Breaking News

ಅಯ್ಯಪ್ಪ ಮಾಲೆ ಧರಿಸಿ ಜನರಿಂದ ದೇಣಿಗೆ ಸಂಗ್ರಹ ; ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು!

Share News

ಬೆಳ್ತಂಗಡಿ (ಡಿ.8): ಅಯ್ಯಪ್ಪ ಮಾಲೆ ಧರಿಸಿ ಜನರಿಂದ ದೇಣಿಗೆ ಸಂಗ್ರಹಿಸುವ ಮೂಲಕ ವಂಚಿಸುತ್ತಿದ್ದ ನಕಲಿ ಅಯ್ಯಪ್ಪ ಮಾಲಾಧಾರಿಗಳನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: “ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಹೊಸ ಹೆಲ್ತ್ ಕಾರ್ಡ್ ಗೆ ಸಿಎಂ ಸಿದ್ದರಾಮಯ್ಯ ಚಾಲನೆ!

ಇಬ್ಬರು ಯುವಕರಿಂದ ವಂಚನೆ. ಬೆಂಗಳೂರು ಮೂಲದ ಸ್ವಾಮಿ ವಿವೇಕಾನಂದ ಸೊಷಿಯಲ್ ಸರ್ವಿಸ್ ಟ್ರಸ್ಟ್ (ರಿ) ಹೆಸರಿನಲ್ಲಿ ವಂಚಿಸುತ್ತಿದ್ದ ಆರೋಪಿಗಳು. ಈಗಾಗಲೇ ಹಲವು ಜನರಿಂದ ದೇಣಿಗೆ ಸಂಗ್ರಹಿಸಿದ್ದರು. ನಿನ್ನೆ ನಿಡ್ಲೆ ಗ್ರಾಮದ ಧನುಷ್ ಎಂಬುವವರಲ್ಲಿ ದೇಣಿಗೆ ಕೇಳಿದಾಗ ಅನುಮಾನಗೊಂಡಿರುವ ಧನುಷ್ ಆರೋಪಿಗಳು ನಡೆಸುತ್ತಿರುವ ಟ್ರಸ್ಟ್ ಬಗ್ಗೆ ಮಾಹಿತಿ ಕೇಳಿದ್ದಾನೆ. ಸಂಸ್ಥೆಯದ್ದೆಂದು ಹೇಳಲಾದ ಮೊಬೈಲ್ ನಂಬರ್‌ಗೆ ಕರೆ ಮಾಡಿ ವಿಚಾರಣೆ ನಡೆಸಿದ್ದ ಧನುಷ್ ಈ ವೇಳೆ ಬಯಲಾದ ಆರೋಪಿಗಳ ಕೃತ್ಯ.

ಇದನ್ನೂ ಓದಿ: ಮೂಲ್ಕಿ : ಭೀಕರ ಅಪಘಾತ ; ಸರ್ವೀಸ್ ರಸ್ತೆಗೆ ನುಗ್ಗಿದ ಲಾರಿ ;ಹಲವರಿಗೆ ಗಂಭೀರ ಗಾಯ!

ಆ ಸಂಸ್ಥೆಯವರು ಯಾರನ್ನೂ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಕಳಿಸಿಲ್ಲವೆಂದು ಧನುಷ್ ಕರೆಮಾಡಿದಾಗ ಸ್ಪಷ್ಟಪಡಿಸಿದ್ದಾರೆ. ಇದರಿಂದ ಅನುಮಾನಗೊಂಡು ಇನ್ನಷ್ಟು ಪ್ರಶ್ನೆ ಮಾಡಿರುವ ಯುವಕ. ಆರೋಪಿಗಳು ನಕಲಿ ಟ್ರಸ್ಟ್ ಮೂಲಕ ದೇಣಿಗೆ ಸಂಗ್ರಹಿಸುತ್ತಿರುವ ಕೃತ್ಯ ಬಯಲಾಗಿದೆ. ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕರನ್ನು ವಶಕ್ಕೆ ಪಡೆದುಕೊಂಡು ಸದ್ಯ ವಂಚನೆ ಕೇಸ್ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರಿಸಿರುವ ಪೊಲೀಸರು.

WATCH VIDEO ON YOUTUBE: ನಾಗನ ಆರಾಧನೆಯೊಂದಿಗೆ ಪ್ರಕೃತಿಯನ್ನು ಸಂರಕ್ಷಿಸುವ ಮುಖ್ಯ ಉದ್ದೇಶ ನಾಗಬನಗಳದ್ದು: ತಮ್ಮಣ್ಣ ಶೆಟ್ಟಿ


Share News

Leave a Reply

Your email address will not be published. Required fields are marked *