Breaking News

ಇನ್ಮುಂದೆ ಬಾಲಿವುಡ್‌ ಸಿನಿಮಾನೇ ಮಾಡಲ್ಲ..” ಎಂದ ನಟಿ

Share News

ಮುಂಬಯಿ: ಬಾಲಿವುಡ್‌ ಬಾಕ್ಸ್‌ ಆಫೀಸ್‌ ನಲ್ಲಿ ಶಾರುಖ್‌ ಖಾನ್‌ ಅಭಿನಯದ ʼಜವಾನ್‌ʼ ಸಿನಿಮಾ ಭರ್ಜರಿ ಕಲೆಕ್ಷನ್‌ ಜೊತೆಗೆ ಪ್ರದರ್ಶನ ಕಾಣುತ್ತಿದೆ. ಕಾಲಿವುಡ್‌ , ಟಾಲಿವುಡ್‌ ಸೇರಿದಂತೆ ವರ್ಲ್ಡ್‌ ವೈಡ್‌ ಸಿನಿಮಾಕ್ಕೆ ದೊಡ್ಡಮಟ್ಟದ ರೆಸ್ಪಾನ್ಸ್‌ ವ್ಯಕ್ತವಾಗಿದ್ದು, ಕೋಟಿ ಕೋಟಿ ಗಳಿಕೆ ಕಂಡಿದೆ.

ಅಟ್ಲಿ ಕುಮಾರ್‌ ನಿರ್ದೇಶನದ ʼಜವಾನ್‌ʼ ಈಗಾಗಲೇ ಅನೇಕ ದಾಖಲೆಗಳನ್ನು ಬ್ರೇಕ್‌ ಮಾಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ಸಾವಿರ ಕೋಟಿ ಕ್ಲಬ್‌ ಸೇರಲಿದೆ. ಈ ನಡುವೆ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸೌತ್‌ ಸ್ಟಾರ್‌ ಒಬ್ಬರು ʼಜವಾನ್‌ʼ ನಿರ್ದೇಶಕನ ಮೇಲೆ ಕೋಪ ಮಾಡಿಕೊಂಡಿದ್ದಾರೆ ಎನ್ನುವ ವರದಿಯನ್ನು ʼದಿ ಹಿಂದೂಸ್ತಾನ್‌ ಟೈಮ್ಸ್‌ʼ ಮಾಡಿದೆ.

ಗೌರಿ-ಗಣೇಶ ಹಬ್ಬದ ದಿನವೇ ಭೀಕರ ಅಪಘಾತ; ಮೂವರು ದುರ್ಮರಣ

ʼಜವಾನ್‌ʼ ಸಿನಿಮಾದ ಮೂಲಕ ಸೌತ್‌ ಬ್ಯೂಟಿ, ಲೇಡಿ ಸೂಪರ್‌ ಸ್ಟಾರ್ ನಯನತಾರಾ‌ ಬಿಟೌನ್‌ ಗೆ ಎಂಟ್ರಿ ಕೊಟ್ಟಿದ್ದಾರೆ. ಅವರಿಗೆ ʼಜವಾನ್‌ʼ ಬಿಟೌನ್‌ ನಲ್ಲಿ ದೊಡ್ಡ ಹೆಸರು ತಂದುಕೊಟ್ಟಿದೆ. ಆದರೆ ಅವರು ʼಜವಾನ್‌ʼ ಚಿತ್ರತಂಡದ ಮೇಲೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

“ನಯನತಾರಾ‌ ಅಟ್ಲಿ ಅವರ ಬೇಸರಗೊಂಡಿದ್ದಾರೆ. ಸಿನಿಮಾದಲ್ಲಿ ಅವರು ಲೀಡ್‌ ರೋಲ್‌ ಆಗಿದ್ದರೂ, ಅವರ ಪಾತ್ರವನ್ನು ಕತ್ತರಿಸಲಾಗಿದೆ. ದೀಪಿಕಾ ಅವರ ಪಾತ್ರವನ್ನು ಹೈಲೈಟ್‌ ಮಾಡಿ ತೋರಿಸಲಾಗಿದೆ. ಇದು ಅತಿಥಿ ಪಾತ್ರವೇ ಆಗಿರಲಿಲ್ಲ. ಜವಾನ್ ಸಿನಿಮಾವನ್ನು ಬಹುತೇಕ ಎಸ್‌ಆರ್‌ಕೆ-ದೀಪಿಕಾ ಸಿನಿಮಾದಂತೆ ಮಾಡಲಾಗಿದೆ. ನಯನತಾರಾ ದಕ್ಷಿಣದ ಪ್ರಮುಖ ನಟಿ. ಆದರೆ ʼಜವಾನ್‌ʼ ನಲ್ಲಿ ಅವರನ್ನು ನಡೆಸಿಕೊಂಡ ರೀತಿ ಸರಿಯಾಗಿರಲಿಲ್ಲ. ಈ ಕಾರಣದಿಂದ ಇನ್ಮುಂದೆ ಯಾವುದೇ ಬಾಲಿವುಡ್‌ ಪ್ರಾಜೆಕ್ಟ್‌ ನಲ್ಲಿ ಅವರು ಕಾಣಿಸಿಕೊಳ್ಳಲ್ಲ. ಇನ್ನು ಯಾವುದೇ ಬಾಲಿವುಡ್‌ ಸಿನಿಮಾಗಳನ್ನು ಮಾಡುವುದಿಲ್ಲ” ಎಂದು ಮೂಲಗಳು ತಿಳಿಸಿರುವುದಾಗಿ ʼಹಿಂದೂಸ್ತಾನ್‌ ಟೈಮ್ಸ್‌ʼ ವರದಿ ಮಾಡಿದೆ.

ಊಟದ ನಂತರ ಬಾಳೆಹಣ್ಣು ತಿನ್ನುವುದರಿಂದ ಏನು ಲಾಭ?

ಈ ಹಿಂದೆ ಶಾರುಖ್ ಅವರೊಂದಿಗೆ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದ ದೀಪಿಕಾ ಪಡುಕೋಣೆ, ಜವಾನ್‌ನಲ್ಲಿ ಅತಿಥಿ ಪಾತ್ರವನ್ನು ಮಾಡಿದ್ದಾರೆ. ಆದರೆ ಅವರ ಪಾತ್ರವು ಪ್ರೇಕ್ಷಕರಿಂದ ಹೆಚ್ಚು ಮೆಚ್ಚುಗೆ ಪಡೆದಿದೆ.

ಗಮನಿಸಬೇಕಾದ ವಿಚಾರವೆಂದರೆ ʼಜವಾನ್‌ʼ ಸಕ್ಸಸ್‌ ಮೀಟ್‌ ಸೇರಿದಂತೆ ಇತರೆ ಪ್ರಚಾರ ಕಾರ್ಯದಲ್ಲಿ ನಯನತಾರ ಭಾಗಿಯಾಗಿಲ್ಲ. ಅವರು ಸಾಮಾನ್ಯವಾಗಿ ಯಾವುದೇ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ. ಈ ಕಾರಣದಿಂದ ಅವರು ʼಜವಾನ್‌ʼ ಪ್ರಚಾರದಲ್ಲಿ ಭಾಗಿಯಾಗಿಲ್ಲ ಎನ್ನಲಾಗಿದೆ.

ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಸೈನಿಕರಿಗೆ ಫ್ರೀಯಾಗಿ ಚಹಾ ನೀಡುವ ಅಂಗಡಿಯ ವಿಡಿಯೋ!


Share News

Leave a Reply

Your email address will not be published. Required fields are marked *