Breaking News

ಶಾಲಾ ಬಸ್ ಹಾಗೂ ಆಟೋ ರಿಕ್ಷಾ ನಡುವೆ ಭೀಕರ ಅಪಘಾತ; ಐವರ ದುರ್ಮರಣ

Share News

ಪೆರ್ಲ : ಶಾಲಾ ಬಸ್ಸು ಹಾಗೂ ಆಟೋ ರಿಕ್ಷಾ ಮಧ್ಯೆ ಡಿಕ್ಕಿಯಾಗಿ ಮೂವರು ಸಹೋದರಿಯರ ಸಹಿತ ಐವರು ಮೃತಪಟ್ಟ ಘಟನೆ ಬದಿಯಡ್ಕ ಸಮೀಪದ ಪಳ್ಳತ್ತಡ್ಕದಲ್ಲಿ ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ನಡೆದಿದೆ. ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರಿನ ಮೂವರು ಸಹೋದರಿಯರು ಹಾಗೂ ಇನ್ನೊರ್ವ ಕುಟುಂಬ ಸದಸ್ಯೆ ಮಹಿಳೆ ಆಟೋ ರಿಕ್ಷಾವೊಂದರಲ್ಲಿ ಪಳ್ಳತ್ತಡ್ಕ ಬಳಿಯ ಸಂಬಂಧಿಕರ ಮನೆಗೆ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಪಿಎಸ್‌ಐ ಅಕ್ರಮ ನೇಮಕಾತಿ: ಎಡಿಜಿಪಿ ಅಮೃತ್‌ ಪೌಲ್‌ಗೆ ಬೇಲ್‌

ತಾಯಲಂಗಡಿ ನಿವಾಸಿ ಪ್ರಸ್ತುತ ಮೊಗ್ರಾಲಿನ ನಿವಾಸಿ ರಿಕ್ಷಾ ಚಾಲಕ ಮತ್ತು ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳನ್ನು ಪೆರ್ಲದ ಅವರವರ ಮನೆಗೆ ಬಿಟ್ಟು ಬಸ್ಸು ವಾಪಸ್ಸು ಮಾನ್ಯಕ್ಕೆ ಬರುತ್ತಿದ್ದ ವೇಳೆ ಪಳ್ಳತ್ತಡ್ಕದ ಸಮೀಪ ಗುಳಿಗ ಬನದ ಸಮೀಪದ ತಿರುವಿನಲ್ಲಿ ನಡೆದಿದೆ.

ಶುದ್ಧ ಗಾಣದ ಎಣ್ಣೆ ತೆಗೆಯುವ ಕಟಪಾಡಿಯ ಮಿಲ್!

ಮಾನ್ಯದ ಅಂಗ್ಲ ಮಾಧ್ಯಮ ಶಾಲೆಗೆ ಸೇರಿದ ಬಸ್ಸು ಹಾಗೂ ಮೊಗ್ರಾಲ್ ಪುತ್ತೂರಿನ ಆಟೋ ರಿಕ್ಷಾದ ಮಧ್ಯೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಆಟೋದಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಆಟೋ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಇಂದು ಬೆಂಗಳೂರು ಬಂದ್; ಅನೇಕ ಸಂಘಟನೆಗಳಿಂದ ಬೆಂಬಲ – ಇಲ್ಲಿದೆ ಮಾಹಿತಿ


Share News

Leave a Reply

Your email address will not be published. Required fields are marked *