Breaking News

ಪುತ್ತೂರು :ಸೊತ್ತು ಕಳವು ಮಾಡಿದ್ದ ಕಳ್ಳನನ್ನು ಹಿಡಿದ ಶಿಕ್ಷಕರು!

Share News

ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಸಂಬಂಧಿಸಿದ ಸೊತ್ತುಗಳನ್ನು ಕದಿಯುತ್ತಿದ್ದಾತನನ್ನು ಶಾಲಾ ಶಿಕ್ಷಕರೇ ಹಿಡಿದ ಘಟನೆ ಅ. 5ರಂದು ನಡೆದಿದೆ.

ಇದನ್ನೂ ಓದಿ: ನಾಪತ್ತೆಯಾಗಿದ್ದ ವ್ಯಕ್ತಿ ಬಿ.ಸಿ.ರೋಡ್‌ನ ಬಸ್‌ನಿಲ್ದಾಣದಲ್ಲಿ ಅಸ್ವಸ್ಥರಾಗಿ ಪತ್ತೆ; ಮೃತ್ಯು!

ಪುತ್ತೂರು ಕೊಂಬೆಟ್ಟು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀರು ಕುಡಿಯಲು ಇಟ್ಟಿದ್ದ ಡ್ರಮ್‌ ಮತ್ತು ಇತರ ಸ್ಟೀಲ್‌ ಮತ್ತು ಪ್ಲಾಸ್ಟಿಕ್‌ ಸೊತ್ತುಗಳು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿತ್ತು. ಈ ಕುರಿತು ಶಾಲೆಯ ಉಪಪ್ರಾಂಶುಪಾಲರು ಸಿಸಿ ಟಿವಿ ಪರಿಶೀಲಿಸಿದಾಗ ವ್ಯಕ್ತಿಯೋರ್ವ ಕಳವು ಮಾಡುವುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಐತಿಹಾಸಿಕ 34 ನೇ ವರ್ಷದ ‘ಮಂಗಳೂರು ದಸರಾ’ ಅಕ್ಟೋಬರ್ 15ರಿಂದ ಪ್ರಾರಂಭ!

ಈ ಕುರಿತು ಶಾಲೆಯ ಶಿಕ್ಷಕರಿಗೆ, ಎಸ್‌ಡಿಎಂಸಿ ಮತ್ತು ನಗರಸಭಾ ಸ್ಥಳೀಯ ಸದಸ್ಯರಿಗೆ, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅ. 5ರಂದು ಸ್ಟೀಲ್‌ ಡ್ರಮ್‌ ಕದ್ದೊಯ್ದ ವ್ಯಕ್ತಿ ಶಾಲೆಯ ಆವರಣದಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ ಉಪಪ್ರಾಂಶುಪಾಲರು ಮತ್ತು ಶಿಕ್ಷಕರು ಆತನನ್ನು ಹಿಡಿದಿದ್ದಾರೆ. ಹಿಂದಿ ಭಾಷೆಯಲ್ಲಿ ಮಾತನಾಡುತ್ತಿರುವ ಕಳ್ಳ ಉತ್ತರಪ್ರದೇಶ ಮೂಲದವನೆನ್ನಲಾಗಿದೆ.

WATCH VIDEO ON YOUTUBE: ಪಾರಿವಾಳವನ್ನು ರಕ್ಷಿಸಲು ಹೋದ ಯುವಕರು ತೊಂದರೆಗೆ ಒಳಗಾದ ಮಂಗಳೂರಿನ ವಿಡಿಯೋ!


Share News

Leave a Reply

Your email address will not be published. Required fields are marked *