Breaking News

ಮಂಗಳೂರು : ಕಾವೂರಿನ ಅಂಬಿಕಾನಗರದ ತಿರುವಿನಲ್ಲಿ ಮರಕ್ಕೆ ಢಿಕ್ಕಿ ಹೊಡೆದ ಬೈಕ್, ಸವಾರ ಸಾವು

Share News

ಮಂಗಳೂರು: ಬೈಕ್‌ ಮರಕ್ಕೆ ಢಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಶುಕ್ರವಾರ ಕಾವೂರಿನ ಅಂಬಿಕಾನಗರದ ತಿರುವಿನಲ್ಲಿ ಸಂಭವಿಸಿದೆ.

ಇದನ್ನೂ ಓದಿ: ಬಂಟ್ವಾಳ : ಮೆಲ್ಕಾರ್ ನಲ್ಲಿ ಮೂವರ ಮೇಲೆ ಚೂರಿ ಇರಿತ ; ವೈಯುಕ್ತಿಕ ವಿಚಾರ ವಿಕೋಪಕ್ಕೇರಿ ಗಲಾಟೆ!

ತೀರ್ಥಹಳ್ಳಿ ನಿವಾಸಿ ವೀರೇಶ್‌ (23) ಮೃತಪಟ್ಟವರು. ಅವರು ಮುಂಜಾನೆ 4 ಗಂಟೆಯ ಸುಮಾರಿಗೆ ಕಾವೂರು ಕಡೆಯಿಂದ ಪಂಜಿಮೊಗರಿನಲ್ಲಿರುವ ತನ್ನ ರೂಮ್‌ ಕಡೆಗೆ ಬೈಕ್‌ನಲ್ಲಿ ತೆರಳುತ್ತಿರುವಾಗ ಹತೋಟಿ ತಪ್ಪಿ ಬೈಕ್‌ ರಸ್ತೆಯ ಎಡಭಾಗದಲ್ಲಿರುವ ಮಣ್ಣಿನ ರಸ್ತೆಯಲ್ಲಿ ಚಲಿಸಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದಿತ್ತು.

ಪರಿಣಾಮ ವೀರೇಶ್‌ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೀರೇಶ್‌ ಸೆಲೂನ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WATCH VIDEO ON YOUTUBE: 15 ವರ್ಷಗಳ ನಂತರ ಮುಖದ ದರುಶನ ನೀಡಿದ ಅಸ್ಸಾಮಿನ ಕಾಮಾಕ್ಯ ದೇವಿಯ ಒಂದು ನೋಟ!


Share News

Leave a Reply

Your email address will not be published. Required fields are marked *