Breaking News

ಶೂಟಿಂಗ್​ನಲ್ಲಿ ಇರುವಾಗ ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ಥಳಿಸಿದ ನಟ ನಾನಾ ಪಾಟೇಕರ್​; ವಿಡಿಯೋ ವೈರಲ್

Share News

ಬಾಲಿವುಡ್​ನ ಖ್ಯಾತ ನಟ ನಾನಾ ಪಾಟೇಕರ್​ (Nana Patekar) ಅವರು ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸೆಲ್ಫಿ ಕೇಳಲು ಬಂದ ಯುವಕನಿಗೆ ಅವರು ಹೊಡೆದಿದ್ದಾರೆ. ಸ್ಥಳದಲ್ಲಿ ಇದ್ದ ಜನರ ಮೊಬೈಲ್​ನಲ್ಲಿ ಈ ಕಹಿ ಘಟನೆಯ ದೃಶ್ಯ (Nana Patekar Viral Video) ಸೆರೆಯಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗಿದೆ. ನಾನಾ ಪಾಟೇಕರ್​ ಅವರ ವರ್ತನೆಯನ್ನು ಅನೇಕರು ಖಂಡಿಸಿದ್ದಾರೆ. ಅಭಿಮಾನದಿಂದ ಸೆಲ್ಫಿ ತೆಗೆದುಕೊಳ್ಳಲು ಬಂದ ಯುವಕನಿಗೆ ನಾನಾ ಪಾಟೇಕರ್​ ಈ ರೀತಿ ಮಾಡಿದ್ದು ಸರಿಯಲ್ಲ ಎಂದು ನೆಟ್ಟಿಗರು ಛಾಟಿ ಬೀಸುತ್ತಿದ್ದಾರೆ. ಈ ಬಗ್ಗೆ ನಾನಾ ಪಾಟೇಕರ್​ ಅವರು ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.

ಇದನ್ನೂ ಓದಿ: ಕುಮಾರಸ್ವಾಮಿ ಮನೆ ದೀಪಾಲಂಕಾರಕ್ಕೆ ಅಕ್ರಮ ವಿದ್ಯುತ್ ಸಂಪರ್ಕ ; ಕುಮಾರಸ್ವಾಮಿ ಸ್ಪಷ್ಟನೆ…!

ನಾನಾ ಪಾಟೇಕರ್​ ಅವರಿಗೆ ಸಖತ್​ ಬೇಡಿಕೆ ಇದೆ. ಬಾಲಿವುಡ್​ನಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಪೋಷಕ ಪಾತ್ರಗಳ ಮೂಲಕ ಅವರು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ವರ್ಷ ಬಿಡುಗಡೆ ಆದ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡಿದರು. ಅವರ ಜೊತೆ ಒಂದು ಫೋಟೋ ತೆಗೆದುಕೊಳ್ಳಬೇಕು ಎಂಬುದು ಎಲ್ಲ ಅಭಿಮಾನಿಗಳ ಆಸೆ. ಆದರೆ ಸೆಲ್ಫಿ ಕೇಳಲು ಬಂದು ಅಭಿಮಾನಿಗೆ ನಾನಾ ಪಾಟೇಕರ್​ ಅವರು ಹೊಡೆದು ಕಳಿಸಿರುವುದು ಸರಿಯಲ್ಲ ಎಂದು ಎಲ್ಲರೂ ಅಭಿಪ್ರಾಯ ತಿಳಿಸುತ್ತಿದ್ದಾರೆ.

ಸದ್ಯ ‘ಜರ್ನಿ’ ಸಿನಿಮಾದ ಶೂಟಿಂಗ್​ನಲ್ಲಿ ನಾನಾ ಪಾಟೇಕರ್​ ಅವರು ಬ್ಯುಸಿ ಆಗಿದ್ದಾರೆ. ವಾರಾಣಸಿಯಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಶೂಟಿಂಗ್​ನಲ್ಲಿ ಚಿತ್ರತಂಡ ತೊಡಗಿಕೊಂಡಿರುವಾಗ ಅಭಿಮಾನಿಯೊಬ್ಬರು ನಾನಾ ಪಾಟೇಕರ್​ ಜೊತೆ ಸೆಲ್ಫಿ ತೆಗೆದುಕೊಳ್ಳಲು ತೆರಳಿದ್ದಾರೆ. ಇದರಿಂದ ನಾನಾ ಪಾಟೇಕರ್​ಗೆ ತೀವ್ರ ಕೋಪ ಬಂದಿದೆ. ಸೆಲ್ಫಿ ಕೇಳಲು ಬಂದ ವ್ಯಕ್ತಿಯ ತಲೆಗೆ ಅವರು ಹೊಡೆದಿದ್ದಾರೆ. ಅಲ್ಲಿದೇ ಸೆಟ್​ನಲ್ಲಿದ್ದ ಬೇರೆ ಸಿಬ್ಬಂದಿ ಕೂಡ ಆ ಅಭಿಮಾನಿಯ ಕುತ್ತಿಗೆ ಹಿಡಿದು ಹೊರಗೆ ತಳ್ಳಿದ್ದಾರೆ. ಈ ಘಟನೆಗೆ ಎಲ್ಲರೂ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಅಪರಾಧಿಗೆ ಮರಣದಂಡನೆ

ಸೆಲೆಬ್ರಿಟಿಗಳ ಮೇಲೆ ಅಭಿಮಾನ ಇರಬೇಕು ನಿಜ. ಆದರೆ ಎಲ್ಲದಕ್ಕೂ ಮಿತಿ ಇರಬೇಕು. ಸಮಯ, ಸಂದರ್ಭ ನೋಡಿಕೊಂಡು ಸೆಲ್ಫಿ ಕೇಳಬೇಕು’ ಎಂದು ಕೆಲವರು ಕಮೆಂಟ್​ ಮಾಡುವ ಮೂಲಕ ನಾನಾ ಪಾಟೇಕರ್​ ಪರವಾಗಿ ಬ್ಯಾಟ್​ ಬೀಸಿದ್ದಾರೆ. ಇನ್ನುಳಿದವರು ನಾನಾ ಪಾಟೇಕರ್​ ಅವರನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ಈ ಮೊದಲು ಕೂಡ ಅನೇಕ ಸೆಲೆಬ್ರಿಟಿಗಳು ಅಭಿಮಾನಿಗಳ ಮೇಲೆ ಕೋಪ ತೋರಿಸಿದ್ದುಂಟು.

WATCH VIDEO ON YOUTUBE: ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಮಹಿಷಾ ಮರ್ದಿನಿ ನೃತ್ಯ ರೂಪಕ


Share News

Leave a Reply

Your email address will not be published. Required fields are marked *