Breaking News

ಮಗುವಿನ ಪ್ರಜ್ಞೆ ತಪ್ಪಿಸಲು ಮುಖಕ್ಕೆ ದಿಂಬಿನಿಂದ ಒತ್ತಿ ಹಿಡಿದೆ ಆದರೆ ಮಗು ಸಾವನ್ನಪ್ಪಿತ್ತು; ತಪ್ಪೊಪ್ಪಿಕೊಂಡ ಸುಚನಾ ಸೇಠ್‌

Share News

ಬೆಂಗಳೂರು: ʼನನಗೆ ಮಗನ ಮೇಲೆ ಅಪಾರ ಪ್ರೀತಿಯಿತ್ತು, ಅದಕ್ಕಾಗಿಯೇ ಮಗುವನ್ನು ಕೊಂದೆʼ ಎಂದು ಗೋವಾದಲ್ಲಿ ಮಗುವನ್ನು ಕೊಂದು ಬ್ಯಾಗಿನಲ್ಲಿ ಹಾಕಿ ತಂದ ಹಂತಕಿ, ಕಿಲ್ಲರ್‌ ಸಿಇಒ (Killer CEO) ಸುಚನಾ ಸೇಠ್‌ (Suchana Seth) ಹೇಳಿದ್ದಾಳೆ.

ಮಗು ಹತ್ಯೆ ಪ್ರಕರಣದಲ್ಲಿ ಮೈಂಡ್‌ಫುಲ್‌ ಎಐ ಲ್ಯಾಬ್ಸ್‌ ಸಿಇಒ ಸುಚನಾ ಸೇಠ್ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ. ಮಗುವಿನ ಮೇಲಿನ ಪ್ರೀತಿ ಹಾಗೂ ಮಾಜಿ ಗಂಡನ ಮೇಲಿನ ದ್ವೇಷದಿಂದಾಗಿಯೇ ಈ ಕೊಲೆ ಮಾಡಿದ್ದೇನೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ.

ಇದನ್ನೂ ಓದಿ: ಹೆತ್ತ ನಾಲ್ಕು ವರ್ಷದ ತನ್ನ ಮಗುವನ್ನೇ ಕೊಂದು ಕಾರಿನಲ್ಲಿ ಶವವನ್ನು ಸಾಗಿಸಿದ ತಾಯಿ..! ಅರೆಸ್ಟ್ ಆಗಿದ್ದು ಹೇಗೆ?

ತನ್ನ ದಿನಚರಿ ಹೇಳಿ ಬಿಡುತ್ತೆ ಹಾಗು ತಂದೆಯ ಜೊತೆ ಅಟ್ಯಾಚ್‌ಮೆಂಟ್ ಹೆಚ್ಚಾಗುತ್ತೆ ಎಂಬ ಕಾರಣದಿಂದ ಪತಿ ವೆಂಕಟರಮಣ ಕರೆ ಮಾಡಿದಾಗ ಸುಚನಾ ಅದನ್ನು ರಿಸೀವ್ ಮಾಡಿರಲಿಲ್ಲ. ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಮಗು ತಂದೆ ಜೊತೆ ಹೋಗಿಬಿಡಬಹುದು ಹಾಗು ಕೋರ್ಟ್ ಕೂಡ ಇದಕ್ಕೆ ಸಮ್ಮತಿ ಸೂಚಿಸಬಹುದು ಎಂಬ ಕಾರಣಕ್ಕೆ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

“ನಮ್ಮ ವಿಚ್ಛೇದನ ಕೋರ್ಟ್‌ನಲ್ಲಿತ್ತು. ವಾರಕ್ಕೊಮ್ಮೆ ಪತಿ ವೆಂಕಟರಮಣನಿಗೆ ಮಗುವನ್ನು ವಿಡೀಯೋ ಕಾಲ್ ಮೂಲಕ ತೋರಿಸ್ಬೇಕಿತ್ತು. ಅದು ನನಗೆ ಇಷ್ಟ ಇರಲಿಲ್ಲ. ನನ್ನ ಮಗು ಕಂಡರೆ ನನಗೆ ಬಹಳ ಪ್ರೀತಿ. ಹೀಗಾಗಿ ನಾನು ಮಗುವಿನ ಪ್ರಜ್ಞೆ ತಪ್ಪಿಸಲು ಮುಖಕ್ಕೆ ದಿಂಬಿನಿಂದ ಒತ್ತಿ ಹಿಡಿದೆ. ಮಗು ಪ್ರಜ್ಞೆ ತಪ್ಪಿದೆ ಎಂದುಕೊಂಡಿದ್ದೆ. ಆದರೆ ಮಗು ಸಾವನ್ನಪ್ಪಿತ್ತು. ಇದೇ ನೋವಿನಲ್ಲಿ ಕೈ ಕುಯ್ದು ಆತ್ಮಹತ್ಯೆಗೆ ಯತ್ನಿಸಿದೆ. ಅದು ಸಾಧ್ಯವಾಗಿಲ್ಲ. ಗಾಬರಿಯಲ್ಲಿ ಏನೂ ಮಾಡಬೇಕೆಂದು ತೋಚದೆ ಸೂಟ್‌ಕೇಸ್‌ನಲ್ಲಿ ಹಾಕಿ ಪರಾರಿಯಾಗಲು ಯತ್ನಿಸಿದೆ” ಎಂದು ಸುಚನಾ ಸೇಠ್‌ ಹೇಳಿದ್ದಾಳೆ.

ಇದನ್ನೂ ಓದಿ: ಜನವರಿ 14ರಿಂದ ಮತ್ತೆ ರಾತ್ರಿ ಇಡೀ ಯಕ್ಷಗಾನ ಪ್ರದರ್ಶನ!

ಇಂದು ಆಪ್ತರು, ಕುಟುಂಬಸ್ಥರಿಗೆ ಮೃತ ಮಗುವಿನ ಅಂತಿಮ ದರ್ಶನಕ್ಕೆ ಯಶವಂತಪುರದ ಬಳಿಯ ಬ್ರಿಗೇಡ್ ಗೇಟ್‌ವೇ ರೆಸಿಡೆನ್ಸಿಯ ಫ್ಲ್ಯಾಟ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನದ ಬಳಿಕ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ನಿನ್ನೆ ಮಧ್ಯರಾತ್ರಿ 1.45ರ ಸುಮಾರಿಗೆ ಹಿರಿಯೂರಿನಿಂದ ಬೆಂಗಳೂರಿಗೆ ಮೃತದೇಹವನ್ನು ಕುಟುಂಬಸ್ಥರು ತಂದಿದ್ದಾರೆ. ಅಂತ್ಯಕ್ರಿಯೆಗೆ ಕುಟುಂಬ ತಯಾರಿ ಮಾಡಿಕೊಳ್ಳುತ್ತಿದೆ. ಬ್ರಿಗೇಡ್ ಅಪಾರ್ಟ್ಮೆಂಟ್‌ನಲ್ಲಿ ಸ್ಥಳೀಯ ಪೊಲೀಸರು ಬಿಗಿ ಭದ್ರತೆ ಹಾಕಿದ್ದಾರೆ. ಗೋವಾ ಪೊಲೀಸರು ಕೂಡ ಹೆಚ್ಚಿನ ತನಿಖೆಗಾಗಿ ಫ್ಲಾಟ್‌ನಲ್ಲಿ ಬೀಡು ಬಿಟ್ಟಿದ್ದಾರೆ.

ಸುಚನಾ ಸೇಠ್‌ ಅವರನ್ನು ಈಗಾಗಲೇ ಆರು ದಿನಗಳ ಕಾಲ ಗೋವಾ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಕೃತ್ಯ ನಡೆದ ಸ್ಥಳದಲ್ಲಿ ಸ್ಪಾಟ್ ಇನ್ವೆಷ್ಟಿಗೇಷನ್ ನಡೆಯುತ್ತಿದೆ. ಮಗುವಿನ ಮೃತದೇಹದಲ್ಲಿ ಯಾವುದೇ ಗಾಯಗಳಿಲ್ಲ. ಎದೆ ಹಾಗು ಮುಖದ ಭಾಗ ಮಾತ್ರ ಊದಿಕೊಂಡಿದೆ. ಸದ್ಯ ಸುಚನಾ ಸ್ಟೇಟ್‌ಮೆಂಟನ್ನು ಪಡೆದುಕೊಂಡ ಬಳಿಕ ಕೃತ್ಯಕ್ಕೆ ಬಳಸಿದ್ದ ದಿಂಬುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

WATCH VIDEO ON YOUTUBE: ನೀರಿಗೆ ಬಿದ್ದಿದ್ದಾನೆಂದು ಭಾವಿಸಿ ವ್ಯಕ್ತಿ ಒಬ್ಬರನ್ನು ರಕ್ಷಿಸಲು ಮುಂದಾದ ಆನೆ!


Share News

Leave a Reply

Your email address will not be published. Required fields are marked *