Breaking News

ಬಂಟ್ವಾಳ: ಯುವತಿಗೆ ಕಿರುಕುಳ; ಪ್ರಕರಣ ದಾಖಲು

Share News

ಬಂಟ್ವಾಳ: ಬಿ.ಸಿ.ರೋಡು ಬಸ್‌ ನಿಲ್ದಾಣದಲ್ಲಿ ಬಸ್ಸನ್ನೇರುತ್ತಿದ್ದ ವೇಳೆ ಆರೋಪಿಯೋರ್ವ ಯುವತಿಯೊಬ್ಬಳ ಜತೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಬುಧವಾರ ನಡೆದಿದೆ.

ಇದನ್ನೂ ಓದಿ: ಶಾಸಕ ಹರೀಶ್ ಪೂಂಜಾ ಅಭಿಮಾನಿ ಸಹಿತ ಮೂವರನ್ನು ಅಮಾನತುಗೊಳಿಸಿದ ಬೆಳ್ತಂಗಡಿ ಬಿಜೆಪಿ!

ಬಿ.ಸಿ.ರೋಡಿನಿಂದ ಮಂಗಳೂರು ಕಡೆಗೆ ತೆರಳುವ ಬಸ್‌ ಹತ್ತುವಾಗ ಘಟನೆ ನಡೆದಿದ್ದು, ಅನುಚಿತ ವರ್ತನೆಯ ಕುರಿತು ಯುವತಿ ಪ್ರಶ್ನಿಸಿದ ವೇಳೆ ಮುಂದೆಯೂ ಹೀಗೆ ಮಾಡುತ್ತೇನೆ, ಏನು ಮಾಡುತ್ತೀಯಾ ಎಂದು ಉಡಾಫೆ ಉತ್ತರ ನೀಡಿದನು. ಬಳಿಕ ಬಸ್‌ ಮಂಗಳೂರು ಬಲ್ಲಾಳ್‌ಬಾಗ್‌ ತಲುಪಿದಾಗ ಇಬ್ಬರು ಬಂದು ಆರೋಪಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಮಾರ್ಬಲ್ ಲೋಡ್ ಇದ್ದ ಲಾರಿ ಪಲ್ಟಿ ; ಕಾರ್ಮಿಕರಿಗೆ ಗಂಭೀರ ಗಾಯ!

ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WATCH VIDEO ON YOUTUBE: ಪಾರಿವಾಳವನ್ನು ರಕ್ಷಿಸಲು ಹೋದ ಯುವಕರು ತೊಂದರೆಗೆ ಒಳಗಾದ ಮಂಗಳೂರಿನ ವಿಡಿಯೋ!


Share News

Leave a Reply

Your email address will not be published. Required fields are marked *