Breaking News

ಗುಜರಾತ್ ನಲ್ಲಿ ಭಾರಿ ಮಳೆ ; ಸಿಡಿಲು ಬಡಿದು ಒಂದೇ ದಿನ 20 ಮಂದಿ ಸಾವು!

Share News

ಕಚ್‌: ಗುಜರಾತ್‌ನಲ್ಲಿ ನಿನ್ನೆ ಅಕಾಲಿಕ ಮಳೆಯಿಂದಾಗಿದ್ದು, ಈ ಸಮಯ ಭಾರೀ ಸಿಡಿಲಾರ್ಭಟ ನಡೆದಿದೆ. ಸಿಡಿಲು ಬಡಿದು ಒಂದೇ ದಿನದಲ್ಲಿ 20 ಜನರು ಸಾವನ್ನಪ್ಪಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ರಾಜ – ಮಹಾರಾಜ ಕಂಬಳದ ಪಲಿತಾಂಶ ಇಲ್ಲಿದೆ!

ಗುಜರಾತ್‌ನ ವಿವಿಧ ನಗರಗಳಲ್ಲಿ ಪ್ರತಿಕೂಲ ಹವಾಮಾನ ಮತ್ತು ಸಿಡಿಲಿನಿಂದ ಅನೇಕರು ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದು ಅತೀವ ದುಃಖವಾಗಿದೆ. ಈ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ತುಂಬಲಾರದ ನಷ್ಟವಾಗಿದೆ. ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಶಾ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ತೇಜಸ್‌ ಯುದ್ಧ ವಿಮಾನದಲ್ಲಿ ಹಾರಾಡಿದ ಪ್ರಧಾನಿ ನರೇಂದ್ರ ಮೋದಿ

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಇಂದು (ನ.27) ಮಳೆ ಕಡಿಮೆಯಾಗುವ ನಿರೀಕ್ಷೆಯಿದೆ. ಗುಜರಾತ್‌ನ 252 ತಾಲೂಕುಗಳ ಪೈಕಿ 234 ತಾಲೂಕುಗಳಲ್ಲಿ ಭಾನುವಾರ ಮಳೆಯಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ (ಎಸ್‌ಇಒಸಿ) ದತ್ತಾಂಶ ತಿಳಿಸುತ್ತದೆ.

WATCH VIDEO ON YOUTUBE: ಹುಟ್ಟಿ ಹರಿಯುವ ಪ್ರದೇಶದಿಂದ ಸಮುದ್ರ ಸೇರುವ ತನಕದ ಕಾವೇರಿ ನದಿಯ ಅದ್ಭುತ ದೃಶ್ಯ!


Share News

Leave a Reply

Your email address will not be published. Required fields are marked *