Breaking News

ಸೊಮಾಲಿಯಾದ ಕರಾವಳಿ ಬಳಿ ಅಪಹರಣವಾಗಿದ್ದ ಹಡಗು ಸೇಫ್ ; ಭಾರತೀಯರು ಸೇರಿ 21 ಮಂದಿ ರಕ್ಷಣೆ!

Share News

ನವದೆಹಲಿ: ಸೊಮಾಲಿಯಾದ ಕರಾವಳಿ ಬಳಿ ಅಪಹರಣವಾಗಿದ್ದ 15 ಭಾರತೀಯರಿದ್ದ ಸರಕು ಸಾಗಣೆ ಹಡಗು ‘ಎಂವಿ ಲೀಲಾ ನಾರ್ಫೋಕ್’ (MV LILA NORFOLK) ರಕ್ಷಿಸುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ. 15 ಭಾರತೀಯರು ಸೇರಿದಂತೆ ಒಟ್ಟು 21 ಮಂದಿಯನ್ನು ರಕ್ಷಿಸಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ ಜನರಿಗೆ ಮತ್ತೊಮ್ಮೆ ವಿದ್ಯುತ್‌ ಬೆಲೆಯೇರಿಕೆಯ ಬಿಸಿ ತಾಗುವ ಸಾಧ್ಯತೆ

ಸೋಮಾಲಿಯಾ ಕರಾವಳಿಯ ಬಳಿ ಗುರುವಾರ ಸಂಜೆ 88,000 ಟನ್‌ಗಳಷ್ಟು ತೂಕದ ‘MV LILA NORFOLK’ ಎಂಬ ಸರಕು ಸಾಗಣೆ ಹಡಗನ್ನು ಅಪಹರಿಸಲಾಗಿತ್ತು. ಲೈಬೀರಿಯನ್‌ಗೆ ಸೇರಿದ ಈ ಹಡಗು ಬ್ರೆಜಿಲ್‌ನಿಂದ ಬಹ್ರೇನ್‌ ಕಡೆಗೆ ಹೊರಟ್ಟಿತ್ತು. ಹಡಗು ಅಪಹರಣ ಸುದ್ದಿ ತಿಳಿಯುತ್ತಲೇ ಭಾರತೀಯ ನೌಕಾಪಡೆ ಕಾರ್ಯಚರಣೆಗೆ ಇಳಿದಿತ್ತು.

ಭಾರತೀಯ ನೌಕಾಪಡೆಯು ಕಡಲ್ಗಳ್ಳರನ್ನು ಪತ್ತೆಹಚ್ಚಲು ಯುದ್ಧನೌಕೆಯನ್ನು (INS ಚೆನ್ನೈ) ಕಳುಹಿಸಿ ಸೂಕ್ಷ್ಮವಾಗಿ ನಿಗಾವಹಿಸಿತ್ತು. ಅಷ್ಟೇ ಅಲ್ಲದೇ ಕಡಲ ಗಸ್ತು ವಿಮಾನ, ಹೆಲಿಕಾಪ್ಟರ್‌ಗಳು ಹಾಗೂ P-81 ದೀರ್ಘಶ್ರೇಣಿಯ ವಿಮಾನಗಳು ಹಾಗೂ ಪ್ರಿಡೆಕ್ಟರ್‌ MQ9B ಡ್ರೋನ್‌ಗಳನ್ನು ನಿಯೋಜನೆ ಮಾಡಿತ್ತು.

ಇದನ್ನೂ ಓದಿ: ಸುಳ್ಯ: ಅಡಿಕೆಗೆ ಹಳದಿ ರೋಗ; ಮನನೊಂದು ಕೃಷಿಕ ನೇಣು ಬಿಗಿದು ಆತ್ಮಹತ್ಯೆ

ಸತತ ಕಾರ್ಯಾಚರಣೆಯಿಂದಾಗಿ ಭಾರತೀಯ ನೌಕಾಪಡೆ ವಶವಾಗಿದ್ದ ಹಡಗನ್ನು ಪತ್ತೆಹಚ್ಚಲಾಗಿದ್ದು, ಅದರಲ್ಲಿದ್ದ ಭಾರತೀಯರನ್ನೂ ರಕ್ಷಣೆ ಮಾಡಿದೆ. ಈ ಸಂದರ್ಭದಲ್ಲಿ ಅಲ್ಲಿ ಯಾವುದೇ ಹೈಜಾಕರ್‌ಗಳು ಅಲ್ಲಿರಲಿಲ್ಲ ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.

WATCH VIDEO ON YOUTUBE: ನೀರಿಗೆ ಬಿದ್ದಿದ್ದಾನೆಂದು ಭಾವಿಸಿ ವ್ಯಕ್ತಿ ಒಬ್ಬರನ್ನು ರಕ್ಷಿಸಲು ಮುಂದಾದ ಆನೆ!


Share News

Leave a Reply

Your email address will not be published. Required fields are marked *