Breaking News

ಶೂನ್ಯಕ್ಕೆ ಔಟಾದ ಕೊಹ್ಲಿ ; ಇಂಗ್ಲೆಂಡ್ ಗೆ 230 ರನ್ ಗಳ ಗುರಿ ; 5ವಿಕೆಟ್ ಪತನ!

Share News

ಲಕ್ನೋ: ಆಡಿದ 5 ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಅಜೇಯವಾಗಿ ಮುನ್ನುಗ್ಗುತ್ತಿದ್ದ ಭಾರತ ತಂಡ ಇಂಗ್ಲೆಂಡ್​(IND vs ENG) ವಿರುದ್ಧದ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದೆ. ಭರ್ತಿ 50 ಓವರ್​ ಆಡಿ 9 ವಿಕೆಟ್​ನಷ್ಟಕ್ಕೆ 229 ರನ್ ಗಳಿಸಿದೆ. ಇಂಗ್ಲೆಂಡ್​ ಗೆಲುವಿಗೆ 230 ರನ್​ ಬಾರಿಸಬೇಕಿದೆ.

ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಭಾರತ ಆರಂಭದಲ್ಲೇ ಆಘಾತ ಎದುರಿಸಿತು. ಶುಭಮನ್​ ಗಿಲ್​ 9 ರನ್​ಗೆ ವಿಕೆಟ್​ ಒಪ್ಪಿಸಿದರು. ಆ ಬಳಿಕ ಬಂದ ವಿರಾಟ್​ ಕೊಹ್ಲಿ ಅವರು 9 ಎಸೆತ ಎದುರಿಸಿ ಶೂನ್ಯಕ್ಕೆ ವಿಕೆಟ್​ ಕೈ ಚೆಲ್ಲಿದರು. ಇದು ವಿರಾಟ್​ ಕೊಹ್ಲಿ ಅವರ ವಿಶ್ವಕಪ್​ ಮೊದಲ ಡಕ್​ ಔಟ್​ ಆಗಿದೆ. ಕೊಹ್ಲಿ ಬೆನ್ನಲ್ಲೇ ಶ್ರೇಯಸ್​ ಅಯ್ಯರ್​ ಕೂಡ 4 ರನ್​ಗೆ ಆಟ ಮುಗಿಸಿದರು. 40 ರನ್​ಗೆ ಮೂರು ವಿಕೆಟ್​ ಕಳೆದುಕೊಂಡ ಭಾರತ ಆರಂಭಿಕ ಆಘಾತ ಎದುರಿಸಿತು.

ವಿರಾಟ್​ ಅವರು ಶೂನ್ಯಕ್ಕೆ ಔಟಾಗುತ್ತಿದ್ದಂತೆ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ ಗುಂಪು ಭಾರ್ಮಿ ಆರ್ಮಿ ಟ್ರೋಲ್ ಮಾಡಿದ್ದಾರೆ. ಕೊಹ್ಲಿಯ ಫೋಟೋವನ್ನು ಬಾತುಕೋಳಿಯ ತಲೆಗೆ ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಈಮೂಲಕ ಕೊಹ್ಲಿ ಡಕೌಟ್‌ ಅನ್ನು ಡಕ್‌ಗೆ ಹೋಲಿಕೆ ಮಾಡಿ ಟ್ರೋಲ್ ಮಾಡಿದ್ದಾರೆ. ಡೇವಿಡ್ ವಿಲ್ಲಿ ಎಸೆತದಲ್ಲಿ ಅತ್ಯಂತ ಕಷ್ಟದ ಕ್ಯಾಚನ್ನು ಸ್ಟೋಕ್ಸ್​ ಪೆವಿಕಲ್ ಗಮ್​ ಹಾಕಿದ ರೀತಿಯಲ್ಲಿ ಹಿಡಿದರು.​

ರೋಹಿತ್​ ಆಸರೆ

ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ನಾಯಕ ರೋಹಿತ್​ ಶರ್ಮ ಅವರು ಎದೆಗುಂದದೆ ಇಂಗ್ಲೆಂಡ್​ ಬೌಲಿಂಗ್​ ದಾಳಿಯನ್ನು ದಿಟ್ಟ ರೀತಿಯಲ್ಲಿ ಎದುರಿಸಿದರು. ಆರಂಭದಿಂದಲೇ ಆಂಗ್ಲರಿಗೆ ಸಿಕ್ಸರ್​, ಬೌಂಡರಿಗಳ ರುಚಿ ತೋರಿಸುತ್ತಾ ತಮ್ಮ ಎಂದಿನ ಶೈಲಿಯಲ್ಲೇ ಆಡ ತೊಡಗಿದರು. ಇವರಿಗೆ ಕೆಲ ಕಾಲ ರಾಹುಲ್​ ಉತ್ತಮ ಬೆಂಬಲ ನೀಡಿದರು.

ಜೀವದಾನ ಪಡೆದ ರೋಹಿತ್​

ಬಿರುಸಿನ ಬ್ಯಾಟಿಂಗ್​ ನಡೆಸುತ್ತಿದ್ದ ರೋಹಿತ್​ ಅವರು 33 ರನ್​ ಗಳಿಸಿದ ವೇಳೆ ಎಲ್​ಬಿಡಬ್ಲ್ಯುನಿಂದ ಜೀವದಾನ ಪಡೆದರು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಅವರು ಅರ್ಧಶತಕ ಬಾರಿಸಿ ಸಂಭ್ರಮಿಸಿದರು. ಇದೇ ವೇಳೆ ಏಕದಿನ ಕ್ರಿಕೆಟ್​ನಲ್ಲಿ ಕ್ಯಾಲೆಂಡರ್​ ವರ್ಷದಲ್ಲಿ 1000 ರನ್​ ಪೂರ್ತಿಗೊಳಿಸಿದ ಸಾಧನೆ ಮಾಡಿದರು. ಇದು ಕ್ಯಾಲೆಂಡರ್ ವರ್ಷದಲ್ಲಿ ರೋಹಿತ್​ 1000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಐದನೇ ನಿದರ್ಶನ. 2013, 2017, 2018 ಮತ್ತು 2019 ರಲ್ಲಿ ಈ ಸಾಧನೆ ಮಾಡಿದ್ದರು.

ಇನ್ನು ಪಂದ್ಯ ಭಾರಿ ರೋಚಕತೆಯಲ್ಲಿ ಜರುಗುತ್ತಿದ್ದು, ಇಂಗ್ಲೆಂಡ್ ನ 5 ವಿಕೆಟ್ ಪತನ ಗೊಂಡಿದ್ದು ಭಾರತ ಜಯದತ್ತ ಸಾಗುತ್ತಿದೆ.


Share News

Leave a Reply

Your email address will not be published. Required fields are marked *