Breaking News

ಹಾನಗಲ್ ಗ್ಯಾಂಗ್‌ರೇಪ್ ಪ್ರಕರಣ; ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ, ತಪ್ಪಿತಸ್ಥರಿಗೆ ಶಿಕ್ಷೆ; ಸಿದ್ದರಾಮಯ್ಯ

Share News

ಹಾವೇರಿ: ಹಾನಗಲ್ ಗ್ಯಾಂಗ್‌ರೇಪ್ (Hangal Gang Rape) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಹಾವೇರಿ (Haveri) ಜಿಲ್ಲೆಯಲ್ಲಿಂದು ಆಯೋಜನೆಗೊಂಡಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಹಾನಗಲ್ ಗ್ಯಾಂಗರೇಪ್ ಪ್ರಕರಣದ ಸಂತ್ರಸ್ತೆಯನ್ನೂ ಭೇಟಿ ಮಾಡಿ ಸಮಸ್ಯೆಗಳನ್ನ ಆಲಿಸಿದರು. ಪೊಲೀಸರಿಂದ ತನಿಖೆ ಬೆಳವಣಿಗೆ ಮಾಹಿತಿ ಪಡೆದರು. ಇದೇ ವೇಳೆ ಸಂತ್ರಸ್ತೆಯ ಸಂಬಂಧಿಕರನ್ನು ಭೇಟಿಯಾಗಿ ಮನವಿ ಸ್ವೀಕರಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ ಆರೋಪಿಗಳನ್ನೂ ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ, ಯಾರನ್ನೂ ಕಾನೂನು ಕೈಗೆ ತೆಗೆದುಕೊಳ್ಳೋದಕ್ಕೆ ಬಿಡೋದಿಲ್ಲ. ಯಾವುದೇ ಧರ್ಮಕ್ಕೆ ಸೇರಿದವರಾಗಲಿ ಜಾತಿಗೆ ಸೇರಿದವರಾಗಿದ್ದರೂ ಕ್ರಮ ಗ್ಯಾರಂಟಿ. ಈ ಕೇಸ್‌ನಲ್ಲಿ ಯಾರೇ ಕಾನೂನು ಕೈಗೆ ತೆಗೆದುಕೊಂಡಿದ್ದರೂ ಶಿಕ್ಷೆ ಕೊಡಿಸ್ತೇವೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಕಾಲುವೆಯಲ್ಲಿ ಪತ್ತೆ

ಸಂತ್ರಸ್ಥೆ ಕುಟುಂಬಸ್ಥರು ಈಗಷ್ಟೇ ಮನವಿ ಕೊಟ್ಟಿದ್ದಾರೆ. ಈಗ ತನಿಖೆ ಮಾಡಿದವರೂ ಪೊಲೀಸರೇ ಎಸ್‌ಐಟಿಯವರೂ ಪೊಲೀಸರು, ಪ್ರಾಥಮಿಕ ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುತ್ತದೆ. ಯಾವುದನ್ನೂ ಮುಚ್ಚಿ ಹಾಕೋ ಪ್ರಶ್ನೆಯೇ ಇಲ್ಲ. ಈ ಬಗ್ಗೆ ನಮ್ಮ ಶಾಸಕ ಶಿವಣ್ಣ ಅವರೊಂದಿಗೂ ಚರ್ಚಿಸಿದ್ದೇನೆ, ಮುಂದಿನ ಕ್ರಮ ತಗೊಳ್ತೀವಿ ಎಂದಿದ್ದಾರೆ.

ಇದನ್ನೂ ಓದಿ: ಚಾರ್ಮಾಡಿ: ಚಾಲಕನ ನಿಯಂತ್ರಣ ತಪ್ಪಿ 2000 ಅಡಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ


Share News

Leave a Reply

Your email address will not be published. Required fields are marked *