

ತೇಜ್‌ ಪ್ರತಾಪ್‌ ಸಿಂಗ್ ತನ್ನ ಕುಟುಂಬವನ್ನು ಕೊಂದಿದ್ದು ಮತ್ತು ನಂತರ ಸ್ವತ: ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಮೆರಿಕ ಬ್ರಾಡ್‌ಕಾಸ್ಟಿಂಗ್ ಚಾನೆಲ್ ವರದಿ ಮಾಡಿದೆ. ಅನಾಮಧೇಯ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದೂ ಮಾಧ್ಯಮ ತಿಳಿಸಿದೆ. ಇನ್ನೊಂದೆಡೆ, ದಂಪತಿ ಖುಷಿಯಾಗೇ ಇದ್ದರು. ಈ ಹಿನ್ನೆಲೆ ಈ ರೀತಿ ಆಗಿರುವುದನ್ನು ನಂಬಲು ಸಾಧ್ಯವಿಲ್ಲ ಎಂದು ಮನೆಯ ಹೊರಗೆ ಜಮಾಯಿಸಿದ ಕುಟುಂಬ ಸದಸ್ಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇಬ್ಬರೂ ಮಾಹಿತಿ ತಂತ್ರಜ್ಞಾನ ಕ್ಷೇತ್ರ (ಐಟಿ)ಯಲ್ಲಿ ಕೆಲಸ ಮಾಡುತ್ತಿದ್ದು, ಅವರಲ್ಲಿ ಒಬ್ಬರು ಮಾನವ ಸಂಪನ್ಮೂಲ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

WATCH VIDEO ON YOUTUBE: ತಾಸೆಯ ಪೆಟ್ಟಿಗೆ ಭರ್ಜರಿ ಹುಲಿ ಕುಣಿತ ಮಾಡಿದ ಶಿಕ್ಷಕರು ಹಾಗೂ ಮಕ್ಕಳು!


Share News

Leave a Reply

Your email address will not be published. Required fields are marked *