Breaking News

Mangalore : ಹಾಡಹಗಲೇ ಚಿನ್ನಾಭರಣ ಕದ್ದು ಕಳ್ಳರು ಪರಾರಿ..!

Share News

ಮಂಗಳೂರು : ಮಂಗಳೂರು ನಗರದಲ್ಲಿ ಹಾಡಹಗಲೇ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಕುಲಶೇಖರ ಡೈರಿ ಸಮೀಪದ ಅರುಣ್ ಹೆಚ್‌ಎಸ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.

ಇದನ್ನೂ ಓದಿ: ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ವಿರುದ್ಧ ಎಫ್‍ಐಆರ್ ದಾಖಲು!

ಮನೆಯ ಹೆಂಚು ತೆಗೆದು ಒಳ ಹೊಕ್ಕ ಕಳ್ಳರು ಮನೆಯಲ್ಲಿದ್ದ ಕಪಾಟುಗಳನ್ನು ಒಡೆದು ಹಾಕಿ ಮನೆ ಪೂರ್ತಿ ಜಾಲಾಡಿ ಮನೆಯಲ್ಲಿದ್ದ 100 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಮನೆಯವರು ಕೆಲಸಕ್ಕೆ ಹೋದ ಸಂದರ್ಭ ನೋಡಿ ಕಳ್ಳರು ಕೈ ಚಳಕ ತೋರಿದ್ದಾರೆ, ಸ್ಥಳಕ್ಕೆ ಸ್ಥಳಕ್ಕೆ ಕಂಕನಾಡಿ ನಗರ ಠಾಣಾ ನೀರಿಕ್ಷಕರು, ಉಪ ನೀರಿಕ್ಷಕರು, ಹಾಗೂ ಕ್ರೈಂ ಸಿಬ್ಬಂದಿಯವರು ಹಾಗೂ ಶ್ವಾನ ತಂಡ, ಬೆರಳಚ್ಚು ತಂಡ ಭೇಟಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ ಈ ಬಗ್ಗೆದೂರು ದಾಖಲಾಗಿದೆ.

ಇದನ್ನೂ ಓದಿ: ಮಗುವಿಗೆ ಜನ್ಮ ನೀಡಿದ 9 ನೇ ತರಗತಿಯ ಸರ್ಕಾರಿ ಹಾಸ್ಟೆಲ್‌ನ ವಿದ್ಯಾರ್ಥಿನಿ; ವಾರ್ಡನ್ ಅಮಾನತು..!


Share News

Leave a Reply

Your email address will not be published. Required fields are marked *