Breaking News

ಪ್ರತಿಮಾ ಕೊಲೆ ಕೇಸ್, ಆರೋಪಿ ಕಿರಣ್ ತಪ್ಪೊಪ್ಪಿಗೆ!

Share News

ಬೆಂಗಳೂರು, ನವೆಂಬರ್​​​​ 06: ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾರನ್ನು ಕೊಲೆ (Pratima murder case) ಮಾಡಿರುವುದಾಗಿ ಆರೋಪಿ ಕಿರಣ್‌ ಒಪ್ಪಿಕೊಂಡಿದ್ದಾನೆ ಎಂದು ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್‌ಕುಮಾರ್ ಶಹಾಪುರ್‌ವಾಡ್‌​ ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲಸ ಕಳೆದುಕೊಂಡ ಬಳಿಕ ಊರು ಬಿಟ್ಟಿದ್ದ ಕಿರಣ್​, 1 ತಿಂಗಳ ಬಳಿಕ ಬೆಂಗಳೂರಿಗೆ ಬಂದು ಪ್ರತಿಮಾರನ್ನು ಕೊಲೆಗೈದಿದ್ದಾನೆ. ಮೊದಲು ವೇಲ್‌ನಿಂದ ಬಿಗಿದು ಬಳಿಕ ಕುತ್ತಿಗೆ ಕೊಯ್ದು ಕೊಲೆಗೈದಿದ್ದಾನೆ. ಮಲೆಮಹದೇಶ್ವರ ಬೆಟ್ಟದಲ್ಲಿ ಆರೋಪಿ ಕಿರಣ್‌ನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ತನಿಖೆ ಕೈಗೊಂಡಾಗ ಕಾರು ಚಾಲಕ ಕಿರಣ್‌ ಬಗ್ಗೆ ಅನುಮಾನ ಬಂದಿತ್ತು. 2 ತಿಂಗಳ ಹಿಂದೆ ಕಿರಣ್‌ನನ್ನು ಕೆಲಸದಿಂದ ಪ್ರತಿಮಾ ತೆಗೆದು ಹಾಕಿದ್ದರು. ಕೆಲಸದಿಂದ ತೆಗೆದುಹಾಕಿದ ಬಳಿಕ ಕಿರಣ್​ಗೆ ಸಂಪಾದನೆ ಇಲ್ಲವೆಂದು ಪತ್ನಿಯೂ ಮನೆ ಬಿಟ್ಟು ಹೋಗಿದ್ದಳು. ಮಾಹಿತಿ ಬಂದ ತಕ್ಷಣ ಎಸಿಪಿ, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಚರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಜನಪ್ರಿಯ ಕಿರುತೆರೆ ನಟಿ ಹುಮೈರಾ ಹಿಮು ಸಾವು

ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು 

ಕೊಲೆ ಕೇಸ್​ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಪ್ರತಿಮಾ ಕೊಲೆ ಪ್ರಕರಣದ ಓರ್ವ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆತ ಕೊಲೆಯಾದ ಮಹಿಳಾ ಅಧಿಕಾರಿಗೆ ಡ್ರೈವರ್ ಆಗಿದ್ದವನು. ಇತ್ತೀಚೆಗೆ ಅವನನ್ನು ಕೆಲಸದಿಂದ ತೆಗೆದುಹಾಕಿದ್ದರು ಅನ್ಸುತ್ತೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಸುಬ್ರಮಣ್ಯಪುರ ಪೊಲೀಸರಿಂದ ತನಿಖೆ ಚುರುಕುಗೊಳಿಸಿದ್ದು, ವಿಷೇಶ ತಂಡಗಳ ರಚನೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ಹಲವು ಮಾದರಿಗಳನ್ನು ಸೀನ್ ಆಫ್ ಕ್ರೈಮ್ ತಂಡ ಸಂಗ್ರಹ ಮಾಡಿದೆ. ಮನೆಗೆ ಬಲವಂತವಾಗಿ ನುಗ್ಗಿ ಹತ್ಯೆ ಮಾಡಿ ದೋಚಿಲ್ಲಾ. ಸಾಮಾನ್ಯವಾಗಿ ಒಂಟಿ ಮಹಿಳೆ ಹತ್ಯೆ ಪ್ರಕರಣದಲ್ಲಿ ಹೀಗೆ ನಡೆದಿರತ್ತೆ. ಆದರೆ ಪ್ರತಿಮಾ ಪ್ರಕರಣದಲ್ಲಿ ಹೀಗೆ ಆಗಿಲ್ಲಾ. ಪೋರ್ಸ್ಡ್ ಎಂಟ್ರಿ ಇಲ್ಲದ ಕಾರಣ ಪರಿಚಿತರ ಮೇಲೆ ಅನುಮಾನ ಪಡಲಾಗುತ್ತಿದೆ.

ಇದನ್ನೂ ಓದಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯ ಬರ್ಬರ ಕೊಲೆ!

ಗೊತ್ತಿರುವವರೇ ತಮ್ಮ ದ್ವೇಷದಕ್ಕೆ ಕೃತ್ಯೆ ಎಸಗಿರುವ ಸಾಧ್ಯತೆ ಇದೆ. ಹಲವಾರು ಆಯಾಮಗಳಲ್ಲಿ ಪ್ರಕರಣದ ತನಿಖೆ ಮಾಡಲಾಗುತ್ತಿದೆ. ವೈಯಕ್ತಿಕ ಜೀವನ, ವೃತ್ತಿ ಜೀವನ, ಹಣಕಾಸು (ಆರ್ಥಿಕ) ಜೀವನ ಈ ಮೂರು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕವಾಗಿ ಪರಿಚತರಿಂದಲೇ ಕೃತ್ಯ ಇರುವ ಶಂಕೆ ವ್ಯಕ್ತವಾಗಿದೆ. ನಿತ್ಯ ಪ್ರತಿಮಾ ಸಂಪರ್ಕದಲ್ಲಿ ಇರ್ತಿದ್ದವರಿಂದ ಕೃತ್ಯ ಎಸಗಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿವೆ ಎನ್ನಲಾಗುತ್ತಿದೆ.

WATCH VIDEO ON YOUTUBE:ಶುದ್ಧ ಗಾಣದ ಎಣ್ಣೆ ತೆಗೆಯುವ ಕಟಪಾಡಿಯ ಮಿಲ್!


Share News

Leave a Reply

Your email address will not be published. Required fields are marked *