Breaking News

ಲಂಚ ಪಡೆಯುವಾಗಲೇ ಸಿಕ್ಕಿಬಿದ್ದ ಇಡಿ ಅಧಿಕಾರಿಗಳು!

Share News

ಜೈಪುರ: ರಾಜಸ್ಥಾನದಲ್ಲಿ ಲಂಚ ಕೇಳಿದ ಆರೋಪದ ಮೇಲೆ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದೆ. ಚಿಟ್ ಫಂಡ್ ವಿಚಾರದಲ್ಲಿ ಪ್ರಕರಣ ದಾಖಲಿಸುವುದನ್ನು ತಡೆಯಲು ಇಬ್ಬರು ಅಧಿಕಾರಿಗಳು 17 ಲಕ್ಷ ರೂ. ಲಂಚ ಕೇಳಿದ್ದ ಆರೋಪ ದಾಖಲಾಗಿದೆ ಎಂದು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳದ (Rajasthan ACB) ತಿಳಿಸಿದೆ.

ಇದನ್ನೂ ಓದಿ: 8 ತಿಂಗಳ ಗರ್ಭಿಣಿ ನಟಿ ಪ್ರಿಯಾ ಹೃದಯಾಘಾತದಿಂದ ನಿಧನ!

ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹೇಳಿಕೆಯಲ್ಲಿ, ಇಬ್ಬರು ಇಡಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಯನ್ನು ನೇವಲ್ ಕಿಶೋರ್ ಮೀನಾ, ಸಹವರ್ತಿಯನ್ನು ಬಾಬುಲಾಲ್ ಮೀನಾ ಎಂದು ಗುರುತಿಸಲಾಗಿದೆ. ಎಸಿಬಿ ತಂಡವು (ACB Team) ರಾಜಸ್ಥಾನದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ ನಂತರ ಅಧಿಕಾರಿಯನ್ನ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಆಪತ್ಭಾಂದವ, ಜೀವ ರಕ್ಷಕ ಚಾರ್ಮಾಡಿ ಹಸನಬ್ಬಗೆ ಒಲಿಯಿತು ರಾಜ್ಯೋತ್ಸವ ಪ್ರಶಸ್ತಿ!

ಆದಾಯ ಮೂಲಕ್ಕೆ ವಿರುದ್ಧವಾಗಿ ಲಂಚ ಪಡೆದಿರುವುದು ಕಂಡುಬಂದ ನಂತರ ನವಲ್ ಕಿಶೋರ್ ಮೀನಾ ಅವರನ್ನು ರಾಜಸ್ಥಾನ ಎಸಿಬಿ ಬಂಧಿಸಿದೆ.

WATCH VIDEO ON YOUTUBE: ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಮಹಿಷಾ ಮರ್ದಿನಿ ನೃತ್ಯ ರೂಪಕ


Share News

Leave a Reply

Your email address will not be published. Required fields are marked *