Breaking News

ಕರ್ನಾಟಕಕ್ಕೆ ಮತ್ತೆ ಬಿಗ್ ಶಾಕ್ ; ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ!

Share News

ಬೆಂಗಳೂರು: ಕಾವೇರಿ ನೀರು (Cauvery water) ಹರಿಸುವ ವಿಚಾರದಲ್ಲಿ ಕರ್ನಾಟಕಕ್ಕೆ (Karnataka) ಮತ್ತೊಂದು ಶಾಕ್ ಎದುರಾಗಿದೆ. ಇಂದು ಕಾವೇರಿ ನೀರು ಬಿಡುಗಡೆ ವಿಚಾರವಾಗಿ ನಡೆದ ಸಭೆಯಲ್ಲಿ CWRC ಆದೇಶವನ್ನು CWMA ಎತ್ತಿ ಹಿಡಿದಿದ್ದು, ಹಳೆಯ ಆದೇಶದಂತೆ 18 ದಿನ 3000 ಕ್ಯೂಸೆಕ್​​ ನೀರು ಬಿಡುವಂತೆ ಆದೇಶ ನೀಡಿದೆ. ಅಕ್ಟೋಬರ್​ 15ರ ವರೆಗೂ ತಮಿಳುನಾಡಿಗೆ (Tamil Nadu) ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಸಭೆಯಲ್ಲಿ ಆದೇಶ ನೀಡಲಾಗಿದೆ. ಇದರೊಂದಿಗೆ ರಾಜ್ಯ ಸರ್ಕಾರಕ್ಕೆ (State Govt) ನೀರು ಹರಿಸಬೇಕಾದ ಸಂದ್ಗಿತ ಸ್ಥಿತಿ ಎದುರಾಗಿದ್ದು, ಇಂದು ನಿವೃತ್ತ ನಾಯಮೂರ್ತಿಗಳು ಹಾಗೂ ತಜ್ಞರ ಸಭೆ ನಡೆಸಲಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, CWRC ಆದೇಶವನ್ನು ಪಾಲಿಸಿ ನೀರು ಹರಿಸುತ್ತಾರಾ ಅಥವಾ ಕಠಿಣ ನಿರ್ಧಾರವನ್ನು ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.

ಕಳೆದ ಬಾರಿಯ ಆದೇಶದ ನಡುವೆಯೂ ಈ ಬಾರಿ ಆದರೂ ಸಿಬ್ಲ್ಯೂಎಂಎ ಸಭೆಯ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ ಹಿಂದಿನ ಆದೇಶವನ್ನು ಎತ್ತಿ ಹಿಡಿದ ಸಿಬ್ಲ್ಯೂಎಂಎ ಕರ್ನಾಟಕಕ್ಕೆ ಶಾಕ್​ ನೀಡಿದ್ದಾರೆ. ಇವತ್ತಿನ ಸಭೆಯಲ್ಲಿ ಕರ್ನಾಟಕ ನೀರಾವರಿ ಅಧಿಕಾರಿ ರಾಕೇಶ್​ ಸಿಂಗ್​ ಅವರು ನೇರವಾಗಿ ಭಾಗಿಯಾಗಿ ಕರ್ನಾಟಕ ಜಲಾಶಯದ ನೀರಿನ ಬಗ್ಗೆ ಮಾಹಿತಿ ನೀಡಿದ್ದರು.

ಆದರೆ ತಮಿಳುನಾಡಿನ ಅಧಿಕಾರಿಗಳು ತಮ್ಮ ಮೊಂಡು ವಾದವನ್ನ ಮುಂದುವರೆಸಿದ್ದರು. ಈಗ ಬಾಕಿ ಉಳಿಸಿಕೊಂಡಿರುವ 12 ಟಿಎಂಸಿ ನೀರನ್ನು ಮೊದಲು ಬಿಡುಗಡೆ ಮಾಡುವಂತೆ ಪಟ್ಟು ಹಿಡಿದಿದ್ದರು. ಇದರಿಂದ ಕರ್ನಾಟಕ ಅಧಿಕಾರಿಗಳು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು. ಇಷ್ಟಾದರೂ ಪ್ರಾಧಿಕಾರದ ಅಧಿಕಾರಿಗಳು ಈ ಹಿಂದಿನ ಆದೇಶವನ್ನೇ ಎತ್ತಿ ಹಿಡಿದಿದ್ದಾರೆ.

ಬುರ್ಖಾ ಧರಿಸಿ ವಿಭಿನ್ನವಾಗಿ ಪ್ರತಿಭಟನೆಗೆ ಇಳಿದ ವಾಟಾಳ್ ನಾಗರಾಜ್…!

ಸುಪ್ರೀಂ ಕೋರ್ಟ್​​ನಲ್ಲಿ ಪ್ರಶ್ನೆ ಮಾಡಲು ಆಗುತ್ತಾ?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಸಿಡಬ್ಲ್ಯೂಎಂಎ ಆದೇಶ ಆದೇಶ ಏನ್ ಬಂದಿದೆ ಅಂತ ಗೊತ್ತಿಲ್ಲ, ಸದ್ಯ ಮಾಹಿತಿ ಪಡೆದುಕೊಳ್ಳುತ್ತೇನೆ. ಇವತ್ತು ಪ್ರಾಧಿಕಾರದಲ್ಲಿ ಸಭೆ ಇತ್ತು, ಆದೇಶದ ಬಗ್ಗೆ ಕಾನೂನು ತಜ್ಞರ ಜತೆ ಚರ್ಚೆ ಮಾಡ್ತೇವೆ. ಈ ಆದೇಶವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನೆ ಮಾಡಬಹುದಾ ಅಂತ ಕಾನೂನು ತಂಡ್ ಜತೆ ಮಾತಾಡ್ತೇವೆ.

ಇವತ್ತು ನಿವೃತ್ತ ನ್ಯಾಯಾಧೀಶರ ಸಭೆ ಕರೆದಿದ್ದೇನೆ. ಇವರ ಜತೆಗೂ ಮಾತಾಡಿ ಮುಂದೇನು ಮಾಡಬೇಕು ಅಂತ ನೋಡ್ತೇವೆ. ನಾವು ನಮ್ಮ ಎಲ್ಲಾ ವಾಸ್ತವ ಅಂಶಗಳನ್ನು ಸಿಡಬ್ಲ್ಯೂಆರ್‌ಸಿ, ಸಿಡಬ್ಲ್ಯೂಎಂಎ ಮುಂದೆ ಇಟ್ಟಿದ್ದೇವೆ. ಆದರೂ ನಮಗೆ ನ್ಯಾಯ ಸಿಕ್ತಾ ಇಲ್ಲ, ಇವತ್ತು ಮಾತಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳತ್ತೇವೆ ಎಂದು ಹೇಳಿದ್ದಾರೆ.

ಕರ್ನಾಟಕ ಬಂದ್ : ಬೆಂಗಳೂರಿಗೆ ಆಗಮಿಸುವ ಮತ್ತು ನಿರ್ಗಮಿಸುವ 44 ವಿಮಾನ ಹಾರಾಟ ರದ್ದು!

ಕರ್ನಾಟಕದ ಮತ್ತು ತಮಿಳುನಾಡು ಮುಂದಿಟ್ಟ ವಾದ ಏನು?

ಸಭೆಯಲ್ಲಿ ಸಿಡಬ್ಲ್ಯೂಎಂಎ ಚೇರ್ಮನ್​ ಎಸ್​ಕೆ ಹಾಲ್ದಾರ್​, ಸಿಡಬ್ಲ್ಯೂಆರ್​ಸಿ ಚೇರ್ಮನ್​ ವಿನೀತ್​ ಗುಪ್ತಾ ಅವರೊಂದಿಗೆ ಕರ್ನಾಟಕ ಹಾಗೂ ತಮಿಳುನಾಡಿನ ಅಧಿಕಾರಿಗಳು ಭಾಗಿಯಾಗಿದ್ದರು.

ಸಭೆಯಲ್ಲಿ ತಮಿಳುನಾಡು ನಿತ್ಯ 12,500 ಕ್ಯೂಸೆಕ್​ ನೀರು ಬಿಡುಗಡೆ ಮಾಡಲು ವಾದ ಮಂಡಿಸಿತ್ತು. ಅಕ್ಟೋಬರ್ ತಿಂಗಳಿನಲ್ಲಿ 22 ಟಿಎಂಸಿ ನೀರು ಹರಿಸಲು ಒತ್ತಾಯ ಮಾಡಿದ್ದರು. ಈ ವರೆಗೂ 70 ಟಿಎಂಸಿ ನೀರು ಹರಿಸಿದ್ದು, ಬಾಕಿ ಉಳಿದ 83 ಟಿಎಂಸಿ ನೀರು ಹರಿಸಲು ಬೇಡಿಕೆ ಇಟ್ಟಿದ್ದರು.

ಪಾರಿವಾಳವನ್ನು ರಕ್ಷಿಸಲು ಹೋದ ಯುವಕರು ತೊಂದರೆಗೆ ಒಳಗಾದ ಮಂಗಳೂರಿನ ವಿಡಿಯೋ!

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕರ್ನಾಟಕ ಅಧಿಕಾರಿ, ಕಾವೇರಿ ಕೊಳ್ಳದಲ್ಲಿ ಶೇಕಡಾ 53 ರಷ್ಟು ಮಳೆ ಕೊರತೆ ಈ ವರ್ಷ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ನೀರು ಹರಿಸುವ ಸ್ಥಿತಿಯಲ್ಲಿಲ್ಲ. ಜನ ಆಕ್ರೋಶರಾಗಿದ್ದು ಈಗಾಗಲೇ ಸರಣಿ ಬಂದ್​ಗಳು ನಡೆಯುತ್ತಿದೆ. ಇಂಥ ಸ್ಥಿತಿಯಲ್ಲಿ ನೀರು ಹರಿಸುವುದು ಅಸಾಧ್ಯ ಎಂದು ವಾದ ಮಂಡಿಸಿದ್ದರು.


Share News

Leave a Reply

Your email address will not be published. Required fields are marked *