Breaking News

ಉಳ್ಳಾಲ : ಬಾವಿಗೆ ಹಾರಿ ಗೂಡ್ಸ್ ರಿಕ್ಷಾ ಚಾಲಕ ಆತ್ಮಹತ್ಯೆಗೆ ಶರಣು!

Share News

ಮಂಗಳೂರು ಸೆಪ್ಟೆಂಬರ್ 27: ಗೂಡ್ಸ್ ರಿಕ್ಷಾ ಚಾಲಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೊಕ್ಕೊಟ್ಟು ಒಳಪೇಟೆಯ ಸಂತ ಸೆಬೆಸ್ತಿಯನ್ನರ ಚರ್ಚ್ ಬಳಿ ನಡೆದಿದೆ. ಮೃತರನ್ನು ತೊಕ್ಕೊಟ್ಟು ಕೃಷ್ಣ ನಗರದ ಲಚ್ಚಿಲ್ ನಿವಾಸಿ ನಾಗೇಶ್ (62) ಎಂದು ಗುರುತಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಮತ್ತು ತಮಿಳುನಾಡಿಗೆ ಮಾತ್ರ ಪ್ರಧಾನಿ ಅಲ್ಲ ; ಶೋಭಾ ಕರಂದ್ಲಾಜೆ

ನಾಗೇಶ್ ಗೂಡ್ಸ್ ಆಟೋ ಟೆಂಪೊ ಚಲಾಯಿಸುತ್ತಿದ್ದರು.ಟೆಂಪೋವನ್ನ ನಾಗೇಶ್ ಅವರು ಒಳಪೇಟೆಯ ಚರ್ಚ್ ಮುಂಭಾಗದ ಗಣೇಶ್ ಭವನ ಹೊಟೇಲು ಮಾಲಕರ ಮನೆಯಂಗಳದಲ್ಲೇ ದಿನನಿತ್ಯವೂ ರಾತ್ರಿ ನಿಲ್ಲಿಸುತ್ತಿದ್ದರು. ಇಂದು ಬೆಳಿಗ್ಗೆ ನಾಗೇಶ್ ಅವರು ಟೆಂಪೋ ತೆಗೆಯದೆ ನಾಪತ್ತೆಯಾಗಿದ್ದು ಸಂಪರ್ಕಕ್ಕೆ ಸಿಕ್ಕಿರಲಿಲ್ಲ.ಗಣೇಶ್ ಭವನ ಮಾಲಕರ ಮನೆಯಂಗಳದಲ್ಲೇ ನಿಲ್ಲಿಸಲಾಗಿದ್ದ ಟೆಂಪೋ ಸೀಟಲ್ಲಿ ನಾಗೇಶ್ ಅವರ ಮೊಬೈಲ್,ನಗದು ,ಫೋಟೊ,ಚಪ್ಪಲಿ ದೊರಕಿದ್ದು ಅನುಮಾನ ಗೊಂಡ ಮನೆ ಮಂದಿ, ಸ್ಥಳೀಯರು ಬಾವಿಯಲ್ಲಿ ಹುಡುಕಾಟ ನಡೆಸಿದ್ದಾರೆ.

ಇನ್‌ಸ್ಟಾ ಗ್ರಾಂ ಮೆಸೇಜ್‌ನಲ್ಲಿ ಎಂದು 16ರ ಬಾಲಕನನ್ನು ತಲ್ವಾರ್‌ನಿಂದ ಕಡಿದು ಕೊಂದ ಸ್ನೇಹಿತರು!

ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳಿಂದ ಬಾವಿಯಲ್ಲಿ ನಾಗೇಶ್ ದೇಹವಿರುವುದು ಖಾತ್ರಿಯಾಗಿದ್ದು ಮೃತ ದೇಹವನ್ನ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

101 ಕೋಟಿ ಷೇರು ಮೌಲ್ಯ ಹೊಂದಿರುವ ಈ ವ್ಯಕ್ತಿಯ ಸರಳ ಜೀವನ ಒಮ್ಮೆ ನೋಡಿ…!


Share News

Leave a Reply

Your email address will not be published. Required fields are marked *