Breaking News

ಕಾಸರಗೋಡು : ಗ್ರಾಹಕನಾಗಿ ಬಂದು ಅಂಗಡಿ ಮಾಲೀಕನ ಮೊಬೈಲ್ ಕಳ್ಳತನ!

Share News

ಕಾಸರಗೋಡು ನವೆಂಬರ್ 2: ಅಂಗಡಿಯ ಮಾಲೀಕನ ಮೊಬೈಲ್ ನ್ನು ಅಂಗಡಿಗೆ ಸಾಮಾನು ತೆಗೆದುಕೊಳ್ಳಲು ಬಂದಿದ್ದ ಗ್ರಾಹಕನೊಬ್ಬ ಕಳ್ಳತನ ಮಾಡಿದ ಘಟನೆ ಕಾಸರಗೋಡಿನ ಬೇಕಲ ಠಾಣಾ ವ್ಯಾಪ್ತಿಯ ಚಿತ್ತಾರಿಯಲ್ಲಿ ನಡೆದಿದೆ.

ಇದನ್ನೂ ಓದಿ: 8 ತಿಂಗಳ ಗರ್ಭಿಣಿ ನಟಿ ಪ್ರಿಯಾ ಹೃದಯಾಘಾತದಿಂದ ನಿಧನ!

ಚಿತ್ತಾರಿ ಚೇಟುಕುಂಡು ಎಂಬಲ್ಲಿನ ಸೂಪರ್ ಮಾರ್ಕೆಟ್ ನಲ್ಲಿ ಈ ಕಳ್ಳತನ ನಡೆದಿದ್ದು ಮೊಬೈಲ್ ಫೋನ್ ಕಳವು ಮಾಡಿ ಪರಾರಿಯಾಗುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಕ್ಟೋಬರ್ 18ರಂದು ರಾತ್ರಿ 10:45ರ ಸುಮಾರಿಗೆ ಸೂಪರ್ ಮಾರ್ಕೆಟ್ ಗೆ ಸಾಮಗ್ರಿ ಖರೀದಿಸುವ ನೆಪದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಈ ಕೃತ್ಯ ನಡೆಸಿದ್ದಾನೆ. ಆತ ಕೇಳಿದ ಸಾಮಗ್ರಿಯನ್ನು ಮಾಲಕ ಹುಡುಕುತ್ತಿದ್ದಂತೆ ಮೇಜಿನ ಮೇಲೆ ಇಟ್ಟಿದ್ದ ಮೊಬೈಲ್ ಫೋನ್ ಅನ್ನು ಎಗರಿಸಿ ಆತ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಆಪತ್ಭಾಂದವ, ಜೀವ ರಕ್ಷಕ ಚಾರ್ಮಾಡಿ ಹಸನಬ್ಬಗೆ ಒಲಿಯಿತು ರಾಜ್ಯೋತ್ಸವ ಪ್ರಶಸ್ತಿ!

ಕಳವಾದ ಮೊಬೈಲ್ ಮೌಲ್ಯ ಸುಮಾರು 30 ಸಾವಿರ ರೂ. ಎಂದು ಹೇಳಲಾಗಿದೆ.ಈ ಬಗ್ಗೆ ಸೂಪರ್ ಮಾರ್ಕೆಟ್ ಮಾಲಕ ಮುಹಮ್ಮದ್ ರಫೀಕ್ ಬೇಕಲ ಠಾಣೆಗೆ ದೂರು ನೀಡಿದ್ದಾರೆ.

WATCH VIDEO ON YOUTUBE: ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಮಹಿಷಾ ಮರ್ದಿನಿ ನೃತ್ಯ ರೂಪಕ


Share News

Leave a Reply

Your email address will not be published. Required fields are marked *