Breaking News

20 ಲಕ್ಷ ಹಣ ಲಂಚ ಪಡೆಯುತ್ತಿದ್ದಾಗ ರೈಡ್; ಇಡಿ ಅಧಿಕಾರಿ ಅರೆಸ್ಟ್..!

Share News

ತಮಿಳುನಾಡು, ಡಿಸೆಂಬರ್ 02: ಸರ್ಕಾರಿ ನೌಕರನಿಂದ 20 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಯನ್ನು ಇದೀಗ ಮಧುರೈ ಇಡಿ ಇಲಾಖೆ ಬಂಧಿಸಲಾಗಿದ್ದು, ಘಟನೆ ತಮಿಳುನಾಡಿನ ದಿಂಡಿಗಲ್‌ನಲ್ಲಿ ವರದಿಯಾಗಿದೆ.

ಇದನ್ನೂ ಓದಿ: SSLC ಮತ್ತು ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ…!

ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯ (DVSC) ಡಿಸೆಂಬರ್ 1 ರಂದು ಜಾರಿ ನಿರ್ದೇಶನಾಲಯದ (ED) ಮಧುರೈ ಕಚೇರಿ ಮೇಲೆ ಏಕಾಏಕಿ ದಾಳಿ ನಡೆಸಿತು. ಈ ಕ್ರಮವು ದಿಂಡಿಗಲ್‌ನಲ್ಲಿ ಇಡಿ ಅಧಿಕಾರಿ ಅಂಕಿತ್ ತಿವಾರಿ ಬಂಧಿಸಲು ಕಾರಣವಾಗಿದ್ದು, ಇದರ ಬೆನ್ನಲ್ಲೇ ಡಿವಿಎಸಿ ದಿಂಡುಗಲ್‌ನಲ್ಲಿರುವ ಅಂಕಿತ್ ನಿವಾಸದಲ್ಲೂ ಕೂಡ ತೀವ್ರ ಶೋಧ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.

20 ಲಕ್ಷ ಹಣವನ್ನು ಲಂಚವಾಗಿ ಸ್ವೀಕರಿಸುತ್ತಿದ್ದ ಅಂಕಿತ್ ಇದೀಗ ಇಡಿ ಅಧಿಕಾರಿಗಳ ವಶದಲ್ಲಿದ್ದು, ಹೆಚ್ಚಿನ ವಿಚಾರಣೆಗೆ ಒಳಗಾಗಿದ್ದಾರೆ. ಶುಕ್ರವಾರ ದಿಂಡಿಗಲ್‌ನಲ್ಲಿ ವೈದ್ಯರೊಬ್ಬರಿಂದ 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಅಂಕಿತ್‌ನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಪ್ರಸ್ತುತ ಜಾರಿ ನಿರ್ದೇಶನಾಲಯ ಅಧಿಕಾರಿಯಾಗಿ ಅಂಕಿತ್ ತಿವಾರಿ ಅವರ ಸ್ಥಾನಮಾನದ ಸತ್ಯಾಸತ್ಯತೆಯನ್ನು ತನಿಖೆ ನಡೆಸುತ್ತಿದೆ ಮತ್ತು ಆರೋಪಿಯ ರುಜುವಾತುಗಳನ್ನು ದೃಢೀಕರಿಸುವ ಅಧಿಕೃತ ಹೇಳಿಕೆಯನ್ನು ಸದ್ಯ ನಿರೀಕ್ಷಿಸಲಾಗಿದೆ.

ಪೊಲೀಸರ ಪ್ರಕಾರ, ಅಂಕಿತ್ ಮತ್ತು ಆತನ ಸಹಚರರು ಬೆದರಿಕೆ ಮತ್ತು ಸುಲಿಗೆಯಲ್ಲಿ ತೊಡಗಿದ್ದರು, ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ಮುಕ್ತಾಯಗೊಳಿಸುವ ಆಮಿಷವೊಡ್ಡಿ ಅವರಿಂದ ಲಂಚವನ್ನು ಕೇಳುತ್ತಿದ್ದರು. ಸುಳಿವಿನ ನಂತರ ಈಗ ಅಂಕಿತ್‌ನನ್ನು ಮಧುರೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

WATCH VIDEO ON YOUTUBE: ನಾಗನ ಆರಾಧನೆಯೊಂದಿಗೆ ಪ್ರಕೃತಿಯನ್ನು ಸಂರಕ್ಷಿಸುವ ಮುಖ್ಯ ಉದ್ದೇಶ ನಾಗಬನಗಳದ್ದು: ತಮ್ಮಣ್ಣ ಶೆಟ್ಟಿ


Share News

Leave a Reply

Your email address will not be published. Required fields are marked *