Breaking News

ಉಳ್ಳಾಲ : ನೇಣು ಬಿಗಿದು ಯುವಕ ಆತ್ಮಹತ್ಯೆಗೆ ಶರಣು!

Share News

ಉಳ್ಳಾಲ ಸೆಪ್ಟೆಂಬರ್ 05: ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಲಪಾಡಿಯ ನಾರ್ಲಾದಲ್ಲಿ ನಡೆದಿದೆ.

ಮೃತ ಯುವಕನನ್ನು ತಲಪಾಡಿ ಗ್ರಾಮದ ನಾರ್ಲ ಪದವು ನಿವಾಸಿ ಪೈಝಲ್(24) ಎಂದು ಗುರುತಿಸಲಾಗಿದ್ದು. ಫೈಝಲ್ ಇಂದು ಬೆಳಗ್ಗೆ ತನ್ನ ಮನೆಯ ಮೊದಲ ಅಂತಸ್ತಿನ ಕೊಠಡಿಯ ಫ್ಯಾನಿಗೆ ನೈಲಾನ್ ಬಟ್ಟೆಯಿಂದ ಕುಣಿಕೆ ಬಿಗಿದು ಆತ್ಮಹತ್ಯೆಗೈದಿದ್ದಾನೆ. ಮನೆಯಲ್ಲಿ ಫೈಸಲ್ ತಾಯಿ, ತಂಗಿ ಮತ್ತು ಅಜ್ಜಿ ಇದ್ದು ತಾಯಿ ಮನೆಯ ಮೇಲಿನ ಅಂತಸ್ತಿಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೈದಿರುವುದಾಗಿ ತಿಳಿದುಬಂದಿದೆ.

ಮಂಗಳೂರು:ಜೆಸಿಬಿ ಬದಲು ಕಾರಿನ ದಾಖಲೆ ನೀಡಿ ಸಾಲ ಪಡೆದು ವಂಚನೆ!

ಜೆಸಿಬಿ ವಾಹನದ ದಾಖಲೆ ಎಂದು ನಂಬಿಸಿ ಕಾರಿನ ದಾಖಲೆಗಳನ್ನು ಹಾಜರುಪಡಿಸಿ ಸಾಲ ಪಡೆದು ಸಹಕಾರಿ ಸಂಘಕ್ಕೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಪದವು ಗ್ರಾಮದ ಪ್ರೀತಂ ಆರೋಪಿ. ಈತ 2018ರ ಜ.20ರಂದು ನೀರುಮಾರ್ಗದ ಸಹಕಾರಿ ಸಂಘದಲ್ಲಿ ವಾಹನದ ಮೇಲೆ ಸಾಲ ಪಡೆದುಕೊಳ್ಳಲಿ ಜೆಸಿಬಿ ದಾಖಲೆಗಳನ್ನು ಹಾಜರುಪಡಿಸಿದ್ದ. 7 ಲಕ್ಷ ರೂ. ಸಾಲ ಪಡೆದು ಮಾಸಿಕ 13,400 ರೂ ಕಂತುಗಳನ್ನು 7 ತಿಂಗಳುಗಳ ಕಾಲ ಕ್ರಮಬದ್ದವಾಗಿ ಪಾವತಿಸಿದ್ದ.

ಉಳಿದ ಕಂತುಗಳನ್ನು ಮರುಪಾವತಿಸದೇ ಇದ್ದಾಗ ಸಹಕಾರಿ ಸಂಘದವರು ವಾಹನದ ದಾಖಲೆಗಳನ್ನು ಆರ್ ಟಿ ಒ ಕಚೇರಿಯಲ್ಲಿ ಪರಿಶೀಲಿಸಿದರು. ಆಗ ಆರೋಪಿ ಸಂಘಕ್ಕೆ ಜೆಸಿಬಿ ವಾಹನಗಳ ದಾಖಲೆ ಹಾಜರುಪಡಿಸಿರುವುದು ಗೊತ್ತಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share News

Leave a Reply

Your email address will not be published. Required fields are marked *