Breaking News

ವಿಶ್ವಕಪ್‌ ಇತಿಹಾಸದಲ್ಲೇ ಗರಿಷ್ಠ ರನ್‌ ಚೇಸ್‌ ಮಾಡಿದ ಪಾಕಿಸ್ತಾನ

Share News

Pakistan vs Sri Lanka: ಪಾಕಿಸ್ತಾನ ತಂಡವು ವಿಶ್ವಕಪ್‌ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಅದು ಕೂಡಾ ದಾಖಲೆಯ ಗೆಲುವು.

ಶ್ರೀಲಂಕಾ ವಿರುದ್ಧ ಪಾಕಿಸ್ತಾನ (Pakistan vs Sri Lanka) ತಂಡವು ದಾಖಲೆಯ ಜಯ ಸಾಧಿಸಿದೆ. ಲಂಕಾ ನೀಡಿದ ಬೃಹತ್‌ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವು 6 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಇದು ವಿಶ್ವಕಪ್‌ ಇತಿಹಾಸದಲ್ಲೇ ಅತಿ ಹೆಚ್ಚು ರನ್‌ಗಳ ಯಶಸ್ವಿ ರನ್‌ ಚೇಸಿಂಗ್‌ ಆಗಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ, ಇಬ್ಬರ ಶತಕ ಸಹಿತ 9 ವಿಕೆಟ್‌ ಕಳೆದುಕೊಂಡು 344 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು, ಶಫೀಕ್‌ ಮತ್ತು ರಿಜ್ವಾನ್‌ ಅವರ ತಲಾ ಶತಕದ ನೆರವಿನಿಂದ ಕೇವಲ 4 ವಿಕೆಟ್‌ ಕಳೆದುಕೊಂಡು 345 ರನ್‌ ಗಳಿಸಿ ಗುರಿ ತಲುಪಿತು. ಆ ಮೂಲಕ ಪಾಕಿಸ್ತಾನವು ಯಶಸ್ವಿ ರನ್‌ ಚೇಸಿಂಗ್‌ ಮಾಡಿ ಗೆದ್ದು ಬೀಗಿತು. ಪ್ರಸಕ್ತ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು ಆಡಿದ ಎರಡು ಪಂದ್ಯಗಳಲ್ಲಿಯೂ ಜಯ ಸಾಧಿಸಿದೆ. ಅಲ್ಲದೆ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಸತತ 8 ಪಂದ್ಯಗಳನ್ನು ಗೆದ್ದ ದಾಖಲೆ ನಿರ್ಮಿಸಿದೆ.

ಇದನ್ನೂ ಓದಿ: ಗೃಹಲಕ್ಷ್ಮೀ ಹಣ ಜಮೆ ಗೊಂದಲಕ್ಕೆ ತೆರೆ ಎಳೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಶ್ರೀಲಂಕಾ ನೀಡಿದ ಬೃಹತ್‌ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು ಆರಂಭದಲ್ಲೇ ಮೊದಲ ವಿಕೆಟ್‌ ಕಳೆದುಕೊಂಡಿತು. ಇಮಾಮ್‌ ಉಲ್‌ ಹಕ್‌ 12 ರನ್‌ ಗಳಿಸಿ ಔಟಾದರು. ಅದಾದ ಬೆನ್ನಲ್ಳೇ ನಾಯಕ ಬಾಬರ್‌ ಅಜಾಮ್‌ ಕೂಡಾ 10 ರನ್‌ ಗಳಿಸಿ ನಿರ್ಗಮಿಸಿದರು. ಈ ವೇಳೆ ಒಂದಾದ ರಿಜ್ವಾನ್‌ ಮತ್ತು ಶಫಿಕ್‌ ನಿಧಾನಗತಿಯಲ್ಲಿ ಬ್ಯಾಟ್‌ ಬೀಸುತ್ತಾ, ವಿಕೆಟ್‌ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಅಲ್ಲದೆ ತಂಡಕ್ಕಾಗಿ ಜವಾಬ್ದಾರಿಯುತ ಆಟವಾಡಿದರು.

ಶಫೀಕ್‌, ರಿಜ್ವಾನ್‌ ಶತಕ

ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ ಶಫೀಕ್‌, ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ವಿಕೆಟ್‌ಒಪ್ಪಿಸಿದರು. 113(103) ರನ್‌ ಗಳಿಸಿದ ಅವರು, ಮೊಹಮ್ಮದ್‌ ರಿಜ್ವಾನ್‌ ಜೊತೆಗಿನ 176(156) ರನ್‌ಗಳ ಅತ್ಯಮೂಲ್ಯ ಜೊತೆಯಾಟವಾಡಿದರು. ಅದಾದ ಬೆನ್ನಲ್ಲೇ ರಿಜ್ವಾನ್‌ ಕೂಡಾ ಆಕರ್ಷಕ ಶತಕ ಸಿಡಿಸಿದರು. 121 ಎಸೆತಗಳಲ್ಲಿ ಅಜೇಯ 131 ರನ್‌ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಇದನ್ನೂ ಓದಿ: ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಚಿತ್ರರಂಗಕ್ಕೆ ಎಂಟ್ರಿ!

ಒಂದೇ ಪಂದ್ಯದಲ್ಲಿ ನಾಲ್ಕು ಶತಕ

ಈ ಪಂದ್ಯದ ಮೂಲಕ ಪಾಕಿಸ್ತಾನ ತಂಡ ಹಲವು ದಾಖಲೆ ನಿರ್ಮಿಸಿತು. ವಿಶ್ವಕಪ್‌ನಲ್ಲಿ ಇದು ಯಶಸ್ವಿ ರನ್‌ ಚೇಸಿಂಗ್.‌ ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡದ ಎರಡನೇ ಅತ್ಯುತ್ತಮ ರನ್‌ ಚೇಸಿಂಗ್‌ ಆಗಿದೆ. ಅಲ್ಲದೆ ಈ ಒಂದೇ ಪಂದ್ಯದಲ್ಲಿ ನಾಲ್ಕು ಶತಕಗಳು ಸಿಡಿದವು. ಉಭಯ ತಂಡಗಳ ತಲಾ ಇಬ್ಬರು ಬ್ಯಾಟರ್‌ಗಳು ಮೂರಂಕಿ ರನ್‌ ಗಳಿಸಿದರು. ಈ ಹಿಂದೆ ಏಕದಿನ ಕ್ರಿಕೆಟ್‌ನ ಒಂದೇ ಪಂದ್ಯದಲ್ಲಿ ನಾಲ್ಕು ಶತಕಗಳು ಎರಡು ಬಾರಿ ಮಾತ್ರ ಸಿಡಿದಿವೆ.

WATCH VIDEO ON YOUTUBE: ಸರ್ವರ ಗಮನ ಸೆಳೆದ ತಾಜ್ಮಹಲ್ ಟೀಯ ಸಂಗೀತದ ಬಿಲ್ ಬೋರ್ಡ್!


Share News

Leave a Reply

Your email address will not be published. Required fields are marked *