Breaking News

ನಿಲ್ದಾಣದಿಂದ ಹಾರಾಟ ನಡೆಸಿದ ಕೆಲವೇ ನಿಮಿಷದಲ್ಲಿ ವಿಮಾನದ ಬಾಗಿಲು ದಿಢೀರ್​​​​​​​ ಓಪನ್ ; 171 ಪ್ರಯಾಣಿಕರು ಸೇಫ್.!

Share News

ಅಲಾಸ್ಕಾ ಏರ್‌ಲೈನ್ಸ್​​​ನ (Alaska Airlines) ಬೋಯಿಂಗ್ ಕಂ. 737 ಮ್ಯಾಕ್ಸ್ ಜೆಟ್ ಯುನೈಟೆಡ್ ಸ್ಟೇಟ್ಸ್‌ನ ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಬೋಯಿಂಗ್ ಕಂ. 737 ಮ್ಯಾಕ್ಸ್ ವಿಮಾನ, ಪೋರ್ಟ್‌ಲ್ಯಾಂಡ್‌ ನಿಲ್ದಾಣದಿಂದ ಹಾರಾಟ ನಡೆಸಿದ ಕೆಲವೇ ನಿಮಿಷದಲ್ಲಿ ಇದರ ಬಾಗಿಲು ದಿಢೀರ್​​​​​​​ ಓಪನ್​​ ಆಗಿದೆ. ಇದನ್ನು ಗಮನಿಸಿದ ಪೈಲಟ್​​​ ತಕ್ಷಣ ವಿಮಾನವನ್ನು ಅದೇ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದಾರೆ. ಇದೀಗ ಈ ಬಗ್ಗೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿದೆ.

ಇದನ್ನೂ ಓದಿ: ರಾಜ್ಯದ ಜನರಿಗೆ ಮತ್ತೊಮ್ಮೆ ವಿದ್ಯುತ್‌ ಬೆಲೆಯೇರಿಕೆಯ ಬಿಸಿ ತಾಗುವ ಸಾಧ್ಯತೆ

ಈ ವಿಮಾನದಲ್ಲಿ 171 ಪ್ರಯಾಣಿಕರಿದ್ದು, 6 ವಿಮಾನ ಸಿಬ್ಬಂದಿಗಳಿದ್ದರು. ಪೈಲೆಟ್​​​​ ಸೇರಿದಂತೆ ಎಲ್ಲರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ. ವಿಮಾನದ ಮಧ್ಯದ ಕ್ಯಾಬಿನ್​​​​ ನಿರ್ಗಮದ ಬಾಗಿಲು ತೆರೆದುಕೊಂಡಿದೆ. ವಿಮಾನ ಹಾರಾಟ ನಡೆಸುತ್ತಿದ್ದ ಕಾರಣ ಜೋರಾಗಿ ಬೀಸುತ್ತಿದ್ದ ಗಾಳಿಗೆ ಆ ಬಾಗಿಲು ವಿಮಾನದಿಂದ ಬೇರ್ಪಟ್ಟಿದೆ.

ಇದನ್ನೂ ಓದಿ: ಸುಳ್ಯ: ಅಡಿಕೆಗೆ ಹಳದಿ ರೋಗ; ಮನನೊಂದು ಕೃಷಿಕ ನೇಣು ಬಿಗಿದು ಆತ್ಮಹತ್ಯೆ

ಇನ್ನು ಈ ಘಟನೆ ಬಗ್ಗೆ ವಿಮಾನದಲ್ಲಿದ್ದ ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಅಲಾಸ್ಕಾ ಏರ್‌ಲೈನ್ಸ್ ತಿಳಿಸಿದೆ. ಈ ಘಟನೆ ವೇಳೆ ವಿಮಾನವು ಭೂಮಿಯಿಂದ 16,325 ಅಡಿ ಎತ್ತರದಲ್ಲಿತ್ತು ಎಂದು ಹೇಳಲಾಗಿದೆ. ಇನ್ನು ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. 2023ರಲ್ಲಿ ವಿಮಾನದಲ್ಲಿ ಅಸುರಕ್ಷಿತ ಘಟನೆಗಳು ನಡೆದಿದೆ. ಇದೀಗ 2024ರಲ್ಲೂ ಇಂತಹ ಕೆಲವೊಂದು ಘಟನೆಗಳು ನಡೆದಿದೆ.

ಇತ್ತೀಚೆಗೆ ಜಪಾನ್​​​ನ ಟೋಕಿಯೊ ಹನೆಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಚಲಿಸುತ್ತಿದ್ದ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಕೋಸ್ಟ್ ಗಾರ್ಡ್ ವಿಮಾನದಲ್ಲಿದ್ದ 5 ಮಂದಿ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಈ ವಿಮಾನದಲ್ಲಿ 300ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.

WATCH VIDEO ON YOUTUBE: ನೀರಿಗೆ ಬಿದ್ದಿದ್ದಾನೆಂದು ಭಾವಿಸಿ ವ್ಯಕ್ತಿ ಒಬ್ಬರನ್ನು ರಕ್ಷಿಸಲು ಮುಂದಾದ ಆನೆ!

 


Share News

Leave a Reply

Your email address will not be published. Required fields are marked *