Breaking News

ಐಪಿಎಲ್​ ಇತಿಹಾಸದಲ್ಲಿ ಭರ್ಜರಿ ಮೊತ್ತಕ್ಕೆ ಸೇಲ್​ ಆದ ಕಮಿನ್ಸ್..!

Share News

ದುಬೈ: ಪ್ರಸಕ್ತ ಸಾಗುತ್ತಿರುವ ಐಪಿಎಲ್​ 2024 ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ವಿಶ್ವಕಪ್​ ವಿಜೇತ ನಾಯಕ ಪ್ಯಾಟ್​ ಕಮಿನ್ಸ್​ ಅವರು ಬೃಹತ್​ ಮೊತ್ತಕ್ಕೆ ಸೇಲ್​ ಆಗುವ ಮೂಲಕ ಐಪಿಎಲ್​ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಅತಿ ಹೆಚ್ಚು ಮೊತ್ತಕ್ಕೆ ಸೇಲ್​ ಆದ ಆಟಗಾರ ಎನಿಸಿಕೊಂಡಿದ್ದಾರೆ.

ಇಂಗ್ಲೆಂಡ್ ಆಲ್ ರೌಂಡರ್ ಸ್ಯಾಮ್ ಕರ್ರನ್ ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಹಣ ಪಡೆದ ಆಟಗಾರ ಎನಿಸಿಕೊಂಡಿದ್ದರು. 2023ರಲ್ಲಿ ಅವರನ್ನು ಪಂಜಾಬ್ ಕಿಂಗ್ಸ್ ತಂಡವು 18.50 ಕೋಟಿ ರೂ ನೀಡಿ ಖರೀದಿ ಮಾಡಿತ್ತು. ಆದರೆ ಈಗ ಈ ದಾಖಲೆ ಪತನಗೊಂಡಿದೆ. ಕಮಿನ್ಸ್​ ಅವರು 20.50 ಕೋಟಿಗೆ ಸೇಲ್​ ಆಗುವ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ.

ಇದನ್ನೂ ಓದಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗೆ ವಿಷಪ್ರಾಷನ ; ಆಸ್ಪತ್ರೆಗೆ ದಾಖಲು!

ನಿರೀಕ್ಷೆಯಂತೆ ದೊಡ್ಡ ಮೊತ್ತ ಪಡೆದ ಡ್ಯಾರಿಲ್​ ಮಿಚೆಲ್

ನ್ಯೂಜಿಲ್ಯಾಂಡ್​ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಮತ್ತು ಆಲ್​ರೌಂಡರ್​ ಆಗಿರುವ ಡ್ಯಾರಿಲ್​ ಮಿಚೆಲ್​ ಅವರಿಗೂ ದೊಡ್ಡ ಮೊತ್ತ ಸಿಗುವ ನಿರೀಕ್ಷೆ ಮಾಡಲಾಗಿತ್ತು. ಅದರಂತೆ ಅವರು ದೊಡ್ಡ ಮೊತ್ತ ಜೇಬಿಗಿಳಿಸಿದ್ದಾರೆ.14 ಕೋಟಿ ರೂ. ಮೊತ್ತಕ್ಕೆ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಸೇಲ್​ ಆಗಿದ್ದಾರೆ

ಯಾವುದೇ ಹಂತದಲ್ಲಿಯೂ ತಂಡಕ್ಕೆ ಆಸರೆಯಾಗಿ ನಿಂತು ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಇವರಿಗಿದೆ. ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿಯೂ ಮಿಚೆಲ್​ ಗಮನಾರ್ಹ ಪ್ರದರ್ಶನ ತೋರಿದ್ದರು. 552 ರನ್​ ಬಾರಿಸಿ ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ಗಳಿಸಿದ 5ನೇ ಆಟಗಾರನಾಗಿ ಹೊರಮೊಮ್ಮಿದ್ದರು.

 

ಇದನ್ನೂ ಓದಿ: ಉಡುಪಿ : ಕಾಪು ಲೀಲಾಧರ್ ಶೆಟ್ಟಿ ಸಾಕು ಮಗಳು ಅಪಹರಣ ಕೇಸ್ ; ಸ್ನೇಹಿತ ಸೇರಿ ನಾಲ್ವರ ಬಂಧನ..!

 

ಹೆಡ್-ರಚಿನ್​ಗೆ ಸಿಗಲಿಲ್ಲ ದೊಡ್ಡ ಮೊತ್ತ

ಟ್ರಾವಿಸ್​ ಹೆಡ್ ಮತ್ತು ರಚಿನ್​ ರವೀಂದ್ರ ಅವರಿಗೆ ಈ ಬಾರಿಯ ಹರಾಜಿನಲ್ಲಿ ಕನಿಷ್ಠ 15 ಕೋಟಿ ಮೊತ್ತಕ್ಕೆ ಸೇಲ್​ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಅಲ್ಲದೆ ಉಭಯ ಆಟಗಾರರು ಹರಾಜಿನ ಹೈಲೆಟ್​ ಕೂಡ ಆಗಿದ್ದರು. ಆದರೆ ಈ ಎಲ್ಲ ನಿರೀಕ್ಷೆ ಹುಸಿಯಾಗಿದೆ. ಹಡ್​ ಕೇವಲ 6.80 ಕೋಟಿ ರೂ.ಗೆ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಸೇಲ್​ ಆದರೆ, ರಚಿನ್​ ಅವರು 1.80 ಕೋಟಿ ರೂ.ಗೆ ಚೆನ್ನೈ ಸೂಪರ್​ ಕಿಂಗ್ಸ್​ ಸೇರಿದ್ದಾರೆ. ಅವರ ಮೂಲಬೆಲೆ 50 ಲಕ್ಷ ಆಗಿತ್ತು.

ಆಸ್ಟ್ರೇಲಿಯಾದ ಸ್ಟಾರ್​ ಅನುಭವಿ ಆಟಗಾರ ಸ್ಟೀವನ್​ ಸ್ಮಿತ್​ ಅವರು ಮೊದಲ ಸುತ್ತಿನ ಹರಾಜಿನಲ್ಲಿ ಅನ್​ ಸೋಲ್ಡ್​ ಆಗಿದ್ದಾರೆ. ಕಳೆದ ಬಾರಿಯೂ ಅವರನ್ನು ಯಾವುದೇ ತಂಡ ಖರೀದಿ ಮಾಡಿರಲಿಲ್ಲ. ಹೀಗಾಗಿ ಅವರು ಐಪಿಎಲ್​ ಕಾಮೆಂಟ್ರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಆರ್​ಸಿಬಿಯ ಮಾಜಿ ಆಟಗಾರ ಹರ್ಷಲ್​ ಪಟೇಲ್​ ಅವರನ್ನು ಪಂಜಾಬ್​ ಕಿಂಗ್ಸ್​ ತಂಡ 11.75 ಕೋಟಿ. ರೂ ನೀಡಿ ಖರೀದಿ ಮಾಡಿದೆ.

ಇತ್ತೀಚೆಗೆ ಮುಕ್ತಾಯ ಕಂಡಿದ್ದ ಏಕದಿನ ವಿಶ್ವಕಪ್​ನಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶಿಸಿದ್ದ ದಕ್ಷಿಣ ಆಫ್ರಿಕಾದ ಯುವ ಬೌಲರ್​ ಜೆರಾಲ್ಡ್ ಕೊಯೆಟ್ಜಿ ಅವರನ್ನು 5 ಕೋಟಿ ಮೊತ್ತ ನೀಡಿ ಮುಂಬೈ ಇಂಡಿಯನ್ಸ್​ ಖರೀದಿ ಮಾಡಿದೆ. ವೆಸ್ಟ್​ ಇಂಡೀಸ್​ನ ರೋಮನ್ ಪೊವೆಲ್ ಅವರನ್ನು ರಾಜಸ್ಥಾನ್​ ರಾಯಲ್ಸ್​ ತಂಡ 7.40 ಕೋಟಿ ರೂ. ನೀಡಿ ಖರೀದಿಸಿದೆ. ಅವರ ಮೂಲಬೆಲೆ 1 ಕೋಟಿ ಆಗಿತ್ತು. ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡಿದ್ದರು.

WATCH VIDEO ON YOUTUBE: ಸಿದ್ದಕಟ್ಟೆಯ ಪುಚ್ಛಮಗುರೂರಿನಲ್ಲಿ ಸೆರೆಯಾಗಿದೆ ಚಿರತೆ!

 


Share News

Leave a Reply

Your email address will not be published. Required fields are marked *