Breaking News

ಆಧಾರ್ ತಿದ್ದುಪಡಿ ಮಾಡಿ ಅಪ್ರಾಪ್ತೆಯೊಂದಿಗೆ ಮದುವೆ; ಗ್ರಾ.ಪಂ ಉಪಾಧ್ಯಕ್ಷನ ವಿರುದ್ಧ ದೂರು ದಾಖಲು!

Share News

ಮೈಸೂರು, ಸೆ.13: ಬಾಲ್ಯ ವಿವಾಹವನ್ನು  ತಡೆಯಬೇಕಿದ್ದವರೇ ಬಾಲ್ಯ ವಿವಾಹವಾಗುತ್ತಿದ್ದಾರೆ. ಹೌದು ಅಪ್ರಾಪ್ತೆಯ ಜೊತೆ ಗ್ರಾ.ಪಂ ಉಪಾಧ್ಯಕ್ಷ ಮದುವೆ(Marriage) ಮಾಡಿಕೊಂಡಿದ್ದು ಗ್ರಾಮಸ್ಥರೇ ದಾಖಲೆ ಸಮೇತ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆದೂರು ಸಲ್ಲಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಅರಿಯೂರು ಗ್ರಾಮಸ್ಥರು ದಾಖಲೆ ಸಮೇತ ದೂರು ನೀಡಿದ್ದು ಅಪ್ರಾಪ್ತೆ ಮದುವೆಯಾಗಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭಾರತದಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಈಗಲೂ ಅನೇಕ ಕಡೆ ಕದ್ದುಮುಚ್ಚಿ ಬಾಲ್ಯ ವಿವಾಹವನ್ನು ಮಾಡಲಾಗುತ್ತಿದೆ. ಆದರೆ ಮೈಸೂರಿನಲ್ಲಿ ಬಾಲ್ಯ ವಿವಾಹದ ವಿರುದ್ಧ ಹೋರಾಡಬೇಕಿದ್ದವರೇ ಬಾಲ್ಯ ವಿವಾಹವಾಗುತ್ತಿರುವುದು ಬೆಳಕಿಗೆ ಬಂದಿದೆ. ಹಾಡ್ಯ ಗ್ರಾ.ಪಂ ಉಪಾಧ್ಯಕ್ಷ ಹರೀಶ್ ಕುಮಾರ್ ಎಂಬುವವರು ಬಾಲಕಿಯ ಆಧಾರ್ ತಿದ್ದುಪಡಿ ಮಾಡಿಸಿ ಅಪ್ರಾಪ್ತೆಯನ್ನು ಮದುವೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಂಜನಗೂಡಿನ ಕಲ್ಯಾಣ ಮಂಟಪದಲ್ಲಿ ಅದ್ಧೂರಿ ವಿವಾಹವಾಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ದೂರು ನೀಡಿದ್ದಾರೆ.

ಗ್ರಾ.ಪಂ ಉಪಾಧ್ಯಕ್ಷ ಹರೀಶ್ 2023ರ ಫೆಬ್ರವರಿ 15ರಂದು ನಂಜನಗೂಡಿನ ಕಲ್ಯಾಣ ಮಂಟಪವೊಂದರಲ್ಲಿ ಮದುವೆಯಾಗಿದ್ದಾರೆ. ಶಾಲಾ ದಾಖಲಾತಿ ಪ್ರಕಾರ ಅಪ್ರಾಪ್ತೆಗೆ ಇನ್ನೂ 18 ವರ್ಷ ತುಂಬಿಲ್ಲ. ಹೀಗಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷನ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕ್ಯಾಪ್ಸೂಲ್ ಮಾತ್ರೆ ಮಾದರಿಯಲ್ಲಿ ಡ್ರಗ್ಸ್ ಸಾಗಾಟ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಮಹಿಳೆ

ಬೆಂಗಳೂರು, (ಸೆಪ್ಟೆಂಬರ್ 13): ಕ್ಯಾಪ್ಸೂಲ್ ಮಾತ್ರೆ ಮಾದರಿಯಲ್ಲಿ ಡ್ರಗ್ಸ್ (Drugs) ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ(Bengaluru Airport )ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿದ್ದಾರೆ. ಕ್ಯಾಪ್ಸೂಲ್ ಮಾತ್ರೆ ರೂಪದಲ್ಲಿ ವಿದೇಶದಿಂದ ಡ್ರಗ್ ಸಾಗಿಸುತ್ತಿದ್ದ​ ಕೀನ್ಯಾ ಮೂಲದ ಮಹಿಳೆಯನ್ನು (Kinya Woman) ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಬಳಿಕ NCB ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಇನ್ನು ಮಹಿಳೆ ಬಳಿ ಇದ್ದ ಬರೋಬ್ಬರಿ 1 ಕೆಜಿ 144 ಗ್ರಾಂ ಡ್ರಗ್ಸ್​​ ಜಪ್ತಿ ಮಾಡಿದ್ದಾರೆ.

ಅಥಿಸ್ ಅಬಬಾದಿಂದ ಬೆಂಗಳೂರಿಗೆ ಎಥಿಫಿಯನ್ ಏರ್​​ಲೈನ್ಸ್​ನಲ್ಲಿ ಬಂದ ಮಹಿಳೆಯನ್ನು ತಡೆದು ಪರಿಶೀಲಿಸಿದಾಗ ಕ್ಯಾಪ್ಸೂಲ್ ಮಾತ್ರೆ ಪತ್ತೆಯಾಗಿದೆ. ಗುಪ್ತಾಂಗದಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದಳು. ಬಳಿಕ ಎಲ್ಲಾ ಕ್ಯಾಪ್ಸೂಲ್ಸ್ ಹೊರತೆಗೆದು ಪರಿಶೀಲಿಸಿದಾಗ ಒಂದು ಕೆಜಿಗೂ ಅಧಿಕ ಡ್ರಗ್ಸ್ ಸಿಕ್ಕಿದೆ.


Share News

Leave a Reply

Your email address will not be published. Required fields are marked *