Breaking News

ಬೈಕಂಪಾಡಿ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ; ಕಾರ್ಮಿಕನೋರ್ವ ಸಾವು , ಆರು ಮಂದಿಗೆ ಗಾಯ

Share News

ಮಂಗಳೂರು: ಕಾರ್ಖಾನೆಯೊಂದಲ್ಲಿ ನಡೆದ ಬೆಂಕಿ ಅನಾಹುತಕ್ಕೆ ಕೆಲಸ ನಿರತ ಕಾರ್ಮಿಕನೋರ್ವ ಸಾವನ್ನಪ್ಪಿ , ಇತರ ಆರು ಮಂದಿ ಗಾಯಗೊಂಡ ಘಟನೆ ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ನಡೆದಿದೆ.

ಇದನ್ನೂ ಓದಿ: ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಕಾಲುವೆಯಲ್ಲಿ ಪತ್ತೆ

ಇಲ್ಲಿನ ಜೋನ್ಸ್ ಪೆಟ್ರೋ ಕೆಮಿಕಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಶನಿವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಕಾರ್ಮಿಕ ರೊನಾಲ್ಡ್ ಪೌಲ್ ಮೃತ ದುರ್ದೈವಿಯಾಗಿದ್ದಾರೆ. ರೊನಾಲ್ಡ್ ಪಾಲ್ ಮತ್ತು ಇತರ ಆರು ಮಂದಿ ಖಾಲಿ ತೈಲ ಟ್ಯಾಂಕ್‌ನ ದುರಸ್ಥಿ ಕಾರ್ಯ ಮಾಡುತ್ತಿದ್ದರು. ಮೇಲ್ಭಾಗದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಸ್ಥಳದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ರೊನಾಲ್ಡ್ ಅವರಿಗೆ ಬೆಂಕಿ ತಗುಲಿದೆ. ರೊನಾಲ್ಡ್ ಅವರು ತೊಟ್ಟಿಯ ಮೇಲಿನಿಂದ ಸುಮಾರು 20 ಅಡಿ ಕೆಳಕ್ಕೆ ಬಿದ್ದು, ಅವರ ತಲೆ ಮತ್ತು ಹೊಟ್ಟೆಗೆ ಗಾಯಗಳಾಗಿದ್ದುವು. ಕೂಡಲೇ ಚಿಕಿತ್ಸೆಗಾಗಿ ಖಾಸಾಗಿ ಆಸ್ಪತ್ರೆಗೆ ಸಾಗಿದರೂ ಚಿಕಿತಸತೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಇತರ ಆರು ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಂಪನಿಯ ಮಾಲೀಕರ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕಲಂ 304A, 337 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಚಾರ್ಮಾಡಿ: ಚಾಲಕನ ನಿಯಂತ್ರಣ ತಪ್ಪಿ 2000 ಅಡಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ


Share News

Leave a Reply

Your email address will not be published. Required fields are marked *