Breaking News

ಅಂಬಿಕಾಪತಿ ಆರ್ ಐಟಿ ದಾಳಿ ಬೆನ್ನಲ್ಲೇ ಮತ್ತೊರ್ವ ಗುತ್ತಿಗೆದಾರನ ಅಪಾರ್ಟ್ ಮೆಂಟ್ ಮೇಲೆ ಐಟಿ ದಾಳಿ, 40 ಕೋಟಿ ರೂ. ವಶ!

Share News

ಬೆಂಗಳೂರು: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಆರ್ ಅವರ ನಿವಾಸದಲ್ಲಿ 42 ಕೋಟಿ ರುಪಾಯಿ ಪತ್ತೆಯಾದ ಬೆನ್ನಲ್ಲೇ ಆದಾಯ ತೆರಿಗೆ (ಐಟಿ) ಇಲಾಖೆಯ ಅಧಿಕಾರಿಗಳು ಶನಿವಾರ ನಗರದಲ್ಲಿನ ಮತ್ತೋರ್ವ ಗುತ್ತಿಗೆದಾರರ ಅಪಾರ್ಟ್‌ಮೆಂಟ್‌ನಿಂದ  40 ಕೋಟಿ ರೂಪಾಯಿ ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ತೆರಿಗೆ ವಂಚನೆಗಾಗಿ ರೀಲರ್‌ಗಳು, ಚಿನ್ನಾಭರಣ ವ್ಯಾಪಾರಿಗಳು ಮತ್ತು ಗುತ್ತಿಗೆದಾರರ ಮೇಲೆ ದಾಳಿ ನಡೆಸುತ್ತಿರುವ ತಂಡ, ರಾಜಾಜಿನಗರದ ಕ್ಯಾತಮಾರನಹಳ್ಳಿಯಲ್ಲಿರುವ ಗುತ್ತಿಗೆದಾರ ಸಂತೋಷ್ ಎಂಬುವವರ ಅಪಾರ್ಟ್‌ಮೆಂಟ್‌ನಲ್ಲಿ ಶೋಧ ಕಾರ್ಯ ನಡೆಸಿದ್ದು, ಟ್ರಂಕ್‌ಗಳು, ಸೂಟ್‌ಕೇಸ್‌ಗಳು ಮತ್ತು ಬ್ಯಾಗ್‌ಗಳಲ್ಲಿ 500 ರೂ.ಗಳ ಕರೆನ್ಸಿಗಳ 40 ಕೋಟಿ ರೂ. ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: ಹಮಾಸ್ ಪರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಝಾಕೀರ್ ಬಂಧನ..!

ಹಣದ ಮೂಲದ ಬಗ್ಗೆ ಪ್ರಶ್ನಿಸಿದಾಗ, ಹಣದ ಒಂದು ಭಾಗ ಕಾಂಗ್ರೆಸ್ ಪಕ್ಷದ ಮಾಜಿ ಎಂಎಲ್‌ಸಿಗೆ ಸೇರಿದ್ದು ಎಂದು ಗುತ್ತಿಗೆದಾರರು ಹೇಳಿದ್ದಾರೆ. ಮಾಜಿ ಎಂಎಲ್‌ಸಿಯ ಸಹೋದರನನ್ನು ಅಪಾರ್ಟ್‌ಮೆಂಟ್‌ಗೆ ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

WATCH VIDEO ON YOUTUBE: ಸಾರ್ವಜನಿಕವಾಗಿ ಕಾಣಿಸಿಕೊಂಡ ನಟ ಸಂಜಯ್ ಕಪೂರ್!


Share News

Leave a Reply

Your email address will not be published. Required fields are marked *