Breaking News

ಶಿರಾಡಿ : ಲಾರಿ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು, ಢಿಕ್ಕಿ ಹೊಡೆದು ಪರಾರಿಯಾದ ವಾಹನ!

Share News

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು – ಮಂಗಳೂರು ನಡುವಣ ಶಿರಾಡಿ ಘಾಟಿಯ ಗಡಿ ದೇವಸ್ಥಾನದ ಬಳಿ ವಾಹನವೊಂದು ಅಪಘಾತ ಕ್ಕೀಡಾಗಿ ಒಡಿಶಾದ ಮೂಲದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ನಸುಕಿನ ಜಾವ ಸಂಭವಿಸಿದೆ.

ಇದನ್ನೂ ಓದಿ: ಸಹಾಯಕ-ಡಿ-ಕ್ಯಾಂಪ್ (ADC) ಆಗಿ ನೇಮಕಗೊಂಡ ಮೊದಲ ಮಹಿಳಾ ಭಾರತೀಯ ಸಶಸ್ತ್ರ ಪಡೆ ಅಧಿಕಾರಿ ಮನಿಶಾ ಪಾಧಿ

ಒಡಿಶಾದ ಅಮೂಲ್ಯ ಪೆರಿಡಾ (23) ಹಾಗೂ ಸಾಂತಿರ್ನಿಶ್‌ ಜೂಟಿ (27) ಮೃತಪಟ್ಟವರು. ಹಾಸನದಿಂದ ಮಂಗಳೂರಿನತ್ತ ಸರಕು ಒಯ್ಯುತ್ತಿದ್ದ ಮಿನಿ ಲಾರಿಗೆ ಗಡಿ ದೇವಸ್ಥಾನದ ಮೇಲ್ಭಾಗದಲ್ಲಿನ ಕೆಂಪುಹೊಳೆ ಬಳಿ ಯಾವುದೋ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿದೆ. ಮಿನಿ ಲಾರಿ ಸಂಪೂರ್ಣ ಜಖಂಗೊಂಡಿದೆ. ಅದರೆಡೆಯಲ್ಲಿ ಸಿಲುಕಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಬಂಟ್ವಾಳ : ಡೆತ್ ನೋಟ್ ಬರೆದಿಟ್ಟು ಹೋಟೆಲ್ ಕಾರ್ಮಿಕ ಆತ್ಮಹತ್ಯೆ!

ಅಪಘಾತ ಎಸಗಿದ ವಾಹನವನ್ನು ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ. ರಾತ್ರಿಯ ವರೆಗೂ ಆ ವಾಹನದ ಸುಳಿವು ಸಿಕ್ಕಿಲ್ಲ.ಸ್ಥಳಕ್ಕೆ ಸಕಲೇಶಪುರದ ಗ್ರಾಮಾಂತರ ಪೋಲಿಸರು ಸ್ಥಳಕ್ಕೆ ಧಾವಿಸಿದ್ದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

WATCH VIDEO ON YOUTUBE: ನಾಗನ ಆರಾಧನೆಯೊಂದಿಗೆ ಪ್ರಕೃತಿಯನ್ನು ಸಂರಕ್ಷಿಸುವ ಮುಖ್ಯ ಉದ್ದೇಶ ನಾಗಬನಗಳದ್ದು: ತಮ್ಮಣ್ಣ ಶೆಟ್ಟಿ


Share News

Leave a Reply

Your email address will not be published. Required fields are marked *