Breaking News

ಪುತ್ತೂರು: ಗೌರಿ ಹೊಳೆಗೆ ಈಜಲು ತೆರಳಿ ನಾಪತ್ತೆಯಾಗಿದ್ದ ತಸ್ಲೀಮ್ ಮೃತದೇಹ ಪತ್ತೆ!

Share News

ಪುತ್ತೂರು:ಗೌರಿ ಹೊಳೆಗೆ ಈಜಲು ತೆರಳಿ ಬಳಿಕ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಮಾಡಾವು ಕಟ್ಟತ್ತಾರು ನಿವಾಸಿ ತಸ್ಲೀಮ್ (17) ಮೃತದೇಹ ಪತ್ತೆಯಾಗಿದೆ. ತಸ್ಲೀಮ್ ಸುಳ್ಯದ ಅರಂತೋಡಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದು ರಜೆಯಲ್ಲಿ ಊರಿಗೆ ಬಂದಿದ್ದ ಎನ್ನಲಾಗಿದೆ. ತಸ್ಲೀಮ್ ಅ.15ರಂದು ಸಂಜೆ ಸ್ನೇಹಿತರೊಂದಿಗೆ ಎರಕ್ಕಲ ಸಮೀಪದ ಗೌರಿ ಹೊಳೆಗೆ ಈಜಲು ತೆರಳಿದ್ದ ವೇಳೆ ಘಟನೆ ನಡೆದಿದೆ.

ಇದನ್ನೂ ಓದಿ: ಹಮಾಸ್ ಪರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಝಾಕೀರ್ ಬಂಧನ..!

ತಸ್ಲೀಮ್ ನಾಪತ್ತೆಯಾಗುತ್ತಿದ್ದಂತೆ ಸ್ನೇಹಿತರು ಮನೆಯವರಿಗೆ, ಸ್ಥಳೀಯರಿಗೆ ವಿಷಯ ತಲುಪಿಸಿದ್ದರು. ತಕ್ಷಣ ಸ್ಥಳೀಯರು,ಮುಳುಗು ತಜ್ಞರು ಬಂದು ಹುಡುಕಾಟ ಮುಂದುವರಿಸಿದ್ದರು.ಅದರೂ ನಿನ್ನೆ ಮೃತದೇಹ ಪತ್ತೆಯಾಗಿರಲಿಲ್ಲ.

ಇಂದು ಬೆಳಿಗ್ಗೆ ಹುಡುಕಾಟ ನಡೆಸಿದಾಗ ಈಜಲು ತೆರಳಿದ್ದ ಸ್ಥಳದ ಸನಿಹವೇ ಮೃತದೇಹ ಪತ್ತೆಯಾಗಿದೆ.

WATCH VIDEO ON YOUTUBE: ಸಾರ್ವಜನಿಕವಾಗಿ ಕಾಣಿಸಿಕೊಂಡ ನಟ ಸಂಜಯ್ ಕಪೂರ್!


Share News

Leave a Reply

Your email address will not be published. Required fields are marked *