Breaking News

ಭಟ್ಕಳದ ವಿಚ್ಛೇದಿತ ಮಹಿಳೆ ಶಂಕಿತ ಉಗ್ರನ ಜೊತೆ ಲಿಂಕ್‌ – ಲವ್‌ ಕಹಾನಿ

Share News

ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದ ವಿಚ್ಛೇದಿತ ಮಹಿಳೆಯೊಬ್ಬಳು ಭಯೋತ್ಪಾದಕನೊಂದಿಗೆ ಸಂಪರ್ಕ ಬೆಳಸಿ ಹಣ ನೀಡಿದ ಕುರಿತು ಮುಂಬೈನ ಭಯೋತ್ಪಾದನಾ ನಿಗ್ರಹ ದಳ ಭಟ್ಕಳದ (Bhatkal) ಮಹಿಳೆಯೊಬ್ಬಳನ್ನ ತನಿಖೆ ನಡೆಸಿದೆ.

ಕಳೆದ ಎರಡು ದಿನಗಳ ಹಿಂದೆ ಮುಂಬೈನಲ್ಲಿ (Mumbai) ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಐಸಿಸ್ (ISIS) ಸಂಘಟನೆಗೆ ಹಣ ವರ್ಗಾವಣೆ ಮಾಡುತ್ತಿದ್ದ ಇಂಜಿನಿಯರ್ ಹುಸೇನ್ ಅಬ್ದುಲ್ ಅಜೀಜ್ ಶೇಖ್ (32) ಎಂಬಾತನನ್ನು ನಾಸಿಕ್‌ನ ಟಿಡ್ಕೆ ಕಾಲೋನಿಯಲ್ಲಿ ಬಂಧಿಸಿದ್ದರು.

ಇದನ್ನೂ ಓದಿ: ಪುತ್ತೂರು: ಅಕ್ಕನಿಗೆ ತಂಗಿ ಲಿವರ್‌ ದಾನ ಮಾಡಿದರೂ ಮೃತಪಟ್ಟ ಅಕ್ಕ

ಈ ಸಂದರ್ಭದಲ್ಲಿ ಹುಸೇನ್ ಅಬ್ದುಲ್ ಅಜೀಜ್ ಶೇಖ್ ಮನೆಯಲ್ಲಿ ಸಿಮ್ ಕಾರ್ಡ್ಸ್, ಮೊಬೈಲ್ ಫೋನ್‌ಗಳು, ಪೆನ್‌ಡ್ರೈವ್‌‌ಗಳು, ಲ್ಯಾಪ್‌ಟಾಪ್ ಪತ್ತೆಯಾಗಿತ್ತು. ಇವುಗಳನ್ನು ತಪಾಸಣೆ ನಡೆಸಿದಾಗ, ಹುಸೇನ್ ಅಬ್ದುಲ್ ಅಜೀಜ್ ಶೇಖ್ ಜೊತೆ ಭಟ್ಕಳದ ಆಜಾದ್ ನಗರದ ಮಹಿಳೆ ಸಂಪರ್ಕವಿರುವುದು ಪತ್ತೆಯಾಗಿದೆ. ಈ ಮಹಿಳೆ ಆರೋಪಿ ಹುಸೇನ್ ಅಬ್ದುಲ್ ಅಜೀಜ್ ಶೇಖ್‌ನನ್ನ ಪ್ರೀತಿ ಮಾಡುತ್ತಿದ್ದಳು ಎಂಬ ವಿಚಾರವೂ ತಿಳಿದುಬಂದಿದೆ.

ಜನವರಿ 24 ರಂದು ಭಟ್ಕಳಕ್ಕೆ ಆಗಮಿಸಿದ್ದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಭಟ್ಕಳ ಪೊಲೀಸರ ಸಹಾಯ ಪಡೆದು, ಶಂಕಿತ ಉಗ್ರನ ಜೊತೆ ಸಂಪರ್ಕವಿದ್ದ ಮಹಿಳೆಯ ಮನೆಗೆ ತೆರಳಿ ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದಾರೆ. ಅಧಿಕಾರಿಗಳು ಮಹಿಳೆಯಿಂದ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ.

ಇದನ್ನೂ ಓದಿ: ಅಧಿಕೃತವಾಗಿ ಮತ್ತೆ ಬಿಜೆಪಿ ಸೇರ್ಪಡೆಯಾದ ಜಗದೀಶ್ ಶೆಟ್ಟರ್

ಆನ್‌ಲೈನ್‌ನಲ್ಲಿ ಅರೇಬಿಕ್‌ ಕ್ಲಾಸ್‌: ಶಂಕಿತ ಉಗ್ರನೊಂದಿಗೆ ಸಂಪರ್ಕದಲ್ಲಿದ್ದ ಮಹಿಳೆ ಭಟ್ಕಳದಲ್ಲಿದ್ದೊಕೊಂಡೇ ಆನ್‌ಲೈನ್ ಅರೇಬಿಕ್ ಕ್ಲಾಸ್ ನಡೆಸುತ್ತಿದ್ದಳು. ಜೊತೆಗೆ ಮದರಸಾದ ಶಿಕ್ಷಕಿಯಾಗಿದ್ದಳು. ಈಕೆ ಜ.17ರಂದು ಆರೋಪಿ ಹುಸೇನ್ ಅಬ್ದುಲ್ ಅಜೀಜ್ ಶೇಖ್ ನನ್ನು ಭಟ್ಕಳದ ಲಾಡ್ಜ್‌ವೊಂದರಲ್ಲಿ ಭೇಟಿಯಾಗಿದ್ದಳು. ಅಲ್ಲದೇ, ಆರೋಪಿ ಹುಸೇನ್ ಅಬ್ದುಲ್ ಅಜೀಜ್ ಶೇಖ್‌ವಿವಿಧ ಹಂತಗಳಲ್ಲಿ ಈವರೆಗೆ 4-5 ಲಕ್ಷ ರೂ. ನೀಡಿದ್ದು ಬೆಳಕಿಗೆ ಬಂದಿದೆ. ಆ ನಂತರ ಆರೋಪಿ ಜೊತೆ ಮಹಿಳೆ ನಿರಂತರ ಸಂಪರ್ಕದಲ್ಲಿದ್ದಳು ಎಂದು ಮೂಲಗಳಿಂದ ತಿಳಿದುಬಂದಿದೆ. ಮಹಿಳೆಯ ತಂದೆ ಭಟ್ಕಳದಲ್ಲಿ ಐಸ್ ಕ್ರೀಮ್ ಪಾರ್ಲರ್ ನಡೆಸುತಿದ್ದಾರೆ.


Share News

Leave a Reply

Your email address will not be published. Required fields are marked *