Breaking News

ಕುಂದಾಪುರ : ಹತ್ತನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ; ಪೋಕ್ಸೋ ಪ್ರಕರಣ ದಾಖಲು!

Share News

ಕುಂದಾಪುರ, ನವೆಂಬರ್ 11: ಹತ್ತನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ನೀಡಿದ ಆರೋಪದಲ್ಲಿ ಪ್ರೌಢಶಾಲಾ ಶಿಕ್ಷಕರೊಬ್ಬರ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕ..!

ಬಿಜೂರು ಪ್ರೌಢ ಶಾಲೆಯ ಶಿಕ್ಷಕ ಸುಬ್ರಹ್ಮಣ್ಯ ಮದ್ದೋಡಿ ವಿರುದ್ದ ಪ್ರಕರಣ ದಾಖಲಾಗಿದೆ. ಸೆ. 26ರಂದು ವಿದ್ಯಾರ್ಥಿನಿ ಶಾಲೆಗೆ ಹೋಗಿ ಮನೆಗೆ ಬಂದವಳು ಇನ್ನು ಶಾಲೆಗೆ ಹೋಗುವುದಿಲ್ಲ ಎಂದಿದ್ದಾಳೆ. ಮನೆಯವರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಶಿಕ್ಷಕ ಸುಬ್ರಹ್ಮಣ್ಯ ಮದ್ದೋಡಿ ಕೊಠಡಿಗೆ ಕರೆಸಿಕೊಂಡು ಟ್ಯೂಷನ್‌ಗೆ ಯಾಕೆ ಹೋಗುತ್ತೀಯಾ? ನಾನು ಹೇಳಿ ಕೊಟ್ಟಷ್ಟು ಹೇಳಿ ಕೊಡ್ತಾರಾ? ಅವರ ಮನೆಯ ಪಾತ್ರೆ ತೊಳೆಯಲಿಕ್ಕೆ ಹೋಗುವುದಾ ಎಂದು ಕೇಳಿದ್ದಲ್ಲದೇ ಅವಾಚ್ಯ ಪದ ಬಳಸಿ ಅವಮಾನಿಸಿದ್ದಾರೆ ಎಂದಿದ್ದಾಳೆ.

ಇದನ್ನೂ ಓದಿ: ಪುತ್ತೂರು : ಅರುಣ್ ಪುತ್ತಿಲ ಪರಿವಾರದ ಕಚೇರಿಗೆ ತಲ್ವಾರ್ ಹಿಡಿದು ಬಂದ ಐದು ಮಂದಿ ಯುವಕರ ತಂಡ…!

ರಾತ್ರಿ ಮತ್ತೆ ವಿಚಾರಿಸಿದಾಗ, ಶಿಕ್ಷಕ ಸುಬ್ರಹ್ಮಣ್ಯ ಮದ್ದೋಡಿ ತನ್ನ ಮೈಕೈ ಗಲ್ಲ ಮುಟ್ಟಿ ಯಾರಿಗೂ ಹೇಳಬೇಡ. ನಿನಗೆ ನಾನು ಬೇಕಾ? ನಿನ್ನ ತಂದೆ ತಾಯಿ ಬೇಕಾ? ಎಂದು ಲೈಂಗಿಕ ಕಿರುಕುಳ ನೀಡಿರುವುದಾಗಿ ಮನೆಯವರಲ್ಲಿ ತಿಳಿಸಿದ್ದಾಳೆ. ಬಳಿಕ ಊರವರು ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದು, ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

WATCH VIDEO ON YOUTUBE: ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಮಹಿಷಾ ಮರ್ದಿನಿ ನೃತ್ಯ ರೂಪಕ


Share News

Leave a Reply

Your email address will not be published. Required fields are marked *