Breaking News

ವಿಜಯಪುರದಲ್ಲಿ ಎರಡು ಬಾರಿ ಭೂಕಂಪನ; ಆತಂಕಕ್ಕೊಳಗಾದ ಜನತೆ

Share News

ವಿಜಯಪುರ: ಐತಿಹಾಸಿಕ ಜಿಲ್ಲೆ ವಿಜಯಪುರದಲ್ಲಿ (Vijayapura) ಭೂಕಂಪನದ (Earthquake) ಅನುಭವ ಆಗಿದೆ. ಭಾನುವಾರ ತಡರಾತ್ರಿ ಎರಡು ಬಾರಿ ಭೂಕಂಪನ ಸಂಭವಿಸಿದೆ.

ಇದನ್ನೂ ಓದಿ: ದೆಹಲಿಯ ಉನ್ನತ ಅಧಿಕಾರಿಯ ಪುತ್ರನ ಕೊಲೆಗೈದ ಸ್ನೇಹಿತರು

ವಿಜಯಪುರ ನಗರ ಮತ್ತು ಬಸವನಬಾಗೇವಾಡಿ (Basavana Bagewadi) ತಾಲೂಕಿನ ಮನಗೂಳಿಯಲ್ಲಿ ಭೂಮಿ ಕಂಪಿಸಿದೆ. ಭಾನುವಾರ ರಾತ್ರಿ 12:22 ಹಾಗೂ ರಾತ್ರಿ 1:20ಕ್ಕೆ ಭೂಮಿ ಕಂಪಿಸಿದ ಅನುಭವ ಆಗಿದೆ.

2.9 ತೀವ್ರತೆಯಲ್ಲಿ ಭೂಕಂಪನ ಆಗಿದ್ದು, ಭೂಮಿಯ 5 ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. ಆ್ಯಪ್‌ಗಳಲ್ಲೂ ಭೂಕಂಪನ ದಾಖಲಾಗಿದೆ. ಇದರಿಂದ ವಿಜಯಪುರದ ಜನರಲ್ಲಿ ಆತಂಕ ಮನೆಮಾಡಿದೆ.

ಇದನ್ನೂ ಓದಿ: ಶಿವಮೊಗ್ಗ: ನಿಶ್ಚಿತಾರ್ಥ ಆಗಿದ್ದ ಯುವತಿ ಆತ್ಮಹತ್ಯೆ


Share News

Leave a Reply

Your email address will not be published. Required fields are marked *