Breaking News

ಅನಧಿಕೃತ ಫುಟ್‌ಪಾತ್ ಅಂಗಡಿಗಳ ತೆರವು; ಫುಟ್‌ಪಾತ್ ಅಭಿಯಾನಕ್ಕೆ ಚಾಲನೆ!

Share News

ತುಮಕೂರು: ಅನಧಿಕೃತ ಫುಟ್‌ಪಾತ್ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಮಂಗಳವಾರ ಬೆಳ್ಳಂಬೆಳಗ್ಗೆ ಮಹಾನಗರ ಪಾಲಿಕೆ ಶಾಕ್ ನೀಡಿತು !. ಆಯುಕ್ತೆ ಬಿ.ವಿ.ಅಶ್ವಿಜ ಮಾರ್ಗದರ್ಶನದಲ್ಲೇ ಫುಟ್‌ಪಾತ್ ಮೇಲಿನ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಸೇಫ್ ಫುಟ್‌ಪಾತ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪೊಲೀಸ್ ಬಂದೋಬಸ್ತ್‌ನಲ್ಲಿ ಪಾಲಿಕೆ ಸಿಬ್ಬಂದಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು.

ಇದನ್ನೂ ಓದಿ: ಮಂಗಳೂರು: ಸಿಸಿಬಿ ಪೊಲೀಸರ ದಾಳಿ ;ಮೂವರು ಗಾಂಜಾ ಪೆಡ್ಲರ್ಸ್ ಗಳ ಬಂಧನ!

ನಗರದ ಬಿ.ಹೆಚ್.ರಸ್ತೆಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಆರ್‌ಟಿಒ ಕಚೇರಿ ವರೆಗೆ ಫುಟ್‌ಪಾತ್ (ಪಾದಚಾರಿ ಮಾರ್ಗ)ನ್ನು ವ್ಯಾಪಾರ ನಿಷೇಧ ವಲಯವೆಂದು ಘೋಷಿಸಿದ್ದರೂ ಬೀದಿಬದಿ ವ್ಯಾಪಾರಿಗಳ ಆಟಾಟೋಪಕ್ಕೆ ಕಡಿವಾಣ ಬಿದ್ದಿರಲಿಲ್ಲ. ಈ ಹಿನ್ನೆಲೆಯಲ್ಲಿ ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸುವ ದಿಟ್ಟ ಕ್ರಮಕ್ಕೆ ಆಯುಕ್ತೆ ಅಶ್ವಿಜ ಮುಂದಾದರು.

ಇದನ್ನೂ ಓದಿ: ಕಡಬ : ಕಾಡಾನೆ ದಾಳಿಗೆ ಓರ್ವ ಬಲಿ!

ಮಾತಿನ ಚಕಮಕಿ: ಫುಟ್ ಪಾತ್ ಅತಿಕ್ರಮಣ ತೆರವುಗೊಳಿಸುವ ವೇಳೆ ಕೆಲವು ವ್ಯಾಪಾರಿಗಳು ಪಾಲಿಕೆ ಸಿಬ್ಬಂದಿ ಜತೆ ಮಾತಿನ ಚಕಮಕಿ ಕೂಡ ನಡೆಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಅಶ್ವಿಜ ಅವರು ಪಾದಚಾರಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಮನವರಿಕೆ ಮಾಡಿಕೊಟ್ಟರಲ್ಲದೆ, ಸೇಫ್ ಫುಟ್‌ಪಾತ್ ಅಭಿಯಾನದ ಉದ್ದೇಶವನ್ನು ತಿಳಿಸಿದರು. ಅಲ್ಲದೆ, ಮತ್ತೆ ಫುಟ್‌ಪಾತ್ ಅತಿಕ್ರಮಣ ಮಾಡಿಕೊಂಡಲ್ಲಿ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ಕೂಡ ನೀಡಿದರು.

WATCH VIDEO ON YOUTUBE:ಶುದ್ಧ ಗಾಣದ ಎಣ್ಣೆ ತೆಗೆಯುವ ಕಟಪಾಡಿಯ ಮಿಲ್!


Share News

Leave a Reply

Your email address will not be published. Required fields are marked *