Breaking News

ಬಂಟ್ವಾಳ: ಅಮ್ಟಾಡಿ ಗ್ರಾ.ಪಂ ಕಾರ್ಯದರ್ಶಿ ನಾಪತ್ತೆ!

Share News

ಬಂಟ್ವಾಳ: ಅಮ್ಟಾಡಿ ಗ್ರಾಮಪಂಚಾಯತ್ ಗ್ರೇಡ್ 1 ಕಾರ್ಯದರ್ಶಿ ನಾಪತ್ತೆಯಾಗಿರುವ ಬಗ್ಗೆ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಆಚಾರ್ಯ ಎಂಬವರು ನಾಪತ್ತೆಯಾಗಿದ್ದು ಅವರ ಮೊಬೈಲ್ ವಾಲ್ಪಾಡಿಯ ಕೊಯ ಕ್ಕುಡೆ ಚಡಾವ್ ಎಂಬಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಪಂಚಾಯತ್ ಕಾರ್ಯದರ್ಶಿಯಾಗಿರುವ ಲಕ್ಷ್ಮೀನಾರಾಯಣ ಅವರ ನಾಪತ್ತೆ ಬಗ್ಗೆ ಅವರ ಪತ್ನಿ ವಂದನಾ ಪುಂಜಾಲಕಟ್ಟೆ ಪೋಲೀಸ್ ಠಾಣೆ ಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಅದರಂತೆ ಅವರ ಮೊಬೈಲ್ ಲೊಕೇಶನ್ ಹಾಕಿದಾಗ ವಾಲ್ಪಾಡಿ ಕೊಯಕುಡೆ ಚಡಾವ್ ತೋರಿಸುತ್ತಿದ್ದುದರಿಂದ ಪುಂಜಾಲ್ಕಟ್ಟೆ ಪೊಲೀಸರು ಮತ್ತು ಸಂಬಂಧಿಕರು ಹುಡುಕಾಡಿಕೊಂಡು ಬಂದಿದ್ದರು. ಅದರೆ ಅವರ ಮೊಬೈಲ್ ಮಾತ್ರ ರಸ್ತೆ ಬದಿ ಪತ್ತೆಯಾಗಿದ್ದು ಬೈಕ್ ನಲ್ಲಿ ಬಂದಿದ್ದ ಲಕ್ಷ್ಮೀನಾರಾಯಣ ಪತ್ತೆಯಾಗಿಲ್ಲ.

 ಕೆ.ಎ.-21 , EC 5599 ನಂಬರ್ ನ ಹೀರೊ ನೀಲಿ ಬಣ್ಣದ ಬೈಕ್ ನಲ್ಲಿ ಅವರು ಬಂದಿದ್ದರೆನ್ನಲಾಗಿದೆ‌ .ಮೊಬೈಲ್ ನ್ನು ವಾಲ್ಪಾಡಿಯಲ್ಲಿ ಎಸೆದು ಬೈಕ್ ನಲ್ಲಿ ಹೋಗಿರಬಹುದೆಂದು ಹೇಳಲಾಗುತ್ತಿದೆ. ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಸೆ. 8 ರಂದು ಅಮ್ಟಾಡಿ ಗ್ರಾ.ಪಂ‌‌.ನಲ್ಲಿ ಗ್ರಾಮ ಸಭೆನಡೆದ ಬಳಿಕ ಇವರು ತುಂಬಾ ಒತ್ತಡ ದಲ್ಲಿದ್ದರು ಎಂದು ಹೇಳಲಾಗಿದೆ. ಮಾನಸಿಕವಾಗಿ ನೊಂದುಕೊಂಡಿದ್ದ ಅವರು ಇತ್ತೀಚೆಗೆ ಬಹಳಷ್ಟು ಕುಗ್ಗಿ ಹೋಗಿದ್ದರು. ಇಲ್ಲಿನ ಪಿ.ಡಿ.ಒ.ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಇವರಿಗೆ ಹೆಚ್ಚವರಿಯಾಗಿ ಪಿ.ಡಿ.ಒ.ಹುದ್ದೆಯನ್ನು ನೀಡಲಾಗಿತ್ತು.

ಆದರೆ ಇವರು ಎರಡು ಹುದ್ದೆಯನ್ನು ನಿಭಾಯಿಸಲು ಸಾಧ್ಯವಾಗದೆ ನೊಂದುಕೊಂಡಿದ್ದರು ಎನ್ನಲಾಗಿದೆ.
ಒತ್ತಡದಿಂದ ಇವರು ಅನಾರೋಗ್ಯಕ್ಕೆ ತುತ್ತಾಗಿದ್ದಾರಾ? ಎಂಬ ಪ್ರಶ್ನೆಯನ್ನು ಹಾಕುತ್ತಿದ್ದಾರೆ.

ಅವರು ನಿನ್ನೆ ಅಂದರೆ ಸೆ. 12 ರಂದುಮಧ್ಯಾಹ್ನ 12 ಗಂಟೆವರೆಗೆ ಆಫೀಸಿಗೆ ಬರದ ಕಾರಣ ಇಲ್ಲಿನ ಸಿಬ್ಬಂದಿ ಪೋನ್ ಮಾಡಿದಾಗ ನನಗೆ ಹುಷಾರಿಲ್ಲ ಕೆಲವೊಂದು ಟೆಸ್ಟ್ ಗಳನ್ನು ಇಸಿಜಿ‌ಸಹಿತ ಇನ್ನೂ ಕೆಲವು ಪರೀಕ್ಷೆ ನಡೆಸಿ ಮತ್ತೆ ಬರುವುದಾಗಿ ತಿಳಿಸಿದ್ದರಂತೆ. ಆ ಬಳಿಕ ಅಫೀಸಿಗೆ ಬರದೆ ಮನೆಗೂ ಹೋಗದೆ ಪೋನ್ ಸ್ವೀಚ್ ಆಫ್ ಆಗಿದ್ದು ಪತ್ತೆಯಿಲ್ಲ ಎಂದು ಹೇಳಲಾಗಿದೆ.

ಪಡುಬಿದ್ರಿ : ಬಸ್ ಮತ್ತು ಬೈಕ್ ನಡುವೆ ಅಪಘಾತ ; ಯೂಟ್ಯೂಬರ್ ಅಶ್ವಿತ್ ಶೆಟ್ಟಿ ಸಾವು!

ವಿಟ್ಲ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಸಹೋದರರು

ಸಹೋದರರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಟ್ಲದಲ್ಲಿ ನಡೆದಿದೆ.ಮೈರ ಮೂಲದ ಕುದ್ದುಪದವು ನಿವಾಸಿ ಪವನ್ ಹಾಗೂ ಪೃಥ್ವಿರಾಜ್ ವಿಷ ಸೇವನೆ ಮಾಡಿದ ಸಹೋದರರು ಎಂದು ತಿಳಿದು ಬಂದಿದೆ.

ಎರಡು ಪ್ರತ್ಯೇಕ ತುರ್ತುವಾಹನಗಳ ಮೂಲಕ ಅಸ್ವಸ್ಥರನ್ನು ವಿಟ್ಲ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು, ಅವರಲ್ಲಿ ಓರ್ವ ಗಂಭೀರವಾಗಿದ್ದು, ಆತನನ್ನು ಮಂಗಳೂರು ಆಸ್ಪತ್ರೆಗೆ ಹಾಗೂ ಇನ್ನೋರ್ವನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.

ಸಹೋದರರ ತಂದೆ ಮೃತಪಟ್ಟಿದ್ದು, ತಾಯಿ ಮೈರದಲ್ಲಿ ವಾಸವಾಗಿದ್ದಾರೆ. ಇವರಿಬ್ಬರು ಅಜ್ಜಿ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.


Share News

Leave a Reply

Your email address will not be published. Required fields are marked *