Breaking News

ಉದಯನಿಧಿ ಸ್ಟಾಲಿನ್ ಶಿರಶ್ಚೇಧ ಮಾಡುವವರಿಗೆ 10 ಕೋಟಿ ನಗದು ಬಹುಮಾನ ಘೋಷಿಸಿದ ಪರಮಹಂಸ ಆಚಾರ್ಯ!

Share News

ಅಯೋಧ್ಯೆ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (Tamil Nadu Chief Minister MK Stalin) ಪುತ್ರ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ (Sanatana Dharma) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ದೇಶಾದ್ಯಂತ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಡಿಎಂಕೆ ನಾಯಕ ಹಾಗೂ ತಮಿಳುನಾಡು ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಅಯೋಧ್ಯೆಯ ಸಂತ ಪರಮಹಂಸ ಆಚಾರ್ಯ (Ayodhya saint Paramhans Acharya), ನಾಯಕನ ಶಿರಚ್ಛೇದ ಮಾಡುವವರಿಗೆ 10 ಕೋಟಿ ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಅವರು ಸಾಂಕೇತಿಕವಾಗಿ ಉದಯನಿಧಿ ಶಿರಚ್ಛೇದ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಲಕ್ಷಾಂತರ ವರ್ಷಗಳ ಹಿಂದೆ ಸನಾತನ ಧರ್ಮವು ತನ್ನ ಬೇರುಗಳನ್ನು ಹೊಂದಿದೆ

ಅಯೋಧ್ಯೆಯ ಸಂತ ಪರಮಹಂಸ ಆಚಾರ್ಯ ಮಾತನಾಡಿ, ಸನಾತನ ಧರ್ಮಕ್ಕೆ ಲಕ್ಷಾಂತರ ವರ್ಷಗಳ ಹಿಂದೆಯೇ ಬೇರು ಇದೆ. ಇದು ಲಕ್ಷಾಂತರ ವರ್ಷಗಳಿಂದ ಅಸ್ತಿತ್ವದಲ್ಲಿದೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಕೆಲವು ಧರ್ಮಗಳು ಅಸ್ತಿತ್ವಕ್ಕೆ ಬಂದಿವೆ. ಭೂಮಿಯ ಮೇಲೆ ಒಂದೇ ಧರ್ಮವಿದ್ದು ಆ ಧರ್ಮವೇ ಸನಾತನ ಧರ್ಮ. ಸನಾತನ ಧರ್ಮಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ ಎಂದರು. ಸನಾತನ ಧರ್ಮ ಎಂದೂ ನಾಶವಾಗಿಲ್ಲ, ಎಂದೂ ನಾಶವಾಗುವುದಿಲ್ಲ ಎಂದರು. ಸನಾತನ ಧರ್ಮವನ್ನು ಹಾಳುಗೆಡವಲು ಯತ್ನಿಸಿದರೆ ನಾಶವಾಗುತ್ತದರೆ ಎಂದು ಎಚ್ಚರಿಸಿದರು

ಉದಯನಿಧಿ ಅವರಿಗೆ ಧೈರ್ಯವಿದ್ದರೆ ಸನಾತನ ಧರ್ಮದ ಬಗ್ಗ ಮಾತನಾಡಿದ ಹಾಗೆ ಬೇರೆ ಧರ್ಮಗಳ ಬಗ್ಗ ಮಾತನಾಡಲಿ. ಒಂದು ವೇಳೆ ಅವರು ಸನಾತನ ಹೊರತುಪಡಿಸಿ ಬೇರೆ ಸಮುದಾಯದ ಬಗ್ಗೆ ಮಾತನಾಡಿದ್ದರೆ ಇಷ್ಟೊತ್ತಿಗೆ ಅವರ ಕಥೆ ಬೇರೆಯೇ ಆಗಿರುತ್ತಿತ್ತು. ಸನಾತನ ಧರ್ಮ ಪಾಲಿಸುವವರು ಅಹಿಂಸವಾದಿಗಳಾಗಿದ್ದು, ಆಪತ್ತು ಬಂದಾಗ ರಾಕ್ಷಸರ ತಲೆ ಕಡಿಯುವುದಕ್ಕೂ ಸಿದ್ದರಿರುತ್ತೇವೆ. ುದಯನಿಧಿ ಸ್ಟಾಲಿನ್​ ಒಬ್ಬ ರಾಕ್ಷಸ ನನ್ನ ಕೈಯಿಂದಲ್ಲೇ ಅವನು ಸಾಯುತ್ತಾನೆ ಎಂದು ಅಯೋಧ್ಯೆಯ ಪರಮಹಂಸ ಆಚಾರ್ಯ ಹೇಳಿದ್ದಾರೆ.

ವಿವಾದವನ್ನು ಹುಟ್ಟುಹಾಕಿದ ಉದಯನಿಧಿ ಸ್ಟಾಲಿನ್:

ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಗ್ಯೂಗೆ ಹೋಲಿಸಿದ ಉದ್ಯನಿಧಿ ಸ್ಟಾಲಿನ್ ವಿವಾದವನ್ನು ಹುಟ್ಟುಹಾಕಿದರು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದರು. ಅವರ ಹೇಳಿಕೆಯ ನಂತರ ಅವರು ಭಾರತೀಯ ಜನತಾ ಪಕ್ಷ (Bharatiya Janata Party) (ಬಿಜೆಪಿ) ಮತ್ತು ಇತರರಿಂದ ಟೀಕೆಗಳನ್ನು ಎದುರಿಸಲು ಪ್ರಾರಂಭಿಸಿದರು. ಟೀಕೆಗೆ ಉತ್ತರಿಸಿದ ಅವರು, ಸನಾತನ ಧರ್ಮವನ್ನು ಮಾತ್ರ ಟೀಕಿಸುತ್ತಿದ್ದು, ಮುಂದೆಯೂ ಮಾಡುತ್ತೇನೆ ಎಂದರು. ಬಿಜೆಪಿಯವರು ತಮ್ಮ ಹೇಳಿಕೆಯನ್ನು ತಿರುಚಿ ನಾಯಕನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿದ್ದರೂ 
ಎದುರಿಸಲು ಸಿದ್ಧ ಎಂದು ಉದ್ಯನಿಧಿ ಸ್ಟಾಲಿನ್ ಹೇಳಿದ್ದಾರೆ. ಬಿಜೆಪಿಯವರು ಇಂಡಿಯಾ ಬ್ಲಾಕ್‌ಗೆ 
ಹೆದರುತ್ತಾರೆ ಮತ್ತು ದೇಶವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು. 
ಒಂದು ಕುಲ, ಒಂದೇ ದೇವರು ಎಂಬುದು ಡಿಎಂಕೆಯ ನೀತಿಯಾಗಿದೆ ಎಂದು ಅವರು ಹೇಳಿದರು.

 
 


Share News

Leave a Reply

Your email address will not be published. Required fields are marked *