Breaking News

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ: ತುಲಾಭಾರ, ಆಶ್ಲೇಷಾ ಬಲಿ ಪೂಜೆ

Share News

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಮಾಜಿ ಪ್ರಧಾನಿ, ರಾಜ್ಯ ಸಭಾ ಸದಸ್ಯ ಎಚ್‌.ಡಿ. ದೇವೇಗೌಡ ಆಗಮಿಸಿ ಶ್ರೀ ದೇವರ ದರುಶನ ಪಡೆದು ವಿವಿಧ ಸೇವೆಗಳನ್ನು ನೆರವೇರಿಸಿದರು. ಪತ್ನಿ ಚಿನ್ನಮ್ಮ ಸಹಿತರಾಗಿ ರವಿವಾರ ರಾತ್ರಿ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ ಅವರು ಅಲ್ಲಿಂದ ಕುಕ್ಕೆಗೆ ತಡರಾತ್ರಿ ರಸ್ತೆ ಮಾರ್ಗದ ಮೂಲಕ ಬಂದರು.

ಇದನ್ನೂ ಓದಿ: ಇಸ್ರೇಲ್ – ಹಮಾಸ್ ಸಂಘರ್ಷ ; 1000 ಗಡಿ ದಾಟಿದ ಸಾವಿನ ಸಂಖ್ಯೆ!

ಸೋಮವಾರ ಬೆಳಗ್ಗೆ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಬಳಿಕ ಆಶ್ಲೇಷಾ ಬಲಿಪೂಜೆ, ತುಲಾಭಾರ ಸೇವೆ ನೆರವೇರಿಸಿದರು. ದೇವೇಗೌಡರು 85 ಕೆ.ಜಿ. ಹಾಗೂ ಪತ್ನಿ ಚಿನ್ನಮ್ಮ 65 ಕೆ.ಜಿ. ತೂಗಿ ಬೆಲ್ಲ, ಕಡ್ಲೆ, ಬೇಳೆ, ತೆಂಗಿನ ಕಾಯಿಯಲ್ಲಿ ತುಲಾಭಾರ ಪೂರೈಸಿದರು. ನಾಗಪ್ರತಿಷ್ಠೆ ನೆರವೇರಿಸಿ ಮಹಾ ಪೂಜೆಯಲ್ಲಿ ಭಾಗವಹಿಸಿದರು.

ಇದನ್ನೂ ಓದಿ: ವಸುಂಧರಾಗೆ ರಾಜೇಗೆ ಶಾಕ್! ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಸದಸ್ಯರಾದ ವನಜಾ ವಿ. ಭಟ್‌, ಶೋಭಾ ಗಿರಿಧರ್‌,ಪ್ರಭಾರ ಎಇಒ ರಾಜಣ್ಣ, ಜೆಡಿಎಸ್‌ ಮುಖಂಡ ಎಂ.ಬಿ. ಸದಾಶಿವ, ಡಾ| ತಿಲಕ್‌ ಎ.ಎ., ಜಾಕೆ ಮಾಧವ ಗೌಡ, ಕಿಶೋರ್‌ ಅರಂಪಾಡಿ, ಕಾರ್ತಿಕ್‌ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

WATCH VIDEO ON YOUTUBE: ಸರ್ವರ ಗಮನ ಸೆಳೆದ ತಾಜ್ಮಹಲ್ ಟೀಯ ಸಂಗೀತದ ಬಿಲ್ ಬೋರ್ಡ್!


Share News

Leave a Reply

Your email address will not be published. Required fields are marked *