Breaking News

ಕ್ರಿಸ್ಮಸ್-ಹೊಸ ವರ್ಷಕ್ಕೆ ಕೊರೋನ ವೈರಸ್ ಹೆಸರಲ್ಲಿ ಹೆದರಿಸಿ ಕಾಟ ಕೊಡುವುದು ನಿಲ್ಲಲಿ: ಡಾ. ಶ್ರೀನಿವಾಸ ಕಕ್ಕಿಲ್ಲಾಯ!

Share News

ಮಂಗಳೂರು: ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್-1 ಪತ್ತೆಯಾಗಿದ್ದು, ರಾಜ್ಯದಲ್ಲಿಯೂ ಆತಂಕ ಆರಂಭವಾಗಿದೆ. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆ ಕರ್ನಾಟಕದಲ್ಲಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಹೃದಯಾಘಾತಕ್ಕೆ 7 ನೇ ತರಗತಿ ವಿದ್ಯಾರ್ಥಿನಿ ಬಲಿ…!

ಈ ಬಗ್ಗೆ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಉತ್ತರಾರ್ಧ ಗೋಳದಲ್ಲಿ ಡಿಸೆಂಬರ್ ಹವೆಗೆ ಕೆಮ್ಮು-ನೆಗಡಿ ಸಾಮಾನ್ಯ. ಹೊಸ ಕೊರೋನ ವೈರಸ್ ಪದೇ ಪದೇ ಸಣ್ಣ ಮಟ್ಟಿಗೆ ರೂಪ ಬದಲಿಸುವುದು ಕೂಡ ಸಾಮಾನ್ಯವೇ. ಕೇರಳ ರಾಜ್ಯ ಕೊರೋನ ಪರೀಕ್ಷೆ ನಿಲ್ಲಿಸಲಿ. ಪ್ರತೀ ಕ್ರಿಸ್ಮಸ್-ಹೊಸ ವರ್ಷಕ್ಕೆ ವೈರಸ್ ಹೆಸರಲ್ಲಿ ಹೆದರಿಸಿ ಕಾಟ ಕೊಡುವುದು ನಿಲ್ಲಲಿ. ವಿಶ್ವದ ಯಾವುದೇ ಭಾಗದಲ್ಲೂ ಹೇರದ ನಿಯಮಗಳನ್ನು ಕರ್ನಾಟಕದಲ್ಲಿ ಮಾತ್ರ ಹೇರುವುದು ಅನಗತ್ಯ, ಅವಮಾನಕರ.

ಇದನ್ನೂ ಓದಿ: ಕಾಸರಗೋಡು : ಸೊಳ್ಳೆ ನಿವಾರಕ ದ್ರಾವಣ ಸೇವಿಸಿ ಒಂದುವರೆ ವರ್ಷದ ಮಗು ಮೃತ್ಯು..!

ಅಂತೂ 2020ರ ಮಾರ್ಚ್ ನಿಂದ ಮಾಡಿದ ಲಾಕ್ ಡೌನ್, ಮಾಸ್ಕ್ ನಿಯಮ, ಒತ್ತಾಯದಿಂದ ಹಾಕಿಸಿದ ಲಸಿಕೆ ಯಾವುವೂ ಪ್ರಯೋಜನವಾಗಲಿಲ್ಲ, ಕೊರೋನ ತಡೆಯಲು ಆಗಲಿಲ್ಲ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಯಿತು, ಅದನ್ನು ಈ ಸರಕಾರಗಳು ಮತ್ತು ತಥಾಕಥಿತ ತಜ್ಞರು ನೇರವಾಗಿ ಒಪ್ಪಿಕೊಳ್ಳಲಿ ಎಂದು ಬರೆದುಕೊಂಡಿದ್ದಾರೆ.

WATCH VIDEO ON YOUTUBE: ನೀರಿಗೆ ಬಿದ್ದಿದ್ದಾನೆಂದು ಭಾವಿಸಿ ವ್ಯಕ್ತಿ ಒಬ್ಬರನ್ನು ರಕ್ಷಿಸಲು ಮುಂದಾದ ಆನೆ!


Share News

Leave a Reply

Your email address will not be published. Required fields are marked *