Breaking News

ಭಾರತದ ಮೊಟ್ಟ ಮೊದಲ ಬುಲೆಟ್‌ ರೈಲು ಟರ್ಮಿನಲ್‌ನ ವೀಡಿಯೋ ಭಾರೀ ವೈರಲ್‌!

Share News

ಗಾಂಧಿನಗರ: ಅಹ್ಮದಾಬಾದ್‌ನಲ್ಲಿ ನಿರ್ಮಾಣಗೊಂಡಿರುವ ಭಾರತದ ಮೊಟ್ಟ ಮೊದಲ ಬುಲೆಟ್‌ ರೈಲು ಟರ್ಮಿನಲ್‌ನ ವೀಡಿಯೋವನ್ನು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಂಡಿರುವ ಟರ್ಮಿನಲ್‌ನ ವೀಡಿಯೋ ಭಾರೀ ವೈರಲ್‌ ಆಗಿದ್ದು, ನಿರ್ಮಾಣ ವೈಖರಿಗೆ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಅಹ್ಮದಾಬಾದ್‌ ಹಾಗೂ ಮುಂಬಯಿ ನಡುವೆ ಸಂಚಾರ ಕಲ್ಪಿಸಲಿರುವ ಬುಲೆಟ್‌ ರೈಲಿಗಾಗಿ ಈ ಟರ್ಮಿನಲ್‌ ನಿರ್ಮಾಣಗೊಂಡಿದೆ.

ಇದನ್ನೂ ಓದಿ: “ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಹೊಸ ಹೆಲ್ತ್ ಕಾರ್ಡ್ ಗೆ ಸಿಎಂ ಸಿದ್ದರಾಮಯ್ಯ ಚಾಲನೆ!

ಗಂಟೆಗೆ ಸರಿಸುಮಾರು 350 ಕಿ.ಮೀ. ವೇಗದಲ್ಲಿ ಚಲಿಸಲಿರುವ ಬುಲೆಟ್‌ ರೈಲು ಈ ಎರಡೂ ನಗರಗಳ ನಡುವಿನ ಪ್ರಯಾಣ ಸಮಯವನ್ನು 2 ಗಂಟೆ ಕಡಿಮೆಯಾಗಿಸಲಿದೆ. ಎಕ್ಸ್‌ನಲ್ಲಿ “ಭಾರತದ ಬುಲೆಟ್‌ ಟ್ರೈನ್‌ಗೆ ಟರ್ಮಿನಲ್‌’ ಎನ್ನುವ ತಲೆಬರಹ ನೀಡಿ ವೈಷ್ಣವ್‌ ವೀಡಿಯೋ ಹಂಚಿಕೊಂಡಿದ್ದಾರೆ.

WATCH VIDEO ON YOUTUBE: ನಾಗನ ಆರಾಧನೆಯೊಂದಿಗೆ ಪ್ರಕೃತಿಯನ್ನು ಸಂರಕ್ಷಿಸುವ ಮುಖ್ಯ ಉದ್ದೇಶ ನಾಗಬನಗಳದ್ದು: ತಮ್ಮಣ್ಣ ಶೆಟ್ಟಿ


Share News

Leave a Reply

Your email address will not be published. Required fields are marked *