Breaking News

ಅಂದ್ರಪ್ರದೇಶದಲ್ಲಿ ಎರಡು ರೈಲುಗಳ ನಡುವೆ ಡಿಕ್ಕಿ ; ಸಾವಿನ ಸಂಖ್ಯೆ 14 ಕ್ಕೆ ಏರಿಕೆ – 100 ಕ್ಕೂ ಅಧಿಕ ಮಂದಿಗೆ ಗಾಯ!

Share News

ರಾಜ್ಯದ ವಿಜಯನಗರಂ ಜಿಲ್ಲೆಯಲ್ಲಿ ನಿನ್ನೆ ಸಂಭವಿಸಿದ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆ ಆಗಿದೆ. ಗಾಯಾಳುಗಳ ಸಂಖ್ಯೆ 100ಕ್ಕೆ ಏರಿಕೆ ಆಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ, ಗಾಯಾಳುಗಳಿಗೆ ತಲಾ ₹2 ಲಕ್ಷ ರೂ, ಬೇರೆ ರಾಜ್ಯದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ ಮತ್ತು ಬೇರೆ ರಾಜ್ಯದ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಸಿಎಂ ಜಗನ್ ಮೋಹನ್​ ರೆಡ್ಡಿ ಪರಿಹಾರ ಘೋಷಿಸಿದ್ದಾರೆ.

ಸಿಕಂದ್ರಾಬಾದ್​​-ಹೌರಾ ಫಲಕ್​​​​ಸುಮಾ ಎಕ್ಸ್​ಪ್ರೆಸ್​, ಸಿಕಂದ್ರಾಬಾದ್​​-ಹೌರಾ, ಚೆನ್ನೈ ಸೆಂಟ್ರಲ್​​​-ಹೌರಾ ಮೇಯಲ್, ವಾಸ್ಕೋಡಿಗಾಮಾ-ಷಾಲಿಮಾರ್​​ ಎಕ್ಸ್​ಪ್ರೆಸ್​ ಮಾರ್ಗವೂ ಬದಲಾವಣೆ ಮಾಡಲಾಗಿದ್ದು, ಹಲವು ಮಾರ್ಗಗಳ ಬದಲಾವಣೆಯಿಂದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ದುರಂತ ಸಂಭವಿಸಿದ ಬಳಿಕ ತಕ್ಷಣ ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಸ್ಥಳದಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್‌ಗಳು ಬಿಡುಬಿಟ್ಟಿವೆ. ಅಲ್ಲದೇ, ಡಿಆರ್‌ಎಂ ಸೌರಭ್ ಪ್ರಸಾದ್ ಅವರು ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಹಿರಿಯ ಅಧಿಕಾರಿಯ ಒಬ್ಬರ ಪ್ರಕಾರ ವಿಶಾಖಪಟ್ಟಣಂ-ರಾಯಗಡ ಪ್ಯಾಸೆಂಜರ್ ರೈಲಿನಲ್ಲಿ ಮಾನವ ದೋಷ ಅಥವಾ ಸಿಗ್ನಲ್‌ನ ಓವರ್‌ಶೂಟ್‌ನಿಂದ ಅಪಘಾತ ಸಂಭವಿಸಿರಬಹುದು ಎಂದು ವರದಿಯಾಗಿದೆ.

ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತನಾಡಿದ್ದು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಎಲ್ಲಾ ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ ಮತ್ತು ರಾಜ್ಯ ಸರ್ಕಾರ ಮತ್ತು ರೈಲ್ವೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಅಶ್ವಿನಿ ವೈಷ್ಣವ್​ ತಿಳಿಸಿರುವುದಾಗಿ ಪಿಎಂಒ ಇಂಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದೆ.


Share News

Leave a Reply

Your email address will not be published. Required fields are marked *