Breaking News

ಮಣಿಪುರಕ್ಕೆ ರಾಹುಲ್ ಗಾಂಧಿ ಹೋಗಿದ್ದು ಭತ್ತ ನಾಟಿ ಮಾಡುವುದಕ್ಕಾ? – ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಬಸನಗೌಡ ಪಾಟೀಲ್ ಯತ್ನಾಳ್

Share News

ವಿಜಯಪುರ : ಬಿಜೆಪಿ ನಾಯಕರು ಶಿವಮೊಗ್ಗಕ್ಕೆ ಹೋಗಿರುವುದು ಸತ್ಯ ಶೋಧನೆಗಲ್ಲ ಮತ್ತೊಮ್ಮೆ ಬೆಂಕಿ ಕಡ್ಡಿ ಗೀರಲು ಎಂದಿದ್ದ ಕಾಂಗ್ರೆಸ್​ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ನವಯುಗದ ರಾವಣ ಎಂದ ಬಿಜೆಪಿ; ಕಾಂಗ್ರೆಸ್ ಆಕ್ರೋಶ!

ಈ ಕುರಿತು ಟ್ವೀಟ್ ಮಾಡಿರುವ  ಯತ್ನಾಳ್ ಹಾಗಿದ್ರೆ.. ನಿಮ್ಮ ನಾಯಕ ರಾಹುಲ್ ಗಾಂಧಿಯವರು ಮಣಿಪುರಕ್ಕೆ ಹೋಗಿದ್ದು ಭತ್ತ ನಾಟಿ ಮಾಡುವುದಕ್ಕಾ? ಸತ್ಯ ಶೋಧನೆ ಮಾಡುವುದಕ್ಕೆ ಪೊಲೀಸರಿದ್ದಾರೆ, ಕಾನೂನಿದೆ. ಕಾಂಗ್ರೆಸ್ಸಿಗರ ಅಗತ್ಯವಿರಲಿಲ್ಲ ಅಲ್ಲವೇ? ಕಾಂಗ್ರೆಸ್ ಯಾವುದೇ ಯಾವ ತನಿಖಾ ಏಜೆನ್ಸಿಯೂ ಅಲ್ಲ ಎಂದು ಚಾಟಿ ಬೀಸಿದ್ದಾರೆ.

ಇದನ್ನೂ ಓದಿ: ಆನ್ಲೈನ್ ಬೆಟ್ಟಿಂಗ್ ಕೇಸ್: ಕಪಿಲ್ ಶರ್ಮಾ, ಶ್ರದ್ಧಾ ಕಪೂರ್ ಸೇರಿದಂತೆ ಹಲವರಿಗೆ ಇಡಿ ನೋಟಿಸ್ ಜಾರಿ!

ಬಿಜೆಪಿಯ ಸತ್ಯ ಶೋಧನ ಸಮಿತಿ ತಂಡ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿತ್ತು. ಶಾಂತ ಸ್ಥಿತಿಗೆ ಬಂದಿರುವ ಶಿವಮೊಗ್ಗಕ್ಕೆ ಬಿಜೆಪಿಗರು ಹೋಗಿದ್ದು ಸತ್ಯ ಶೋಧನೆಗಲ್ಲ, ಮತ್ತೊಮ್ಮೆ ಬೆಂಕಿ ಕಡ್ಡಿ ಗೀರಲು. ಸತ್ಯ ಶೋಧನೆ ಮಾಡುವುದಕ್ಕೆ ಪೊಲೀಸರಿದ್ದಾರೆ, ಕಾನೂನಿದೆ, ಬಿಜೆಪಿಯವರ ಅಗತ್ಯವಿಲ್ಲ, ಬಿಜೆಪಿ ಯಾವುದೇ ಯಾವ ತನಿಖಾ ಏಜೆನ್ಸಿಯೂ ಅಲ್ಲ. ಪರಿಸ್ಥಿತಿಯನ್ನು ಹದಗೆಡಿಸಲು ಹೊಂಚು ಹಾಕಿರುವ ಬಿಜೆಪಿಗರ ಸಂಚನ್ನು ಯಶಸ್ವಿಯಾಗಲು ನಮ್ಮ ಸರ್ಕಾರ ಬಿಡಲ್ಲ ಎಂದು ಪೋಸ್ಟ್ ಮಾಡಿತ್ತು.

WATCH VIDEO ON YOUTUBE: ತಾಸೆಯ ಪೆಟ್ಟಿಗೆ ಭರ್ಜರಿ ಹುಲಿ ಕುಣಿತ ಮಾಡಿದ ಶಿಕ್ಷಕರು ಹಾಗೂ ಮಕ್ಕಳು!


Share News

Leave a Reply

Your email address will not be published. Required fields are marked *