Breaking News

ಕಾಂಗ್ರೆಸ್ ಕಾರ್ಯಾಧ್ಯಕ್ಷ ಹುದ್ದೆಗೆ ಸೂರಕೆ ಹೆಸರು. ಹೈಕಮಾಂಡ್ ಕದ ತಟ್ಟಿದ ರಮನಾಥ ರೈ

Share News

ಬೆಂಗಳೂರು: ಧ್ರುವನಾರಾಯಣ ನಿಧನದ ನಂತರ ತೆರವಾಗಿರುವ ಕಾಂಗ್ರೆಸ್ ಕಾರ್ಯಧ್ಯಕ್ಷ ಹುದ್ದೆಗೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೆಸರು ಹೈಕಮಾಂಡ್ ವಲಯದಲ್ಲಿ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೊರಕೆ ಹೆಸರಿನ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ ಮಾಜಿ ಸಚಿವ ಬಿ ರಮನಾಥ ರೈ ಹಿರಿತನದ ನೆಲೆಯಲ್ಲಿ ಕಾರ್ಯಧ್ಯಕ್ಷ ಸ್ಥಾನ ನನಗೆ ನೀಡಬೇಕು ಎಂದು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರಣದಿಂದ ದೆಹಲಿಗೆ ಭೇಟಿ ನೀಡಿದ್ದರು ಎಂದು ತಿಳಿದು ಬಂದಿದೆ.

ಸುಟ್ಟು ಕರಕಲಾದ ಮನೆ; ಅಪಾಯದಿಂದ ಪಾರು!

ಕಾರ್ಯಧ್ಯಕ್ಷ ಹುದ್ದೆಗೆ ನನಗೆ ಹಿರಿತನದ ನೆಲೆಯಲ್ಲಿ ನೀಡಬೇಕು ಎಂಬ ವಾದವನ್ನು ಮಂಡಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿವೆ.

ಈ ನಡುವೆ ಇಬ್ಬರು ನಾಯಕರುಗಳ ನಡುವೆ ಪೈಪೋಟಿ ಏರ್ಪಡುವ ಸಂಭವ ಇದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿಕೊಂಡಿವೆ. ಕಾರ್ಯಧ್ಯಕ್ಷ ಹುದ್ದೆ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡ ಪ್ರಮುಖ ಹುದ್ದೆಯಾಗಿದ್ದರಿಂದ ಎರಡು ನಾಯಕರುಗಳ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ನಾನು ಧರಿಸಿದ್ದ ಹುಲಿ ಉಗುರು ಅಸಲಿ ಅಲ್ಲ; ನಿಖಿಲ್ ಕುಮಾರಸ್ವಾಮಿ


Share News

Leave a Reply

Your email address will not be published. Required fields are marked *