Breaking News

ಮಂಗಳೂರಿನ ಎಂಬಿಬಿಎಸ್ ವಿದ್ಯಾರ್ಥಿನಿ ಹಾಸ್ಟೆಲ್ ನ 6 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ..!

Share News

ಮಂಗಳೂರು, ನವೆಂಬರ್ 13: ಜೀವನದಲ್ಲಿ ಜಿಗುಪ್ಸೆಗೊಂಡು ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ನಗರದಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಇದನ್ನೂ ಓದಿ: ಜನಪ್ರಿಯ ಟಿವಿ ಸರಣಿ ಫೌಡಾ ಸಿಬ್ಬಂದಿ ಇಸ್ರೇಲ್ – ಗಾಜಾ ಯುದ್ಧದಲ್ಲಿ ಸಾವು!

ನಗರದ ಎಜೆ ಸಂಸ್ಥೆಯ ಎಂಬಿಬಿಎಸ್ ವಿದ್ಯಾರ್ಥಿನಿ ಪ್ರಕೃತಿ ಶೆಟ್ಟಿ (20 ವರ್ಷ) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ.ಸೋಮವಾರ ಬೆಳಗ್ಗಿನ ಜಾವಾ 3 ಗಂಟೆ ಸುಮಾರಿಗೆ ಮಹಿಳಾ ಹಾಸ್ಟೆಲ್‌ ನ ಆರನೇ ಮಹಡಿಯಿಂದ ಜಿಗಿದು ಪ್ರಕೃತಿ ಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 4 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ; ಸುಟ್ಟು ಕರಕಲಾದ ಬಿಲ್ಡಿಂಗ್!

ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಜೀವನದಲ್ಲಿ ಹತಾಶೆಗೊಂಡು ಈ ಕೃತ್ಯ ನಡೆಸಿರುವುದಾಗಿ ಬರೆಯಲಾಗಿದೆ. ಕದ್ರಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದು ತನಿಖೆ ಮುಂದುವರೆದಿದೆ.

WATCH VIDEO ON YOUTUBE: ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಮಹಿಷಾ ಮರ್ದಿನಿ ನೃತ್ಯ ರೂಪಕ


Share News

Leave a Reply

Your email address will not be published. Required fields are marked *