Breaking News

ಉಡುಪಿ: ಸಿಡಿಲು ಬಡಿದು ಯುವಕ ಸಾವು!

Share News

ಉಡುಪಿ/ಮೈಸೂರು: ರಾಜ್ಯದ ವಿವಿಧೆಡೆ ಭಾನುವಾರ ಗುಡುಗು- ಮಿಂಚು, ಗಾಳಿ ಸಹಿತ (Karnataka Weather) ಮಳೆಯಾಗಿದೆ. ಉಡುಪಿಯಲ್ಲಿ ನಿನ್ನೆ ಸಿಡಿಲು ಬಡಿದು ಯುವಕನೊರ್ವ ಮೃತಪಟ್ಟಿದ್ದಾನೆ. ಬ್ರಹ್ಮಾವರ ತಾಲೂಕಿನ ಮಂದಾರ್ತಿ ಆವರ್ಸೆ ಬಳಿ ಪ್ರಮೋದ್ ಶೆಟ್ಟಿ ಸಿಡಿಲು ಬಡಿದು ಮೃತಪಟ್ಟ ದುರ್ದೈವಿ.

ಇದನ್ನೂ ಓದಿ: ಅಂದ್ರಪ್ರದೇಶದಲ್ಲಿ ಎರಡು ರೈಲುಗಳ ನಡುವೆ ಡಿಕ್ಕಿ ; ಸಾವಿನ ಸಂಖ್ಯೆ 14 ಕ್ಕೆ ಏರಿಕೆ – 100 ಕ್ಕೂ ಅಧಿಕ ಮಂದಿಗೆ ಗಾಯ!

ಪ್ರಮೋದ್‌ ಹೊರಗೆ ಇದ್ದಾಗ ಒಮ್ಮೆಲೆ ಭಾರಿ ಮಳೆ ಶುರುವಾಗಿದೆ. ಹೀಗಾಗಿ ಮರದಡಿ ಆಸರೆ ಪಡೆದಿದ್ದ. ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಒಮ್ಮೆಲೆ ಪ್ರಮೋದ್‌ಗೆ ಸಿಡಿಲು ಬಡಿದಿದೆ. ಗಂಭೀರ ಗಾಯಗೊಂಡಿದ್ದ ಪ್ರಮೋದ್‌ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ!

ಬಿರು ಮಳೆಗೆ ಬಾಳೆಗೆ ಹಾನಿ

ಮೈಸೂರಿನ ಹುಣಸೂರು ತಾಲೂಕಿನ ಬಿ ಆರ್ ಕಾವಲು ಗ್ರಾಮದಲ್ಲೂ ಬಿರುಗಾಳಿ ಮಳೆಗೆ ಬಾಳೆ ಬೆಳೆ ಹಾನಿಯಾಗಿದೆ. ಭಾನುವಾರ ರಾತ್ರಿ ಬೀಸಿದ ಬಿರುಗಾಳಿ ಮಳೆಗೆ ಬಿ.ಆರ್.ಕಾವಲು ಗ್ರಾಮದ ಚಿನ್ನಸ್ವಾಮಿ ಅವರಿಗೆ ಸೇರಿದ ಎರಡು ಎಕರೆ, ಪ್ರಕಾಶ್ ಅವರ ಒಂದು ಎಕರೆ ಬಾಳೆಬೆಳೆ ಸಂಪೂರ್ಣ ನಾಶವಾಗಿದೆ. ವರ್ಷವಿಡಿ ದುಡಿದು ಬೆಳೆದ ಬೆಳೆ ಒಂದೇ ರಾತ್ರಿಯಲ್ಲಿ ನೆಲಸಮವಾಯ್ತು ಎಂದು ಅಸಮಾಧಾನ ಹೊರಹಾಕಿದರು. ಮಳೆ ಬಂದರೂ ಕಷ್ಟ, ಬಾರದೆ ಇದ್ದರೂ ನಷ್ಟ ಎಂಬಂತಾಗಿದೆ ಎಂದರು.

WATCH VIDEO ON YOUTUBE: ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಮಹಿಷಾ ಮರ್ದಿನಿ ನೃತ್ಯ ರೂಪಕ


Share News

Leave a Reply

Your email address will not be published. Required fields are marked *