Breaking News

ಲೋಡ್​​ ಶೆಡ್ಡಿಂಗ್ : ಸಿಎಂ ಸಿದ್ದರಾಮಯ್ಯ ಸೂತ್ರ! ರೈತರಿಗೆ 3 ಪಾಳಿ, 5 ಗಂಟೆ ವಿದ್ಯುತ್​ ಪೂರೈಕೆ!

Share News

ಬೆಂಗಳೂರು:  ಲೋಡ್​​ ಶೆಡ್ಡಿಂಗ್​​ ಲೋಡ್​ ಶೆಡ್ಡಿಂಗ್. ಉಚಿತ ವಿದ್ಯುತ್​ ಕೊಟ್ಟ ಸರ್ಕಾರಕ್ಕೆ ಬರಗಾಲ ಅನ್ನೋ ಪರಿಸ್ಥಿತಿ ಬಂದು ಬಿಡ್ತು. ಈಗ ವಿದ್ಯುತ್​​ಗೂ ಬರ ಬಂದು ಬಿಟ್ಟಿದೆ. ಮಳೆನೂ ಬರ್ತಿಲ್ಲ, ಬೆಳೆನೂ ಸಿಗ್ತಿಲ್ಲ. ಪಂಪ್​ಸೆಟ್​ ಬೋರ್​​ವೆಲ್​ ಹಾಕೋಂಡ್​ ನೀರು ಹರಿಸಿ ಬೆಳೆ ಬೆಳೆಯೋಣ ಅಂದರೆ ಸರ್ಕಾರ ಕರೆಂಟ್​ ಕೊಡ್ತಿಲ್ಲ. ಕಳೆದ 3 ದಿನದಿಂದ ಕತ್ತಲೆಭಾಗ್ಯದ ಬಗ್ಗೆ ವಿಪಕ್ಷಗಳು ಕಾಲೆಳೆದರೂ ಕ್ಯಾರೆ ಎನ್ನದ ಸಿಎಂ ರೈತರು ರೊಚ್ಚಿಗೆದ್ಮೇಲೆ ಇವತ್ತು ಇಂಧನ ಇಲಾಖೆಯವರ ಜೊತೆ ಸಭೆ ನಡೆಸಿದರು.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ ; ಇಬ್ಬರು ದುರ್ಮರಣ!

ರೈತರು ಮತ್ತೆ ಬೀದಿಗಿಳಿಯೋದು ನಿಶ್ಚಿತ
ಇಂಧನ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳೇನೋ ವಿದ್ಯುತ್​ ಸಮಸ್ಯೆ ಆಗಲ್ಲ ಅಂತಿದ್ದಾರೆ. ಹಾಗಂತ ವಿದ್ಯುತ್​ ಕೊರತೆ ಇರೋದನ್ನೂ ಒಪ್ಪಿಕೊಂಡಿದ್ದಾರೆ. ಅಲ್ಲಿಗೆ ರಾಜ್ಯದಲ್ಲಿ ಮತ್ತಷ್ಟು ದಿನ ವಿದ್ಯುತ್​ ಅಭಾವ ಎದುರಾಗೋದು ಖಚಿತ.

ರೈತರು ಮತ್ತೆ ಬೀದಿಗಿಳಿಯೋದು ನಿಶ್ಚಿತ. ಹಾಗಾಗಿನೇ ಬಿಜೆಪಿಯವರು ರೈತರ ಪರ ಹೋರಾಟಕ್ಕೆ ರಣತಂತ್ರ ರೂಪಿಸ್ತಿದ್ದಾರೆ. ವಿದ್ಯುತ್ ಅಭಾವದ ಬಗ್ಗೆ ಬಿಜೆಪಿ ಜಿಲ್ಲಾವಾರು ಮಾಹಿತಿ ಸಂಗ್ರಹಿಸುತ್ತಿದ್ದು ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜಾಗ್ತಿದೆ.

ಇದನ್ನೂ ಓದಿ: ಹಿರಿಯ ಪತ್ರಕರ್ತ ಕೆ.ಎಸ್ ಸಚ್ಚಿದಾನಂದ ಮೂರ್ತಿ ನಿಧನ

ನೀರಿಲ್ಲದೆ ಜಮೀನಿನಲ್ಲಿ ಬೆಳೆಗಳು ಒಣಗುತ್ತಿದ್ದು ರೈತರು ಕಂಗಾಲಾಗಿದ್ದಾರೆ
ಅಂದಹಾಗೇ ಇವತ್ತೂ ರೈತರ ಕಿಚ್ಚು ಕಮ್ಮಿ ಆಗಿಲ್ಲ. ಚಾಮರಾಜನಗರದಲ್ಲಿ ಲೋಡ್‌ ಶೆಡ್ಡಿಂಗ್ ವಿರುದ್ಧ ರೈತರು ಕಿಡಿಕಾರಿದರು. ಕೈಯಲ್ಲಿ ಬಾರುಕೋಲು ಹಿಡಿದು ಪಾದಯಾತ್ರೆ ಮಾಡಿದರು. ಕೆಲಕಾಲ ರಾಷ್ಟ್ರೀಯ ಹೆದ್ದಾರಿಯನ್ನೂ ತಡೆದರು. ಗದಗ ಜಿಲ್ಲೆ ನಾಗಸಮುದ್ರದಲ್ಲಿ ನೀರಿಲ್ಲದೆ ಜಮೀನಿನಲ್ಲಿ ಬೆಳೆಗಳು ಒಣಗುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಈರುಳ್ಳಿ, ಮೆಣಸಿನಕಾಯಿ, ಜೋಳ, ಶೇಂಗಾ ಬೆಳೆ ನಾಶ ಆಗಿದೆ. ಮಳೆ ಇಲ್ಲದೆ ರೈತ ಕಂಗಾಲು ಆಗಿದ್ರು, ಇದೀಗ ಲೋಡ್ ಶೆಡ್ಡಿಂಗ್ ಬರೆ ಬಿದ್ದಿದ್ದು, ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ಕೊಟ್ಟಿದ್ದಾರೆ.

WATCH VIDEO ON YOUTUBE: ಸಾರ್ವಜನಿಕವಾಗಿ ಕಾಣಿಸಿಕೊಂಡ ನಟ ಸಂಜಯ್ ಕಪೂರ್!


Share News

Leave a Reply

Your email address will not be published. Required fields are marked *