Breaking News

ಮಂಗಳೂರು: ಕದ್ರಿಯಲ್ಲಿ ಇಳಿ ವಯಸ್ಸಿನ ಇಬ್ಬರು ಸಹೋದರಿಯರು ನೇಣು ಬಿಗಿದು ಆತ್ಮಹತ್ಯೆಗೆ ಶರಣು..!

Share News

ಮಂಗಳೂರು: ಇಳಿ ವಯಸ್ಸಿನ ಇಬ್ಬರು ಸಹೋದರಿಯರು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರು ನಗರದ ಕದ್ರಿ ಕಂಬಳದ ಚಂದ್ರಿಕಾ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.

ಚರ್ಚ್ ಪಾದ್ರಿ ಬಿಜೆಪಿ ಸೇರ್ಪಡೆ: ಕರ್ತವ್ಯದಿಂದ ಅಮಾನತು!

ಲತಾ ಭಂಡಾರಿ (70) ಮತ್ತು ಸುಂದರಿ ಶೆಟ್ಟಿ (80) ಜೀವಾಂತ್ಯ ಮಾಡಿಕೊಂಡ ಸಹೋದರಿಯರು ಆಗಿದ್ದಾರೆ. 78ರ ಹರೆಯದ ಜಗನ್ನಾಥ್ ಭಂಡಾರಿ ಮತ್ತವರ ಪತ್ನಿ ಲತಾ ಭಂಡಾರಿ ಹಾಗೂ ಲತಾ ಭಂಡಾರಿಯ ಅಕ್ಕ ಸುಂದರಿ ಶೆಟ್ಟಿ ಎಂಬವರು ಈ ಮನೆಯಲ್ಲಿ ವಾಸಿಸುತ್ತಿದ್ದರು. ಎಂದಿನಂತೆ ಜಗನ್ನಾಥ್ ಭಂಡಾರಿ ಕೆಲಸಕ್ಕೆ ಹೋದವರು ಸಂಜೆ 4:30ರ ವೇಳೆಗೆ ಮನೆಗೆ ತೆರಳಿದಾಗ ಇಬ್ಬರು ಸಹೋದರಿಯರು ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಐವರ ಬಂಧನ!

ಜಗನ್ನಾಥ ಭಂಡಾರಿ ಮನೆಗೆ ತೆರಳಿದಾಗ ಮನೆಯ ಬಾಗಿಲು ಮುಚ್ಚಲ್ಪಟ್ಟಿತ್ತು. ಕಿಟಕಿಯಿಂದ ನೋಡಿದಾಗ ಸಹೋದರಿಯರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ ಎನ್ನಲಾಗಿದೆ. ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ, ಕದ್ರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಪಾರಿವಾಳವನ್ನು ರಕ್ಷಿಸಲು ಹೋದ ಯುವಕರು ತೊಂದರೆಗೆ ಒಳಗಾದ ಮಂಗಳೂರಿನ ವಿಡಿಯೋ!


Share News

Leave a Reply

Your email address will not be published. Required fields are marked *