Breaking News

ಮಂಗಳೂರು : ರಸ್ತೆಯಲ್ಲಿನ ಹೊಂಡ ಮುಚ್ಚಿ ಮಾದರಿಯಾದ ಟ್ರಾಫಿಕ್ ಪೊಲೀಸರು; ಸಾಮಾಜಿಕ ಕಳಕಳಿಗೆ ಎಲ್ಲೆಡೆ ಮೆಚ್ಚುಗೆ!

Share News

ಮಂಗಳೂರು: ಪ್ರತಿನಿತ್ಯ ಎಂಬಂತೆ ನಡೆಯುತ್ತಿರುವ ಅಪಘಾತ, ನಿರಂತರ ಟ್ರಾಫಿಕ್‌ ಜಾಮ್‌ನಿಂದ ವಾಹನದಲ್ಲಿ ಸಂಚರಿಸುವವರ ಪಾಲಿಗೆ ನರಕ ಸದೃಶವಾಗಿರುವ ಮಂಗಳೂರಿನ ನಂತೂರು ಸರ್ಕಲ್‌ ರಸ್ತೆ ಹೊಂಡಗುಂಡಿಗಳಿಂದಾಗಿ ಮತ್ತಷ್ಟು ಅಪಘಾತಗಳಿಗೆ ಇಂಬು ನೀಡುತ್ತಿತ್ತು. ಇದೀಗ ಇಲ್ಲಿರುವ ಅಪಾಯಕಾರಿ ಹೊಂಡಗುಂಡಿಗಳನ್ನು ಖುದ್ದಾಗಿ ಟ್ರಾಫಿಕ್‌ ಪೊಲೀಸರೇ ಮುಚ್ಚುವ ಮೂಲಕ ಮಾದರಿಯಾಗಿದ್ದಾರೆ.

ಹಲವು ಸಮಯಗಳಿಂದ ಗುಂಡಿ ಬಿದ್ದಿದ್ದ ನಂತೂರು ಸರ್ಕಲ್‌ ರಸ್ತೆಯ ದುರಸ್ತಿಗೆ ಹೆದ್ದಾರಿ ಇಲಾಖೆ ಮುಂದಾಗಿರಲಿಲ್ಲ. ದಿನನಿತ್ಯ ಈ ಗುಂಡಿಗಳಿಗೆ ದ್ವಿಚಕ್ರ ವಾಹನ ಸವಾರರು ಬಿದ್ದು ಅಪಘಾತವಾಗುವುದು ಸರ್ವೇ ಸಾಮಾನ್ಯವಾದ ದೃಶ್ಯವಾಗಿತ್ತು. ದಿನನಿತ್ಯ ಅಪಘಾತಗಳನ್ನು, ರಸ್ತೆ ಗುಂಡಿಯಲ್ಲಿ ಎದ್ದು ಬಿದ್ದು ಹೋಗುತ್ತಿರುವ ಸವಾರರನ್ನು ನೋಡುತಿದ್ದ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿ ಶುಕ್ರವಾರ ಸ್ವತಃ ಗುಂಡಿ ಮುಚ್ಚಿದ್ದಾರೆ.

ಹಂದಿ ಮಾಂಸ ತಿಂದ ಟಿಕ್‌ ಟಾಕ್‌ ಸ್ಟಾರ್‌ ಲೀನಾ ಮುಖರ್ಜಿಗೆ 2 ವರ್ಷ ಜೈಲು!

ಕದ್ರಿ ಸಂಚಾರ ಪೊಲೀಸ್‌ ಠಾಣೆ ಎಸ್‌ಐ ಈಶ್ವರ್‌ ಸ್ವಾಮಿ, ಎಎಸ್‌ಐ ವಿಶ್ವನಾಥ್‌ ರೈ, ಮಲ್ಲಿಕಾರ್ಜುನ್‌ ಜತೆಗೂಡಿ ಸ್ಥಳೀಯರ ನೆರವಿನೊಂದಿಗೆ ಸಿಮೆಂಟ್‌ ಮಿಶ್ರಿತ ಜಲ್ಲಿಹಾಕಿ ಮುಚ್ಚಿದ್ದಾರೆ. ದೊಡ್ಡ ಗುಂಡಿಗಳನ್ನು ಪೊಲೀಸ್‌ ಸಿಬ್ಬಂದಿಗಳೇ ಬಿಸಿಲಿಗೆ ಹಾರೇ ಹಿಡಿದು ಮುಚ್ಚಿದ್ದಾರೆ. ಈ ವೇಳೆ ಸಂಚಾರ ಮಾಡುತ್ತಿದ್ದ ವಾಹನ ಚಾಲಕ ಚೇತನ್‌ ಎಂಬವರು ಆಗಮಿಸಿ ಪೊಲೀಸರ ಕೆಲಸಕ್ಕೆ ಸಹಕರಿಸಿದರು. ಪೊಲೀಸರ ಸಾಮಾಜಿಕ ಕಳಕಳಿಗೆ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ಯಾರೇ ಮಾಡದ ಎನ್‌ಎಚ್‌ಎಐ ಅಧಿಕಾರಿಗಳು

ನಂತೂರು ಸರ್ಕಲ್‌ ಅವೈಜ್ಞಾನಿಕವಾಗಿದ್ದು ಅಪಘಾತಗಳು ದಿನನಿತ್ಯ ನಡೆಯುತ್ತಿವೆ. ಅದರ ಜತೆಗೆ ಈ ಗುಂಡಿಗಳಿಗೆ ಬಿದ್ದು ಕೆಲವರು ಪ್ರಾಣ ಕಳೆದುಕೊಂಡರೆ, ಇನ್ನು ಹೆಚ್ಚಿನವರು ಗಾಯಾಳುಗಳಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ಆದರೆ ಇವೆಲ್ಲವನ್ನೂ ನೋಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ.

ವಿಶಾಲವಾದ ಅರಣ್ಯದ ನಡುವೆ ತುತ್ತ ತುದಿಯಲ್ಲಿರುವ ಗಣೇಶನ ಮೂರ್ತಿ!

ಮಳೆ ಬಂದ ಸಂದರ್ಭದಲ್ಲಿಈ ಗುಂಡಿಗಳು ಕಾಣದೆ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇನ್ನು ಪೊಲೀಸರು ಸೇರಿದಂತೆ ಹಲವು ಸಾರ್ವಜನಿಕರು ಜಲ್ಲಿಹುಡಿಗಳನ್ನು ಹಾಕಿ ಮುಚ್ಚಿದರೂ ಘನ ವಾಹನಗಳು ಸಂಚರಿಸುವ ಹೆದ್ದಾರಿಯಲ್ಲಿಅದು ನಿಲ್ಲುತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಅಧಿಕಾರಿಗಳು ನಂತೂರು ಸರ್ಕಲಿನಲ್ಲಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಬೇಕಾಗಿದೆ.

ನಂತೂರು ಸರ್ಕಲ್‌ನಲ್ಲಿದಿನನಿತ್ಯ ಅಪಘಾತಗಳಾಗುತ್ತಿದ್ದು ಈ ಹಿನ್ನೆಲೆಯಲ್ಲಿನಮ್ಮಿಂದಾದ ರೀತಿಯಲ್ಲಿರಸ್ತೆ ಗುಂಡಿಗಳನ್ನು ಮುಚ್ಚಿದ್ದೇವೆ.
-ಈಶ್ವರ್‌ ಸ್ವಾಮಿ, ಎಸ್‌ಐ ಕದ್ರಿ ಸಂಚಾರ ಪೊಲೀಸ್‌ ಠಾಣೆ.

ಪ್ರತಿನಿತ್ಯ ನಂತೂರಿನಲ್ಲಿ ಸಂಚರಿಸುತ್ತಿದ್ದೇನೆ. ಹಲವು ಸಮಯಗಳಿಂದ ರಸ್ತೆ ಗುಂಡಿಗಳಿಗೆ ಬಿದ್ದು ಅಪಘಾತಗಳಾದರೂ ಮುಚ್ಚುವ ಕೆಲಸ ಆಗಿಲ್ಲ. ಇದೀಗ ಪೊಲೀಸರೇ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದಾರೆ. ಸಂಬಂಧಪಟ್ಟವರು ಗಮನಹರಿಸಿ ಸಂಪೂರ್ಣ ಗುಂಡಿ ಮುಚ್ಚಬೇಕಾಗಿದೆ.

ಚೈತ್ರಾ ಹೇಳಿದಂತೆ ಕೇಳಿದ್ದೀನಿ – ತಪ್ಪೊಪ್ಪಿಕೊಂಡ ಹಾಲಶ್ರೀ

 


Share News

Leave a Reply

Your email address will not be published. Required fields are marked *